SBI Loan: ಗೃಹಸಾಲ ಮತ್ತು ವಾಹನ ಸಾಲ ಮಾಡುವವರಿಗೆ SBI ನಿಂದ ಗುಡ್ ನ್ಯೂಸ್, ಭರ್ಜರಿ ರಿಯಾಯಿತಿ.

ಇದೀಗ SBI ನಿಮಗೆ ಗೃಹ ಸಾಲ ಹಾಗು ವಾಹನ ಸಾಲ ಪಡೆಯಲು ಉತ್ತಮ ಅವಕಾಶವನ್ನು ನೀಡುತ್ತಿದೆ.

SBI Home Loan And Car Loan Interest: ಸರ್ಕಾರೀ ಬ್ಯಾಂಕ್ ಗಳು ಕಡಿಮೆ ಬಡ್ಡಿದರದಲ್ಲಿ ಗ್ರಾಹಕರಿಗೆ ಗೃಹ ಸಾಲವನ್ನು ನೀಡುತ್ತದೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ವಿವಿಧ ಸರಕಾರಿ ಬ್ಯಾಂಕುಗಳಲ್ಲಿ ಸಾಲದ ಬಡ್ಡಿದರ ವಿಭಿನ್ನವಾಗಿರುತ್ತದೆ. ಸದ್ಯ ಗೃಹ ಸಾಲವನ್ನು ಪಡೆಯಲು ಉತ್ತಮ ಬ್ಯಾಂಕ್ ಎಂದರೆ SBI ಎನ್ನಬಹುದು. ಇದೀಗ ಸರ್ಕಾರೀ ಸ್ವಾಮ್ಯದ ಬ್ಯಾಂಕ್ ಆಗಿರುವ State Bank Of India ಗೃಹ ಸಾಲದ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.

SBI ಗೃಹಸಾಲ ಹಾಗೂ ವಾಹನ ಸಾಲದ ಮೇಲೆ ಬಂಪರ್ ರಿಯಾಯಿತಿಯನ್ನು ಘೋಷಸಿದೆ.ಹಬ್ಬದ ಸೀಸನ್ ಬಂದ ಕಾರ್ ವಿವಿಧ ವಾಹನ ಕಂಪನಿಗಳು ವಾಹನಗ ಮೇಲೆ ಆಕರ್ಷಕ ಹಣಕಾಸು ಯೋಜನೆಯನ್ನು ಪರಿಚಯಿಸುತ್ತವೆ. ಹಾಗೆಯೆ ಹಬ್ಬದ ಸಮಯದಲ್ಲಿ ಘೋಶ ಮನೆ ಖರೀದಿ ಅಥವಾ ನಿಮಿಸಬೇಕೆಂದು ಸಾಕಷ್ಟು ಜನರು ಬಯಸುತ್ತಾರೆ. ಇದೀಗ SBI ನಿಮಗೆ ಗೃಹಸಾಲ ಹಾಗು ವಾಹನ ಸಾಲ ಪಡೆಯಲು ಉತ್ತಮ ಅವಕಾಶವನ್ನು ನೀಡುತ್ತಿದೆ.

