SBI Loan: SBI ನಲ್ಲಿ ಖಾತೆ ಇದ್ದವರಿಗೆ ಸಿಗಲಿದೆ 50 ಸಾವಿರ ರೂಪಾಯಿ, ಯಾವುದೇ ಗ್ಯಾರೆಂಟಿ ಅಗತ್ಯವಿಲ್ಲ.
ಎಸ್ ಬಿಐ ತನ್ನ ಗ್ರಾಹಕರಿಗೆ 50 ಸಾವಿರದ ತನಕ ಯಾವುದೇ ಗ್ಯಾರೆಂಟಿ ಇಲ್ಲದೆ ಸಾಲ ನೀಡಲು ಮುಂದಾಗಿದೆ.
SBI Mudra Loan: ಗ್ರಾಹಕರ ಸುರಕ್ಷತೆಗಾಗಿ ಬ್ಯಾಂಕ್ ವಿವಿಧ ಸೌಲಭ್ಯಗಳ ಜೊತೆಗೆ ಹೊಸ ಹೊಸ ನಿಯಮವನ್ನು ಕೂಡ ಜಾರಿಗೊಳಿಸುತ್ತಿದೆ. ಇನ್ನು ಇತ್ತೀಚಿಗೆ ಬ್ಯಾಂಕುಗಳ ನಿಯಮದಲ್ಲಿ ಆರ್ ಬಿಐ ಸಾಕಷ್ಟು ಬದಲಾವಣೆ ತಂದಿದೆ. ಆರ್ ಬಿಐ ನಿಯಮದ ಪ್ರಕಾರ ಬ್ಯಾಂಕುಗಳು ವಹಿವಾಟನ್ನು ನಡೆಸುತ್ತಿದೆ.
ಇನ್ನು ನಿಯಮ ಉಲ್ಲಂಘನೆ ಮಾಡುವ ಬ್ಯಾಂಕ್ ಗಳ ವಿರುದ್ಧ ಆರ್ ಬಿಐ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇತ್ತೀಚಿಗೆ ಆರ್ ಬಿಐ ಬ್ಯಾಂಕುಗಳ ಸಾಲದ ಬಡ್ಡಿದರದ ಬಗ್ಗೆ ಕೂಡ ಹೊಸ ಹೊಸ ನಿಯಮವನ್ನು ಜಾರಿಗೊಳಿಸಿತ್ತು. ಇನ್ನು ದೇಶದ ಪ್ರತಿಷ್ಠಿತ ಸರ್ಕಾರೀ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಅನುಕೂಲವಾಗಲು ವಿವಿಧ ಸೌಲಭ್ಯವನ್ನು ನೀಡುತ್ತಿದೆ.
ಎಸ್ ಬಿಐ ಗ್ರಾಹಕರಿಗೆ ಮಹತ್ವದ ಮಾಹಿತಿ
ದೇಶದಲ್ಲಿ ಎಸ್ ಬಿಐ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಆಗಿದೆ. ಇದೀಗ ಎಸ್ ಬಿಐ ತನ್ನ ಗ್ರಾಹಕರಿಗೆ ಹೊಸ ಸಾಲವನ್ನು ನೀಡಲು ನಿರ್ಧರಿಸಿದೆ. ಎಸ್ ಬಿಐ ನೀಡಲಿರುವ ಹೊಸ ಸಾಲ ಕೋಟ್ಯಾಂತರ ಗ್ರಾಹಕರಿಗೆ ಸಹಾಯವಾಗಲಿದೆ. ನೀವು ಎಸ ಬಿಐ ಗ್ರಾಹಕರಾಗಿದ್ದರೆ ಈ ಹೊಸ ಸಾಲದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇನ್ನು ಈ ಸಾಲವನ್ನು ಪಡೆಯುವುದು ಹೇಗೆ, ಈ ಸಾಲದ ಅರ್ಜಿಗಾಗಿ ಯಾವ ಯಾವ ದಾಖಲೆಗಳನ್ನು ನೀಡಬೇಕಾಗುತ್ತದೆ ಎನ್ನುವ ಬಗ್ಗೆ ಬ್ಯಾಂಕ್ ಅಧಿಕೃತ ಮಾಹಿತಿ ನೀಡಿದೆ.
