SBI: SBI ನಲ್ಲಿ ಖಾತೆ ಇದ್ದವರಿಗೆ ಬಂಪರ್ ಯೋಜನೆ ಬಿಡುಗಡೆ, 5 ಲಕ್ಷ ಇಟ್ಟರೆ ಸಿಗಲಿದೆ 10 ಲಕ್ಷ.

SBI ನಲ್ಲಿ ಖಾತೆ ಹೊಂದ್ದಿರುವ ಜನರಿಗೆ ಇನ್ನೊಂದು ವಿಶೇಷ ಯೋಜನೆ ಪರಿಚಯಿಸಿದ SBI.

SBI FD Scheme: ಪ್ರತಿಷ್ಠಿತಾ ಸರ್ಕಾರಿ ಬ್ಯಾಂಕ್ ಆಗಿರುವ ಎಸ್ ಬಿಐ (SBI) ಇದೀಗ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ. ಇತ್ತೀಚೆಗಂತೂ ಬ್ಯಾಂಕ್ ಗಳ ನಿಯಮದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹೊಸ ನಿಯಮಗಳ ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ ಹೊಸ ಸೌಲಭ್ಯಗಳನ್ನು ಕೂಡ ಒದಗಿಸುತ್ತಿದೆ. ಇದೀಗ ಎಸ್ ಬಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ಒದಗಿಸಲು ನಿರ್ಧರಿಸಿದೆ.

New scheme launched for SBI account holders
Image Credit: Indiatvnews

ಎಸ್ ಬಿಐ ಗ್ರಾಹಕರಿಗೆ ಸಿಹಿ ಸುದ್ದಿ
ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಎಸ್ ಬಿ ಐ ತನ್ನ ಗ್ರಾಹಕರಿಗಾಗಿ ಹೊಸ ಠೇವಣಿ ಯೋಜನೆಯನ್ನು ಜಾರಿಗೆ ತಂದಿದೆ. ಎಸ್ ಬಿಐ ನ ಈ ಠೇವಣಿ ಯೋಜನೆಯಲ್ಲಿ ನೀವು ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು.

ಹೆಚ್ಚಿನ ಜನರು ತಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡಲು ಬಯಸುತ್ತಾರೆ. ಅಂತಹ ಜನರಿಗೆ ಇದೀಗ ಎಸ್ ಬಿಐ ಬ್ಯಾಂಕ್ ಅವಕಾಶವನ್ನು ಮಾಡಿಕೊಟ್ಟಿದೆ. ನೀವು ಎಸ್ ಬಿಐ ಗ್ರಾಹಕರಿಗಾಗಿದ್ದರೆ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಯೋಜನೆಯಲ್ಲಿ ಹೂಡಿಕೆ ಆರಂಭಿಸಿ ಹೆಚ್ಚಿನ ಲಾಭವನ್ನು ಪಡೆಯಿರಿ.

SBI ನಲ್ಲಿ ಖಾತೆ ಇದ್ದವರಿಗೆ ಬಂಪರ್ ಯೋಜನೆ ಬಿಡುಗಡೆ
ಹಿರಿಯ ನಾಗರಿಕರಿಗೆ ವೃದ್ಧಪಾಯದಲ್ಲಿ ಅನುಕೂಲವಾಗಲು ಎಸ್ ಬಿಐ ಇದೀಗ ಹೊಸ ಹೂಡಿಕೆಯ ಯೋಜನೆಯನ್ನು ಪರಿಚಯಿಸಿದೆ. ಎಸ್ ಬಿಐನ FD ಯೋಜನೆಗಳು (SBI FD Scheme) ಗ್ರಾಹಕರಿಗೆ ಗರಿಷ್ಟ ಪ್ರಮಾಣದಲ್ಲಿ ಬಡ್ಡಿಯನ್ನು ನೀಡುತ್ತದೆ. ಎಫ್ ಡಿ ಯೋಜನೆಯ ಅಡಿಯಲ್ಲಿ ಶೇ. 7.50 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಈ ಬಡ್ಡಿಯು 7 ದಿನಗಳಿಂದ 10 ವರ್ಷಗಳ ವರೆಗಿನ ಅವಧಿಗೆ ಲಭ್ಯವಿದೆ.

If you invest only 5 lakhs, you will get 10 lakhs
Image Credit: Livemint

ಕೇವಲ 5 ಲಕ್ಷ ಹೂಡಿಕೆ ಮಾಡಿದರೆ ಸಿಗಲಿದೆ 10 ಲಕ್ಷ
ಎಸ್ ಬಿಐ FD ಯೋಜನೆಯಡಿ ವೃದ್ಧರಿಗೆ 0.50% ಹೆಚ್ಚು ಬಡ್ಡಿ ನೀಡಲಾಗುತ್ತದೆ. ನೀವು ಎಸ್ ಬಿಐ FD ಯೋಜನೆಯಲ್ಲಿ 10 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಹೂಡಿಕೆಯ ದುಪ್ಪಟ್ಟು ಲಾಭವನ್ನು ಪಡೆಯಬಹುದು. ಕೇವಲ 5 ಲಕ್ಷ ಹೂಡಿಕೆ ಮಾಡಿದರೆ 10 ವರ್ಷಗಳಲ್ಲಿ ಶೇ.7 .50 ಬಡ್ಡಿದರದಲ್ಲಿ ನಿಮಗೆ 5,51,175 ರೂ. ಬಡ್ಡಿ ಲಭಿಸುತ್ತದೆ. 10 ವರ್ಷಗಳ ಮೆಚ್ಯುರಿಟಿ ಅವಧಿಯ ನಂತರ ನೀವು ಬರೋಬ್ಬರಿ 10,51,175 ರೂ. ಗಳ ಲಾಭವನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group