SBI Gold Loan: ಚಿನ್ನ ಅಡವಿಟ್ಟು ಸಾಲ ಪಡೆಯುವವರಿಗೆ SBI ನಿಂದ ಗುಡ್ ನ್ಯೂಸ್, ಅತೀ ಕಡಿಮೆ ಬಡ್ಡಿಗೆ ಸಾಲ.
ಚಿನ್ನ ಅಡವಿಟ್ಟು ಸಲ ಮಾಡುವವರಿಗೆ ಗುಡ್ ನ್ಯೂಸ್ ನೀಡಿದ ಭಾರತೀಯ ಸ್ಟೇಟ್ ಬ್ಯಾಂಕ್.
SBI Gold Loan Interest Rate: ಸರ್ಕಾರೀ ಸ್ವಾಮ್ಯದ ಬ್ಯಾಂಕ್ ಆಗಿರುವ State Bank Of India ದೇಶದ ಅತಿದೊಡ್ಡ ಬ್ಯಾಂಕ್ ಆಗಿದೆ. SBI ಜನರಿಗೆ ಹಲವಾರು ರೀತಿಯ ಸೇವೆಗಳನ್ನು ಒದಗಿಸುತ್ತಿದೆ. SBI ತನ್ನ ಗ್ರಾಹಕರಿಗೆ ವಿವಿಧ ರೀತಿಯ ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಇದೀಗ ಚಿನ್ನವನ್ನು ಅಡವಿಟ್ಟು SBI ನಲ್ಲಿ ಸಾಲ ಪಡೆಯುವವರಿಗೆ ಸಿಹಿ ಸುದ್ದಿ ಲಭಿಸಿದೆ.
Gold Loan
ಇನ್ನು ಸಾಲಗಾರರು ನಿಗದಿತ ಸಮಯಕ್ಕೆ ಬಡ್ಡಿ ಪಾವತಿಸಬೇಕು ಎನ್ನುವ ಕಾರಣಕ್ಕೆ ಬ್ಯಾಂಕುಗಳು ಈ ರೀತಿಯಗಾಗಿ ಚಿನ್ನವನ್ನು ಒತ್ತೆ ಇಟ್ಟುಕೊಳ್ಳುತ್ತದೆ. ಈ ರೀತಿ ಸಾಲವನ್ನು ಪಡೆಯುವುದು ಒಂದು ರೀತಿಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ. ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಸಾಲಕ್ಕೆ ಬಡ್ಡಿದರ ಕಡಿಮೆ ಇರುತ್ತದೆ.
ಚಿನ್ನದ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಿದ SBI
ಹೌದು ಇದೀಗ ದೇಶದ ಅತೀದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ SBI ವೈಯಕ್ತಿಕ ಚಿನ್ನದ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ಈ ಮೊದಲು 7.75 ರಷ್ಟು ಇದ್ದ ವಾರ್ಷಿಕ ಬಡ್ಡಿದರವನ್ನು ಈಗ 7.50 ಕ್ಕೆ ಇಳಿಸಿದೆ.
ಬಡ್ಡಿದರಗಳನ್ನು ಕಡಿಮೆ ಮಾಡುವುದರ ಜೊತೆಗೆ SBI ಚಿನ್ನದ ಸಾಲಗಳ ಸಂಸ್ಕರಣಾ ಶುಲ್ಕವನ್ನು ಸಹ ಕಡಿತಗೊಳಿಸಿದೆ. SBI ಈಗ ಬ್ಯಾಂಕ್ ಸಾಲದ ಮೊತ್ತದ 0 .25% + GST ಯನ್ನು ಸಂಸ್ಕರಣಾ ಶುಲ್ಕವಾಗಿ ತೆಗೆದುಕೊಳ್ಳುತ್ತಿದೆ. ಇದು ಕನಿಷ್ಠ 250 + GST. ಆದರೆ Yono App ನಲ್ಲಿ ಅರ್ಜಿ ಸಲ್ಲಿಸುವವರಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಗ್ರಾಹಕರು ಚಿನ್ನದ ಮೌಲ್ಯದ ಶೇ. 90 ರಷ್ಟು ಈಗ ಸಾಲ ಪಡೆಯಬಹುದು. ಆಗಸ್ಟ್ ತಿಂಗಳಗಿಂತ ಮೊದಲು ಚಿನ್ನದ ಮೇಲೆ ಶೇ. 75 ರಷ್ಟು ಸಾಲ ನೀಡಲಾಗುತ್ತಿತ್ತು. ಆದರೆ ಆಗಸ್ಟ್ ತಿಂಗಳ ನಂತರ RBI ಚಿನ್ನದ ಆಭರಣಗಳ ಮೇಲಿನ ಸಾಲದ ಮೌಲ್ಯವನ್ನು ಹೆಚ್ಚಿಸಿದೆ. ಗ್ರಾಹಕರು ಚಿನ್ನದ ಮೇಲೆ ತೆಗೆದುಕೊಂಡ ಸಾಲವನ್ನು 36 ತಿಂಗಳಲ್ಲಿ ಮರುಪಾವತಿಸಬೇಕಾಗುತ್ತದೆ. ಕನಿಷ್ಠ ಸಾಲದ ಮೊತ್ತ 20 ಸಾವಿರ ರೂಪಾಯಿ ಹಾಗೂ ಗರಿಷ್ಠ ಸಾಲದ ಮೊತ್ತ 50 ಲಕ್ಷ ರೂಪಾಯಿ ಆಗಿದೆ.