ಎಸ್ ಬಿಐ ಮುದ್ರಾ ಸಾಲ (Mudra Loan)
ಎಸ್ ಬಿಐ ತನ್ನ ಗ್ರಾಹಕರಿಗಾಗಿ ಮುದ್ರಾ ಸಾಲವನ್ನು ನೀಡಲು ಮುಂದಾಗಿದೆ. ಈ ಯೋಜನೆಯ ಮೂಲಕ SBI ಖಾತೆದಾರರು 50 ಸಾವಿರದಿಂದ ಸುಮಾರು 10 ಲಕ್ಷದ ವರೆಗೆ ಸಾಲವನ್ನು ಪಡೆಯಬಹುದು. ಇದರ ವೆಶೇಷವೆಂದರೆ ಈ ಸಾಲವನ್ನು ಪಡೆಯಲು ಯಾವುದೇ ಗ್ಯಾರಂಟಿ ನೀಡುವ ಅವಶ್ಯಕತೆ ಇರುವುದಿಲ್ಲ. ಇನ್ನು ಎಸ್ ಬಿಐ ಮುದ್ರಾ ಸಾಲವನ್ನು ಪಡೆಯಲು ಎಲ್ಲರು ಅರ್ಹಾರಾಗಿರುವುದಿಲ್ಲ. ಇಂತವರು ಮಾತ್ರ ಮುದ್ರಾ ಸಾಲಕ್ಕೆ ಅರ್ಹಾರಾಗಿರುತ್ತಾರೆ.
ಮುದ್ರಾ ಸಾಲ ಪಡೆಯಲು ಯಾರು ಅರ್ಹರು
*ಎಸ್ ಬಿಐ ಖಾತೆದಾರರು ಮಾತ್ರ ಈ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
*ಅರ್ಜಿದಾರರು ಕನಿಷ್ಠ 6 ತಿಂಗಳಿನಿಂದ ಎಸ್ ಬಿಐ ನಲ್ಲಿ ಖಾತೆಯನ್ನು ಹೊಂದಿರಬೇಕು.
*ಅರ್ಜಿದಾರರು ಉತ್ಪಾದನೆ ಅಥವಾ ಸೇವಾ ವಲಯದಲ್ಲಿ ಕೆಲಸ ಮಾಡುತ್ತಿರಬೇಕು.
*ಇನ್ನು ತಾವು ವಾಸವಿರುವ ಮನೆಯಲ್ಲಿ ಕನಿಷ್ಠ ಎರಡು ವರ್ಷಗಳ ಕಾಲ ವಾಸಿಸುತ್ತಿರಬೇಕು.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಾಲೆಗಳು ಹಾಗೂ ಅರ್ಜಿ ಸಲ್ಲಿಕೆಯ ವಿಧಾನ
ಸಾಲ ಪಡೆಯುವರ ಆಧಾರ್ ಕಾರ್ಡ್, ನಿವಾಸದ ಪುರಾವೆ, ಜಾತಿ ಪ್ರಮಾಣ ಪತ್ರ,GST ನೋಂದಣಿ ಪ್ರಮಾಣ ಪತ್ರ, ವ್ಯಾಪಾರ ಸ್ಥಾಪನೆ ಪ್ರಮಾಣ ಪತ್ರ, ಇನ್ನು ಅರ್ಜಿ ಸಲ್ಲಿಕೆಗೆ ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ. ಇನ್ನು ಎಸ್ ಬಿಐ ನ ಅಧಿಕೃತ ವೆಬ್ ಸೈಟ್ emudra.sbi.co.in ಭೇಟಿ ನೀಡುವ ಮೂಲಕ ನೀವು ಎಸ್ ಬಿಐ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅಗತ್ಯ ಮಾಹಿತಿಯನ್ನು ನೀಡುವ ಮೂಲಕ ಸುಲಭವಾಗಿ ಆನ್ಲೈನ್ ನಲ್ಲಿಯೇ ನೀವು ಎಸ್ ಬಿಐ ಮುದ್ರಾ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದು.