SBI Interest Rate Hike: SBI ನಲ್ಲಿ ಸಾಲ ಮಾಡಿದವರಿಗೆ ಶಾಕಿಂಗ್ ಸುದ್ದಿ, ಬಡ್ಡಿ ದರದಲ್ಲಿ ಮತ್ತೆ ಹೆಚ್ಚಳ.
SBI Rate Hike: ದೇಶದ ಅತಿದೊಡ್ಡ ಬ್ಯಾಂಕ್ ಆಗಿ ಮುಂದುವರೆದಿರುವ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಇತ್ತೀಚಿಗೆ ತನ್ನ ಗ್ರಾಹಕರಿಗೆ ಸರ್ಪ್ರೈಸ್ ನೀಡಿದೆ. ಯುಗಾಗಿ ಹಬ್ಬಕ್ಕೂ ಮುನ್ನ ಮಹತ್ವದ ನಿರ್ಧಾರ ಕೈಗೊಂಡಿದೆ. ಬ್ಯಾಂಕ್ ನಲ್ಲಿ ಸಾಲ ಪಡೆಯುವವರಿಗೆ ಇದು ಕಹಿ ಸುದ್ದಿ ಆಗಿದೆ. SBI ಬ್ಯಾಂಕ್ ತನ್ನ ಸಾಲದ ದರವನ್ನು ಹೆಚ್ಚಿಸಿದೆ.
ಸಾಲದ ದರ ಹೆಚ್ಚಳ ಮಾಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿಗೆ ಸಾಲದ ದರಗಳಲ್ಲಿ ಹೆಚ್ಚಳವನ್ನು ಘೋಷಿಸಿದೆ. ಸಾಲದ ಮೇಲಿನ ಮೂಲ ದರ, ಬೆಂಚ್ ಮಾರ್ಕ್ ಪ್ರೈಮ್ ರೇಟ್ ಹೆಚ್ಚಿಸಲಾಗಿದೆ. ಮಾರ್ಚ್ 15 ರಿಂದ ದರ ಏರಿಕೆ ನಿರ್ಧಾರ ಜಾರಿಗೆ ಬರಲಿದೆ ಎನ್ನಬಹುದು.
ನಾವು ಎಸ್ ಬಿ ಐ ಮೂಲ ದರವನ್ನು ನೋಡಿದರೆ, ಇತ್ತೀಚಿನ ದರ ಏರಿಕೆಯ ನಂತರ ಅದು ಈಗ ಶೇಕಡಾ 10.10 ಕ್ಕೆ ತಲುಪಿದೆ. ಇದುವರೆಗೆ ಈ ಪ್ರಮಾಣ ಶೇ. 9 .4 ರಷ್ಟಿತ್ತು. ಮೂಲ ದರ ಹಣನೀಯವಾಗಿ ಹೆಚ್ಚಿದೆ ಎನ್ನಬಹುದು. 70 ಬೇಸಿಸ್ ಪಾಯಿಂಟ್ ಗಳು ಹೆಚ್ಚಳವಾಗಿದೆ.
ಎಸ್ ಬಿ ಐ ಬೆಂಚ್ ಮಾರ್ಕ್ ದರ ಹೆಚ್ಚಳ
ಎಸ್ ಬಿ ಐ ಬೆಂಚ್ ಮಾರ್ಕ್ ಪ್ರೈಮ್ ಲೆಂಡಿಂಗ್ ದರವು ಹೆಚ್ಚಾಗಿದೆ. ಇದುವರೆಗೆ ಈ ಪ್ರಮಾಣ ಶೇ.14.15 ರಷ್ಟಿತ್ತು. ಆದರೆ ಈಗ ಶೇ. 14.85 ಕ್ಕೆ ಏರಿಕೆಯಾಗಿದೆ. ದರ ಏರಿಕೆ ನಾಳೆಯಿಂದಲೇ ಜಾರಿಗೆ ಬರಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಧಿಗಳ ಕನಿಷ್ಠ ವೆಚ್ಚವನ್ನು ಆಧರಿಸಿದ ಸಾಲ ದರವನ್ನು ಸ್ಥಿರವಾಗಿ ಇರಿಸಿದೆ. MCLR ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಪರಿಣಾಮವಾಗಿ, ರಾತ್ರಿಯ ಎಂಸಿಎಲ್ಆರ್ ಶೇಕಡಾ 7.9 ರಷ್ಟಿತ್ತು. ಒಂದು ತಿಂಗಳ MCLR ದರವು 8.1 ಶೇಕಡಾದಲ್ಲಿ ಮುಂದುವರಿಯುತ್ತದೆ.