SBI Home Loan: ಹೊಸ ಮನೆ ಕಟ್ಟುತ್ತಿರುವವರಿಗೆ ಬಂಪರ್ ಗುಡ್ ನ್ಯೂಸ್, SBI ಕಡಿಮೆ ಬಡ್ಡಿಗೆ ಗೃಹಸಾಲ ಘೋಷಣೆ.
ಇದೀಗ ಸರ್ಕಾರೀ ಸ್ವಾಮ್ಯದ ಬ್ಯಾಂಕ್ ಆಗಿರುವ SBI ಜನರಿಗೆ ಅಗ್ಗದ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದೆ.
SBI Home Loan Offer: ಜನಸಾಮಾನ್ಯರ ಸ್ವಂತ ಮನೆ ನಿರ್ಮಾಣದ ಕನಸಿಗೆ ಗೃಹಸಾಲ ಒಂದು ರೀತಿಯಲ್ಲಿ ಸಹಾಯವಾಗುತ್ತದೆ. ದೇಶದ ಕೋಟ್ಯಂತರ ಜನರು ತಮ್ಮ ಕನಸನ್ನು ಗೃಹ ಸಾಲದ ಪಡೆಯುವ ಮೂಲಕ ನನಸು ಮಾಡಿಕೊಂಡಿದ್ದಾರೆ.
ಇನ್ನು ಜನರ ಕನಸನ್ನು ನನಸು ಮಾಡಲು ಬ್ಯಾಂಕುಗಳು ಹಗೂ ಇತರ ಹಣಕಾಸು ಸಂಸ್ಥೆಗಳು ಗೃಹ ಸಾಲವನ್ನು ನಿಡುತ್ತದೆ. ನೀವು ಬ್ಯಾಂಕ್ ನಲ್ಲಿ ಸಾಲ ಪಡೆಯಲು ಬಯಸುವ ಮೊದಲು ವಿವಿಧ ಬ್ಯಾಂಕ್ ಗಳ ಬಡ್ಡಿ ದರದ ಬಗ್ಗೆ ಗಮನ ಹರಿಸುವುದು ಉತ್ತಮ.
ಗೃಹ ಸಾಲದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ
ಗೃಹ ಸಾಲ ಪಡೆಯುವ ಮೊದಲು ಸಂಸ್ಕರಣಾ ಶುಲ್ಕವನ್ನು ಪರಿಶೀಲಿಸಬೇಕು. ಡಾಕ್ಯುಮೆಂಟೇಷನ್ ಮತ್ತು ಕಾನೂನು ಶುಲ್ಕಗಳು ಸೇರಿದಂತೆ ಸಾಕಷ್ಟು ಶುಲ್ಕಗಳನ್ನು ವಿಧಿಸಲಾಗುತ್ತದೆ. ಗೃಹ ಸಾಲದ ಮೇಲಿನ ಬಡ್ಡಿದರವು ವಾರ್ಷಿಕ 8 % ದಿಂದ ಪ್ರಾರಂಭವಾಗುತ್ತದೆ. ಗೃಹ ಸಾಲದ ಮೇಲಿನ ಬಡ್ಡಿದರವು ಮಾಸಿಕ EMI ನ ಮೇಲೆ ಹೆಚ್ಚಿನ ಪ್ರಭಾವನ್ನು ಬೀರುತ್ತದೆ.
ಗೃಹ ಸಾಲದ ಆಯ್ಕೆಗೆ SBI ಮೊದಲ ಸ್ಥಾನದಲ್ಲಿದೆ
ಸಾಮಾನ್ಯವಾಗಿ ಗೃಹ ಸಾಲವನ್ನು ಪಡೆಯುವವರು ಸರ್ಕಾರೀ ಬ್ಯಾಂಕ್ ಗಳಲ್ಲಿ ಸಾಲ ಪಡೆಯುವುದು ಉತ್ತಮ. ಏಕೆಂದರೆ ಕೆಲ ಖಾಸಗಿ ವಲಯದ ಬ್ಯಾಂಕ್ ಗಳಿಗೆ ಹೋಲಿಸಿದೆ ಸರ್ಕಾರೀ ಬ್ಯಾಂಕ್ ಗಳ ಬಡ್ಡಿದರ ಕಡಿಮೆ ಇರುತ್ತದೆ. ಗೃಹ ಸಾಲವನ್ನು ಪಡೆಯುವಾಗ ದೀರ್ಘವದಿಯ ಸಾಲವನ್ನು ಪಡೆಯಬಾರದು. ಬದಲಾಗಿ ಕಡಿಮೆ ವರ್ಷದ ಅವಧಿಯ ಆಯ್ಕೆಯನ್ನು ಆರಿಸಬೇಕು. ಕಡಿಮೆ ಅವಧಿಯ ಸಾಲವನ್ನು ಪಡೆದರೆ ಬಡ್ಡಿದರ ಕಡಿಮೆ ಆಗಲಿದೆ. ಇದೀಗ ಸರ್ಕಾರೀ ಸ್ವಾಮ್ಯದ ಬ್ಯಾಂಕ್ ಆಗಿರುವ SBI ಜನರಿಗೆ ಅಗ್ಗದ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದೆ.
SBI ನೀಡುತ್ತಿದೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ
ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI ತನ್ನ ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ಒದಗಿಸುತ್ತದೆ. ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ರಿಯಾಯಿತಿಯನ್ನು ಪಡೆಯಲು ಗ್ರಾಹಕರಿಗೆ ಇಂದಿನ ಅವಕಾಶವನ್ನು ನೀಡಿದೆ. ನೀವು SBI ಯಿಂದ ಗೃಹ ಸಾಲವನ್ನು ಪಡೆಯಲು ಬಯಸಿದರೆ, ನೀವು ಗೃಹ ಸಾಲದ ಬಡ್ಡಿಯಲ್ಲಿ 55 bps ವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಸಾಲದ ಬಡ್ಡಿದರಕ್ಕೆ ರಿಯಾಯಿತಿ ಲಭ್ಯ
ಸಂಸ್ಕರಣಾ ಶುಲ್ಕ ಮತ್ತು ಹೋಮ್ ಲೋನ್ ರಿಯಾಯಿತಿಯ ಕೊನೆಯ ದಿನಾಂಕ 31 ಆಗಸ್ಟ್ 2023 ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೆಬ್‌ಸೈಟ್ ಪ್ರಕಾರ, ಸಂಸ್ಕರಣಾ ಶುಲ್ಕದಲ್ಲಿ 50 ರಿಂದ 100 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ನಿಯಮಿತ ಗೃಹ ಸಾಲ, ಫ್ಲೆಕ್ಸಿಪೇ, ಎನ್ ಆರ್ ಐ ಮತ್ತು ಸಂಬಳೇತರ ಗೃಹ ಸಾಲದ ಮೇಲೆ ಈ ರಿಯಾಯಿತಿಯನ್ನು ನೀಡಲಾಗುತ್ತಿದೆ. ಬ್ಯಾಂಕ್ ಪ್ರಕಾರ, ಎಲ್ಲಾ HAL ಮತ್ತು ಟಾಪ್ ಅಪ್ ಆವೃತ್ತಿಗಳಿಗೆ ಕಾರ್ಡ್ ದರದಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡಲಾಗಿದೆ ಹಾಗೂ ಜಿಎಸ್ ಟಿಯಲ್ಲೂ ವಿನಾಯಿತಿ ನೀಡಲಾಗಿದೆ.