SBI Green Finance: ಮನೆ ಕಟ್ಟುವವರಿಗೆ SBI ನಿಂದ ಹೊಸ ನಿಯಮ ಘೋಷಣೆ, ಈ ನಿಯಮ ಪಾಲಿಸದಿದ್ದರೆ ಸಿಗಲ್ಲ ಗೃಹಸಾಲ.
ಇದೀಗ SBI ತನ್ನ ಗೃಹ ಸಾಲದ ನಿಯಮದಲ್ಲಿ ಮತ್ತೊಂದು ಬದಲಾವಣಯನ್ನು ತರಲು ಮುಂದಾಗಿದೆ.
SBI Home Loan New Rule: ದೇಶದ ಜನಪ್ರಿಯ ಸರ್ಕಾರೀ ಬ್ಯಾಂಕ್ ಆಗಿರುವ State Bank Of India ಇತ್ತೀಚಿಗೆ ತನ್ನ ಬ್ಯಾಂಕ್ ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದೆ. SBI ಗ್ರಾಹಕರು ಬ್ಯಾಂಕ್ ನ ಬದಲಾದ ನಿಯಮಗಳ ಬಗ್ಗೆ ಮಾಹಿತಿಯನ್ನು ತಿಳಿಯಬೇಕಿದೆ.
ಇನ್ನು ಬ್ಯಾಂಕ್ ತನ್ನ ನಿಯಮಗಳ ಬದಲಾವಣೆಯ ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ ವಿವಿಧ ಸೌಲಭ್ಯವನ್ನು ನೀಡುತ್ತಿದೆ. ಇನ್ನು ಇತ್ತೀಚೆಗಷ್ಟೇ ಬ್ಯಾಂಕ್ ತನ್ನ ಗೃಹ ಸಾಲದ ನಿಯಮದಲ್ಲಿ ಕೂಡ ದೊಡ್ಡ ಬದಲಾವಣೆಯನ್ನು ತಂದಿದೆ. ಇದೀಗ SBI ತನ್ನ ಗೃಹ ಸಾಲದ ನಿಯಮದಲ್ಲಿ ಮತ್ತೊಂದು ಬದಲಾವಣಯನ್ನು ತರಲು ಮುಂದಾಗಿದೆ.
SBI Home Loan New Rule
SBI ವಸತಿ ಯೋಜನೆಗಳಿಗೆ ಗೃಹಸಾಲ ಯೋಜನೆಗಳಲ್ಲಿ ಸೋಲಾರ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. SBI ಗ್ರೀನ್ ಫೈನಾನ್ಸ್ ಅಡಿಯಲ್ಲಿ ಗೃಹಸಾಲ ಪಡೆದವರಿಗೆ ಈ ನಿಯಮ ಅನ್ವಹಿಸುತ್ತದೆ. SBI ಹೊಸ ನಿಯಮದಡಿ, ಬಿಲ್ಡರ್ ನಿರ್ಮಾಣ ಹಂತದಲ್ಲಿರುವ ಮನೆಯ ಛಾವಣಿಯ ಮೇಲೆ ಸೌರ ವಿದ್ಯುತ್ ವ್ಯವಸ್ಥೆಯನ್ನು ಅಳವಡಿಸಬೇಕಾಗುತ್ತದೆ. SBI ನಲ್ಲಿ ಗೃಹ ಸಾಲವನ್ನು ಪಡೆದವರು ಈ ನಿಯಮದ ಬಗ್ಗೆ ತಿಳಿಯುವುದು ಉತ್ತಮ.
SBI Green Finance
SBI ನ ಗ್ರೀನ್ ಫೈನಾನ್ಸ್ ಸ್ಕೀಮ್ ಯೋಜನೆಯು ಉತ್ತಮ ಉದ್ದೇಶವನ್ನು ಹೊಂದಿದೆ. ಈ ಯೋಜನೆಯು ಮರಗಳನ್ನು ನೆಡುವುದು, ಶೌಚಾಲಯಗಳ ನಿರ್ಮಾಣ, ಸೌರದೀಪಗಳು, ಸ್ವಚ್ಛ ವಾತಾವರಣದ ಚಟುವಟಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ವಿಶ್ವಬ್ಯಾಂಕ್ 2016 ರಲ್ಲಿ ಸೌರ ಛಾವಣಿಗಳಿಗೆ ಹಣಕಾಸನ್ನು ನೀಡಲು ಪ್ರಾರಂಭಿಸಿದೆ. ಇದರ ಆಧಾರದ ಮೇಲೆ ವಿಶ್ವದ ಪ್ರಮುಖ ಕಂಪನಿಗಳಿಗೆ ಹಣವನ್ನು ನೀಡಲಾಗುತ್ತದೆ.
ಸಾಲವನ್ನು ಒದಗಿಸುವ ಮೂಲಕ ಗ್ರಾಹಕರನ್ನು ಕ್ಲಿನ್ ಕೈಮೇಟ್ ಅಭಿಯಾನಗಳೊಂದಿಗೆ ಸಂಪರ್ಕಿಸುದು ಇದರ ಉದ್ದೇಶವಾಗಿದೆ. State Bank Of India ಜೂನ್ ನ ವರೆಗೆ ಸುಮಾರು 6.3 ಕೋಟಿ ಸಾಲಕ್ಕೆ ಅನುಮೋದನೆ ನೀಡಿದೆ. ವಿಶ್ವಬ್ಯಾಂಕ್, ಏಷಿಯನ್ ಡೆವಲಪಮೆಂಟ್ ಬ್ಯಾಂಕ್ ಮತ್ತು ಜರ್ಮನಿಯ KFW ನಂತಹ ಬಹುಪಕ್ಷೀಯ ಸಂಸ್ಥೆಗಳಿಂದ SBI $2.3 ಶತಕೋಟಿ ವಿದೇಶಿ ಕರೆನ್ಸಿ ಸಾಲಗಳನ್ನು ಬಾಕಿ ಉಳಿಸಿಕೊಂಡಿವೆ.
SBI ಸಾಲದ ಅವಧಿಗಳು ಎಷ್ಟಿರುತ್ತದೆ
ಈ ಸಾಲಗಳು 10 ವರ್ಷಗಳು ಅಥವಾ 20 ವರ್ಷಗಳ ಅವಧಿಗೆ ಬರುತ್ತದೆ. ಇದು ಸಾಲ ಪಡೆಯುವ ಬ್ಯಾಂಕ್ ಗೆ ವಿದೇಶಿ ವಿನಿಮಯ ಅಪಾಯವನ್ನು ಉಂಟು ಮಾಡುತ್ತದೆ. ದಿರ್ಘವದಿಯ ವಿದೇಶಿ ಕರೆನ್ಸಿ ಸಾಲಗಳಲ್ಲಿ ಒಳಗೊಂಡಿರುವ ಅಪಾಯಗಳನ್ನು ಗಮದಲ್ಲಿಟ್ಟುಕೊಂಡು, ಅಶ್ವಿನಿ ಕುಮಾರ್ ತಿವಾರಿ ಅವರು ಬಹುಪಕ್ಷೀಯ ಬ್ಯಾಂಕ್ ಗಳಿಗೆ ಎರವಲು ಪಡೆಯುವ ಬ್ಯಾಂಕ್ ಗಳು ತಮ್ಮ ಮಾನ್ಯತೆಗಳನ್ನು ತಡೆಯಲು ಅವಕಾಶ ನೀಡುವಂತೆ ಒತ್ತಾಯಿಸಿದರು.
ಇದರಿಂದ ಹಸಿರು ಮತ್ತು ಹಣಕಾಸು ಸೇರ್ಪಡೆ ನಿಧಿಯು ಹೆಚ್ಚು ಸಮರ್ಥನೀಯವಾಗಿರುತ್ತದೆ. ಸಾಲಗಳನ್ನು ಒದಗಿಸುವ ಮೂಲಕ ಗ್ರಾಹಕರನ್ನು ಕ್ಲೀನ್ ಕ್ಲೈಮೇಟ್ ಅಭಿಯಾನಗಳೊಂದಿಗೆ ಸಂಪರ್ಕಿಸುವುದು ಯೋಜನೆಯ ಉದ್ದೇಶವಾಗಿದೆ.