MCLR Rate: SBI ನಲ್ಲಿ ಖಾತೆ ಇದ್ದವರಿಗೆ ಮತ್ತು ಸಾಲ ಮಾಡಿದವರಿಗೆ ಹೊಸ ನಿಯಮ, ಬ್ಯಾಂಕ್ ಮಹತ್ವದ ನಿರ್ಧಾರ.
SBI ಸಾಲಗಳ ಮೇಲೆ ಹೊಸ ನಿಯಮ ಜಾರಿಗೆ ತಂದಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ.
SBI MCLR Rate Hike: ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ಹೊರಡಿಸಿದೆ. ಸಾಲದ ಬಡ್ಡಿದರದಲ್ಲಿ ಹೊಸ ನಿಯಮ ಜಾರಿಗೆ ತರಲು ಎಸ್ ಬಿಐ ನಿರ್ಧರಿಸಿದೆ.
ಸಾಲದ ಬಡ್ಡಿದರದ ಹೆಚ್ಚಳವು ಎಸ್ ಬಿಐ ನಲ್ಲಿ ಸಾಲ ಪಡೆದವರ ಮೇಲೆ ಪರಿಣಾಮ ಬೀರಲಿದೆ. SBI ತನ್ನ MCLR ದರವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಇದರ ಪರಿಣಾಮವು ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳ ಮೇಲೆ ಪರಿಣಾಮ ಬೀರಲಿದೆ.
SBI ಗ್ರಾಹಕರಿಗೆ ಬೇಸರದ ಸುದ್ದಿ
ಭಾರತದಲ್ಲಿ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆ ಇಂಡಿಯಾ, ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಟ್ ಲೆಂಡಿಂಗ್ ರೇಟ್ (MCLR) ದರವನ್ನು 5 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದೆ. ಇದು ಕೋಟ್ಯಾಂತರ ಎಸ್ ಬಿಐ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ.
ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲವನ್ನು ಪಡೆಯಲು ಬಯುಸುತ್ತಿದ್ದರೆ ಈ ವಿಷಯವನ್ನು ತಿಳಿದುಕೊಳ್ಳುವುದು ಉತ್ತಮ. SBI ತನ್ನ ಗ್ರಾಹಕರಿಗೆ ಬಿಗ್ಗ್ ಶಾಕ್ ನೀಡಿದೆ. ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಟ್ ಲೆಂಡಿಂಗ್ ರೇಟ್ (MCLR) ದರವನ್ನು ಹೆಚ್ಚಿಸಿದ್ದು ಈ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.
SBI MCLR ದರ ಹೆಚ್ಚಳ
ಇತ್ತೀಚಿಗೆ ಆರ್ ಬಿಐ ರೆಪೋ ದರವನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿ ದರವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಎಮ್ ಸಿಎಲ್ ಆರ್ ಹೆಚ್ಚಳದ ಬಗ್ಗೆ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಬ್ಯಾಂಕುಗಳು ತನ್ನ ಗ್ರಾಹಕರಿಗೆ ನೀಡುವ ಸಾಲದ ಮೂಲ ದರವನ್ನು ಎಂಸಿಎಲ್ ಆರ್ ದರ ಎನ್ನಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂಸಿಎಲ್ ಆರ್ ದರವನ್ನು ಜುಲೈ 15 ರಿಂದ ಜಾರಿಗೊಳಿಸಲಿದೆ. ಜುಲೈ 15 ರಿಂದ ಎಂಸಿಎಲ್ ಆರ್ ದರಗಳು 8 % ದಿಂದ 8 .75 % ಇರಲಿದೆ.
ಎಮ್ ಸಿಎಲ್ಆರ್ ಹೆಚ್ಚಳದ ವಿವರ
*ಒಂದರಿಂದ ಮೂರು ತಿಂಗಳ ಎಮ್ ಸಿಎಲ್ಆರ್ ಅನ್ನು 8 .10 % ರಿಂದ 8 .15% ಕ್ಕೆ ಹೆಚ್ಚಿಸಲಾಗಿದೆ.
* ಆರು ತಿಂಗಳಿಂದ ಒಂದು ವರ್ಷದ ವರೆಗೆ ಎಮ್ ಸಿಎಲ್ಆರ್ ಅನ್ನು 8.40 % ರಿಂದ 8.45 % ಕ್ಕೆ ಹೆಚ್ಚಿಸಲಾಗಿದೆ.
*ಒಂದು ವರ್ಷ ಎಮ್ ಸಿಎಲ್ಆರ್ ಅನ್ನು 8.50% ರಿಂದ 8.55 % ಕ್ಕೆ ಹೆಚ್ಚಿಸಲಾಗಿದೆ.
*ಎರಡು ಮತ್ತು ಮೂರು ವರ್ಷದ ಎಮ್ ಸಿಎಲ್ಆರ್ ಅನ್ನು 8.65 % ರಿಂದ 8.75 % ಕ್ಕೆ ಹೆಚ್ಚಿಸಲಾಗಿದೆ.
*ಇನ್ನು ರಾತ್ರಿಯ ಎಂಸಿಎಲ್ ಆರ್ ದರವು 7 .90 ರಿಂದ 8 ಕ್ಕೆ ಹೆಚ್ಚಿಸಲಾಗಿದೆ.