SBI Interest Rate: SBI ನಲ್ಲಿ FD ಇಟ್ಟವರಿಗೆ ಗುಡ್ ನ್ಯೂಸ್, FD ಬಡ್ಡಿದರಲ್ಲಿ ಬಾರಿ ಹೆಚ್ಚಳ.

ತನ್ನ FD ಬಡ್ಡಿದರದಲ್ಲಿ ಹೆಚ್ಚಳ ಮಾಡಿದ SBI

SBI Interest Rate Hike: ಜನರು ತಮ್ಮ ಹಣದ ಉಳಿತಾಯಕ್ಕೆ ಬ್ಯಾಂಕ್ ನಲ್ಲಿ FD ಇಡಲು ಮುಂದಾಗುತ್ತಾರೆ. ಬ್ಯಾಂಕ್ ಗಳು ಹಾಗೂ ಪೋಸ್ಟ್ ಆಫೀಸ್ ಜನರಿಗೆ FD Investment ಆಯ್ಕೆಯನ್ನು ನೀಡುತ್ತದೆ. ಬ್ಯಾಂಕುಗಳು ಗ್ರಾಹಕರು ಇಡುವ FD ಗೆ ಇಂತಿಷ್ಟು ಬಡ್ಡಿದರವನ್ನು ನಿಗದಿಪಡಿಸಿರುತ್ತದೆ. ಬ್ಯಾಂಕ್ ನೀಡುವ ಬಡ್ಡಿದರದಿಂದಾಗಿ ಹೂಡಿಕೆದಾರರು ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.

ದೇಶದ ಜನಪ್ರಿಯ ಸರ್ಕಾರೀ ವಲಯದ ಬ್ಯಾಂಕ್ ಆಗಿರುವ SBI ಕೂಡ ತನ್ನ FD ಹೂಡಿಕೆಯ ಆಯ್ಕೆಯನ್ನು ನೀಡುತ್ತಿದೆ. ಕೋಟ್ಯಾಂತರ ಗ್ರಹಕೃ ಈ FD ಯಲ್ಲಿ ಹೂಡಿಕೆಯನ್ನು ಮಾಡಿದ್ದಾರೆ. ಸದ್ಯ SBI ತನ್ನ FD ಹೂಡಿಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಹೌದು, SBI ತನ್ನ FD ಬಡ್ಡಿದರದ ಹೆಚ್ಚಳದ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದೆ.

SBI Interest Rate Hike News
Image Credit: Live Mint

SBI ನಲ್ಲಿ FD ಇಟ್ಟವರಿಗೆ ಗುಡ್ ನ್ಯೂಸ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಗದಿತ ಅವಧಿಗೆ ಚಿಲ್ಲರೆ ಠೇವಣಿಗಳ ಮೇಲಿನ (2 ಕೋಟಿ ರೂ.ವರೆಗೆ) ಸ್ಥಿರ ಠೇವಣಿ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಬ್ಯಾಂಕ್‌ ನ ವೆಬ್‌ ಸೈಟ್‌ ನ ಪ್ರಕಾರ, ಹೊಸ ಎಫ್‌ಡಿ ದರಗಳು ಮೇ 15, 2024 ರಿಂದ ಜಾರಿಗೆ ಬರುತ್ತವೆ. ಎಸ್‌ಬಿಐ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಬಡ್ಡಿ ದರಗಳನ್ನು 46 ರಿಂದ 179 ದಿನಗಳವರೆಗೆ, 180 ರಿಂದ 210 ದಿನಗಳವರೆಗೆ 25-75 ಬೇಸಿಸ್ ಪಾಯಿಂಟ್‌ ಗಳಷ್ಟು ಹೆಚ್ಚಿಸಿದೆ. ಈ ಮೂಲಕ SBI ನಲ್ಲಿ FD ಇಂತವರಿಗೆ ಬ್ಯಾಂಕ್ ಸಿಹಿ ಸುದ್ದಿ ನೀಡಿದೆ.

FD ಬಡ್ಡಿದರಲ್ಲಿ ಬಾರಿ ಹೆಚ್ಚಳ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಠೇವಣಿಯ ಅವಧಿಯನ್ನು ಅವಲಂಬಿಸಿ ವಿಭಿನ್ನ ಸ್ಥಿರ ಠೇವಣಿ (FD) ಬಡ್ಡಿ ದರಗಳನ್ನು ನೀಡುತ್ತದೆ. 7 ದಿನಗಳಿಂದ 45 ದಿನಗಳವರೆಗೆ ಅಲ್ಪಾವಧಿ ಠೇವಣಿಯ ಬಡ್ಡಿ ದರವು 3.50% ಆಗಿದೆ. 46 ದಿನಗಳಿಂದ 179 ದಿನಗಳ ನಡುವಿನ ಠೇವಣಿಗಳಿಗೆ, ಬಡ್ಡಿ ದರವು 5.50% ಕ್ಕೆ ಏರುತ್ತದೆ. 180 ದಿನಗಳಿಂದ 210 ದಿನಗಳವರೆಗೆ ಬಡ್ಡಿ ದರ 6.00%. 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ 6.25% ಬಡ್ಡಿದರವನ್ನು ಪಡೆಯುತ್ತದೆ.

1 ವರ್ಷದಿಂದ 2 ವರ್ಷದೊಳಗಿನ ಬಡ್ಡಿ ದರವು 6.80% ಕ್ಕಿಂತ ಹೆಚ್ಚಾಗಿರುತ್ತದೆ. 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ, ಈ ದರವು ಗರಿಷ್ಠ 7.00% ತಲುಪುತ್ತದೆ. 3 ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ ಅವಧಿಗೆ ಬಡ್ಡಿ ದರವು 6.75% ಕ್ಕೆ ಸ್ವಲ್ಪ ಕಡಿಮೆಯಾಗುತ್ತದೆ. 5 ವರ್ಷದಿಂದ 10 ವರ್ಷಗಳವರೆಗಿನ ದೀರ್ಘಾವಧಿ ಠೇವಣಿಗಳ ಬಡ್ಡಿ ದರವು 6.50% ಆಗಿದೆ.

Join Nadunudi News WhatsApp Group

SBI FD Interest Rate Hike
Image Credit: gnttv

Join Nadunudi News WhatsApp Group