SBI Car Loan Interest
Image Credit: Caknowledge

SBI Car Loan ಬಂಪರ್ ರಿಯಾಯಿತಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ ಲೋನ್‌ಗಳ ಮೇಲೆ ಶೂನ್ಯ ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತದೆ. ಈ ಕೊಡುಗೆಗಳ ವಿವರಗಳನ್ನು ಬ್ಯಾಂಕ್‌ನ ಅಧಿಕೃತ ವೆಬ್‌ ಸೈಟ್‌ನಲ್ಲಿ ನೀಡಲಾಗಿದೆ. ಈ ಕೊಡುಗೆಯ ಅಡಿಯಲ್ಲಿ ಕಾರುಗಳ ಮೇಲೆ ಲೋನ್ ಪಡೆದರೆ ಲೋನ್ ಪ್ರೊಸೆಸಿಂಗ್ ಶುಲ್ಕವನ್ನು ಮುಂಗಡವಾಗಿ ಪಾವತಿಸಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಕೊಡುಗೆಯು ಜನವರಿ 31, 2024 ರ ವರೆಗೆ ಲಭ್ಯವಿರುತ್ತದೆ. ಶೂನ್ಯ ಸಂಸ್ಕರಣಾ ಶುಲ್ಕಗಳ ಜೊತೆಗೆ ವಾಹನ ಸಾಲಗಳು ಕಡಿಮೆ ಬಡ್ಡಿ ದರಗಳು, ತ್ವರಿತ ಅನುಮೋದನೆ ಮತ್ತು 100 ಪ್ರತಿಶತದಷ್ಟು ಹಣಕಾಸು ಒದಗಿಸುತ್ತವೆ. ಬ್ಯಾಂಕ್ ವಿವಿಧ ಬ್ರ್ಯಾಂಡ್‌ ಗಳ ಮೇಲೆ ನಿರ್ದಿಷ್ಟ ಕೊಡುಗೆಗಳನ್ನು ವಿಸ್ತರಿಸುತ್ತದೆ. ಕಾರು ಸಾಲಗಳ ಮೇಲಿನ SBI ಬಡ್ಡಿ ದರಗಳು 8.8 ಪ್ರತಿಶತದಿಂದ 9.7 ಪ್ರತಿಶತದ ವರೆಗೆ ಇರುತ್ತದೆ.

SBI Home Loan Interest
Image Credit: Antworksmoney

SBI ನಲ್ಲಿ ಪಡೆಯಿರಿ ಕಡಿಮೆ ಬಡ್ಡಿದರದಲ್ಲಿ Home Loan
ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI ತನ್ನ ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ಒದಗಿಸುತ್ತದೆ. ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ರಿಯಾಯಿತಿಯನ್ನು ಪಡೆಯಲು ಗ್ರಾಹಕರಿಗೆ ಇಂದಿನ ಅವಕಾಶವನ್ನು ನೀಡಿದೆ. ನೀವು SBI ಯಿಂದ ಗೃಹ ಸಾಲವನ್ನು ಪಡೆಯಲು ಬಯಸಿದರೆ ನೀವು ಗೃಹ ಸಾಲದ ಬಡ್ಡಿಯಲ್ಲಿ 65 bps ವರೆಗೆ ರಿಯಾಯಿತಿಯನ್ನು ಪಡೆಯಬಹುದು.

Join Nadunudi News WhatsApp Group

ಸಾಲದ ಬಡ್ಡಿದರಕ್ಕೆ ರಿಯಾಯಿತಿ ಲಭ್ಯ
ಸಂಸ್ಕರಣಾ ಶುಲ್ಕ ಮತ್ತು ಹೋಮ್ ಲೋನ್ ರಿಯಾಯಿತಿಯ ಕೊನೆಯ ದಿನಾಂಕ 31 December 2023 ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೆಬ್‌ಸೈಟ್ ಪ್ರಕಾರ, ಸಂಸ್ಕರಣಾ ಶುಲ್ಕದಲ್ಲಿ 50 ರಿಂದ 100 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ನಿಯಮಿತ ಗೃಹ ಸಾಲ, ಫ್ಲೆಕ್ಸಿಪೇ, ಎನ್‌ ಆರ್‌ ಐ ಮತ್ತು ಸಂಬಳೇತರ ಗೃಹ ಸಾಲದ ಮೇಲೆ ಈ ರಿಯಾಯಿತಿಯನ್ನು ನೀಡಲಾಗುತ್ತಿದೆ. ಬ್ಯಾಂಕ್ ಪ್ರಕಾರ, ಎಲ್ಲಾ HAL ಮತ್ತು ಟಾಪ್ ಅಪ್ ಆವೃತ್ತಿಗಳಿಗೆ ಕಾರ್ಡ್ ದರದಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡಲಾಗಿದೆ ಹಾಗೂ ಜಿಎಸ್‌ ಟಿಯಲ್ಲೂ ವಿನಾಯಿತಿ ನೀಡಲಾಗಿದೆ.

Join Nadunudi News WhatsApp Group