SBI Pension Plan: ಬ್ಯಾಂಕ್ ಖಾತೆ ಇದ್ದವರಿಗೆ ಪ್ರತಿ ತಿಂಗಳು ಸಿಗಲಿದೆ 1 ಲಕ್ಷ ರೂ ಪಿಂಚಣಿ, ಇಂದೇ ಕೇಂದ್ರದ ಯೋಜನೆಗೆ ಅರ್ಜಿ ಹಾಕಿ.

1 ಲಕ್ಷ ಪಿಂಚಣಿಗಾಗಿ SBI ನಲ್ಲಿ ಹೊಸ ಯೋಜನೆ ಜಾರಿ.

SBI Life- Smart Annuity Plus Scheme: ಸಾಮಾನ್ಯವಾಗಿ ಹೆಚ್ಚಿನ ಜನರು ತಮ್ಮ ಭವಿಷ್ಯದ ಆರ್ಥಿಕ ಭದ್ರತೆಗಾಗಿ ವಿವಿಧ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಆರಂಭಿಸುತ್ತಾರೆ. ಆರ್ಥಿಕವಾಗಿ ಸಮರ್ಥರಾಗಿರುವ ಸಮಯದಲ್ಲಿ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 60 ವರ್ಷ ಮೇಲ್ಪಟ್ಟ ನಂತರ ನಿಮಗೆ ಈ ಹೂಡಿಕೆಗಳು ಸಹಾಯಕ್ಕೆ ಬರುತ್ತವೆ.

ಇನ್ನು ದೇಶದ ಪ್ರತಿಷ್ಠಿತ ವಿಮಾ ಕಂಪನಿಗಳು, ಅಂಚೆ ಇಲಾಖೆ ಜನರಿಗೆ ಪಿಂಚಣಿ ಯೋಜನೆಯನ್ನು ನೀಡುತ್ತಾದೆ. ಆದರೆ ಬ್ಯಾಂಕ್ ಗಳು ಕೂಡ ಪಿಂಚಣಿ ಯೋಜನೆಯನ್ನು ನೀಡುತ್ತದೆ ಎನ್ನುವ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ. ಹೌದು ಇದೀಗ ದೇಶದ ಜನಪ್ರಿಯ ಸರ್ಕಾರೀ ಸ್ವಾಮ್ಯದ ಬ್ಯಾಂಕ್ ಆಗಿರುವ State Bank Of India ತನ್ನ ಗ್ರಾಹಕರಿಗೆ ವಿಶೇಷ ಪಿಂಚಣಿ ಯೋಜನೆಯನ್ನು ನೀಡುತ್ತಿದೆ. ನೀವು SBI ಗ್ರಾಹಕರಾಗಿದ್ದರೆ ಈ ಪಿಂಚಣಿ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಇಂದೇ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

SBI Life - Smart Annuity Plus
Image Credit: Askbankifsccode

1 ಲಕ್ಷ ಪಿಂಚಣಿಗಾಗಿ SBI ನಲ್ಲಿ ಹೊಸ ಯೋಜನೆ ಜಾರಿ
SBI ಇದೀಗ ಗ್ರಾಹಕರಿಗಾಗಿ ಲೈಫ್ ಪಿಂಚಣಿ ಯೋಜನೆಯನ್ನು ನೀಡುತ್ತಿದೆ. ಅದರ ಹೆಸರು SBI Life – Smart Annuity Plus ಆಗಿದೆ. ಈ ಯೋಜನೆಯು ವಿಶೇಷವಾದ ಯೋಜನೆಯಾಗಿದ್ದು, ಒಮ್ಮೆ ಪಾವತಿಯ ನಿಗದಿತ ಮಧ್ಯಂತರದ ನಂತರ ಪಿಂಚಣಿಯನ್ನು ನೀಡುತ್ತದೆ. ನೀವು SBI Life – Smart Annuity Plus ಯೋಜನೆಯಲ್ಲಿ ಹೂಡಿಕೆ ಮಾಡಿದರೆ 60 ರ ನಿವೃತ್ತಿ ವಯಸ್ಸನ್ನು ತಲುಪಿದ ವ್ಯಕ್ತಿಯು ತಿಂಗಳಿಗೆ 1 ಲಕ್ಷ ರೂಪಾಯಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. 1 ಲಕ್ಷ ಪಿಂಚಣಿ ಪಡೆಯಲು ಎಷ್ಟು ಹೂಡಿಕೆ ಅಗತ್ಯ..? ಎನ್ನುವ ಬಗ್ಗೆ ವಿವರ ಇಲ್ಲಿದೆ.

SBI Life – Smart Annuity Plus Scheme
SBI Life – Smart Annuity Plus ಯೋಜನೆಯು ವೈಯಕ್ತಿಕ, ಲಿಂಕ್ ಮಾಡದ, ಭಾಗವಹಿಸದ, ಸಾಮಾನ್ಯ ವರ್ಷಾಶನ ಯೋಜನೆಯಾಗಿದೆ. ಈ ಯೋಜನೆಯಲ್ಲಿರುವ ಜನರು ನಿಯಮಿತ ಖಾತರಿಯ ಆದಾಯಕ್ಕೆ ಅರ್ಹರಾಗಿರುತ್ತಾರೆ ಮತ್ತು ಈ ಯೋಜನೆಯ ಹೂಡಿಕೆಯು ನಿವೃತ್ತಿಯ ನಂತರ ಅವರ ಜೀವನವನ್ನು ಸುಗಮಗೊಳಿಸುತ್ತದೆ. ಈ ಯೋಜನೆಯು ಜಂಟಿ ಜೀವನ ಆಯ್ಕೆಯನ್ನು ಸಹ ಹೊಂದಿದೆ. ವರ್ಷಾಶನ ಆಯ್ಕೆಗಳೊಂದಿಗೆ 30 ವರ್ಷ ವಯಸ್ಸಿನಿಂದ ಹೂಡಿಕೆ ಮಾಡಬಹುದು. ಆದರೆ ಮುಂದೂಡಲ್ಪಟ್ಟ ವರ್ಷಾಶನವು 45 ವರ್ಷ ವಯಸ್ಸಿನಿಂದ ಲಭ್ಯವಿದೆ.

SBI Life - Smart Annuity Plus Scheme
Image Credit: Zeenews

ಬ್ಯಾಂಕ್ ಖಾತೆ ಇದ್ದವರಿಗೆ ಪ್ರತಿ ತಿಂಗಳು ಸಿಗಲಿದೆ 1 ಲಕ್ಷ ರೂ. ಪಿಂಚಣಿ
ಲೈಫ್ ವರ್ಷಾಶನ ಆಯ್ಕೆಯ ಅಡಿಯಲ್ಲಿ ಪ್ಲ್ಯಾನ್ ನಿಂದ ತಿಂಗಳಿಗೆ 1 ಲಕ್ಷ ರೂ. ಪಿಂಚಣಿ ಪಡೆಯಲು 60 ವರ್ಷ ವಯಸ್ಸಿನ ವ್ಯಕ್ತಿಯು 1,55,92,516 ರೂ. ಪಾವತಿಸಬೇಕಾಗುತ್ತದೆ. ಹಾಗೆಯೆ ಖರೀದಿ ಬೆಲೆಯ ವಾಪಸಾತಿಯೊಂದಿಗೆ ಜೀವನ ವರ್ಷಾಶನ ಆಯ್ಕೆಯ ಅಡಿಯಲ್ಲಿ ಪ್ಲ್ಯಾನ್ ನಿಂದ ತಿಂಗಳಿಗೆ ರೂ. 1 ಲಕ್ಷವನ್ನು ಪಡೆಯಲು 60 ವರ್ಷ ವಯಸ್ಸಿನ ವ್ಯಕ್ತಿಯು ರೂ. 1,88,32,392 ಪಾವತಿಸಬೇಕಾಗುತ್ತದೆ.

Join Nadunudi News WhatsApp Group

ಸಾಮಾನ್ಯ ಜನರಿಗೆ ಇಷ್ಟು ಹೂಡಿಕೆ ಮಾಡುವುದು ಬಹಳ ಕಷ್ಟ ಎಂದು ಹೇಳಿದರೆ ತಪ್ಪಾಗಲ್ಲ. SBI ನ ಈ ಯೋಜನೆ ಸಾಮಾನ್ಯ ಜನರಿಗೆ ಸಿಗಲ್ಲ ಅಂತಾನೆ ಹೇಳಿದರೆ ತಪ್ಪಾಗಲ್ಲ. ಸದ್ಯ SBI ಜಾರಿಗೆ ತಂದಿರುವ ಈ ಯೋಜನೆಗೆ ದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದನ್ನ ನಾವು ಗಮನಿಸಬಹುದು.

Join Nadunudi News WhatsApp Group