SBI Update: SBI ಗ್ರಾಹಕರಿಗೆ ಸಿಹಿ ಸುದ್ದಿ, ಇನ್ನುಮುಂದೆ ಮನೆ ಬಾಗಿಲಿಗೆ ಬರಲಿದೆ ಬ್ಯಾಂಕಿನ ಈ ಸೇವೆ.

ಇನ್ನುಮುಂದೆ SBI ಗ್ರಾಹಕರಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಲಭ್ಯ.

SBI New Mobile Hand Held Device Facility: ಬ್ಯಾಂಕುಗಳು ಗ್ರಾಹಕರಿಗೆ ಹೊಸ ಹೊಸ ಸೇವೆಯನ್ನು ಒದಗಿಸುತ್ತಿದೆ. ಸದ್ಯ ದೇಶದ ಜನಪ್ರಿಯ ಬ್ಯಾಂಕ್ ಆಗಿರುವ State Bank Of India ಇದೀಗ ತನ್ನ ಗ್ರಾಹಕರಿಗೆ ಹೊಸ ಸೇವೆಯನ್ನು ಪರಿಚಯಿಸಿದೆ.

SBI ಗ್ರಾಹಕರು ಈ ಹೊಸ ಸೌಲಭ್ಯದ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ನೀವು SBI ಗ್ರಾಹಕರಾಗಿದ್ದರೆ ಈ ಹೊಸ ಸೇವೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.

SBI New Mobile Hand Held Devise Facility
Image Credit: Livemint

SBI ಗ್ರಾಹಕರಿಗೆ ಸಿಹಿ ಸುದ್ದಿ
ಬ್ಯಾಂಕುಗಳಿಗೂ ಇತ್ತೀಚಿಗೆ ತನ್ನ ಗ್ರಾಹಕರ ಸುರಕ್ಷತೆಗಾಗಿ ವಿವಿಧ ಸೌಲಭ್ಯವನ್ನು ಒದಗಿಸುತ್ತಿವೆ. ವಿವಿಧ ಸೌಲಭ್ಯದ ಜೊತೆಗೆ ಅನೇಕ ನಿಯಮವನ್ನು ಕೂಡ ವಿಧಿಸುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಭದ್ರತೆಯನ್ನು ನೀಡುತ್ತಿದೆ. ಇದೀಗ ದೇಶದ ಪ್ರತಿಷ್ಠಿತ ಸರ್ಕಾರೀ ಸ್ವಾಮ್ಯದ ಬ್ಯಾಂಕ್ ಆಗಿರುವ State Bank Of India ತನ್ನ ಗ್ರಾಹಕರಿಗೆ ಹೊಸ ಸೇವೆಯನ್ನು ನೀಡುವ ಮೂಲಕ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.

ಇನ್ನುಮುಂದೆ ಇನ್ನಷ್ಟು ಸುಲಬವಾಗಲಿದೆ ಬ್ಯಾಂಕಿಂಗ್ ಸೇವೆ
ಇತ್ತೀಚೆಗೆ ಜನರು ಹೆಚ್ಚಾಗಿ UPI ವಹಿವಾಟನ್ನು ಬಳಸುತ್ತಿದ್ದಾರೆ. UPI Payment ಪರಿಚಯವಾದಾಗಿನಿಂದ ಗ್ರಾಹಕರ ಸಾಕಷ್ಟು ಸಮಯ ಉಳಿತಾಯವಾಗಿದೆ ಎನ್ನಬಹುದು. ಸಣ್ಣ ಮೊತ್ತದ ಹಂದ ವರ್ಗಾವಣೆಗೆ ಬ್ಯಾಂಕ್ ಗೆ ಭೇಟಿ ನೀಡುವ ಕೆಲಸವನ್ನು UPI ಕಡಿಮೆ ಮಾಡಿದೆ. ಇನ್ನು UPI ಸೇವೆಯ ಜೊತೆಗೆ ಬ್ಯಾಂಕ್ ಗಳು ಗ್ರಾಹಕರಿಗೆ ವಿವಿಧ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತದೆ. ಇದೀಗ SBI ತನ್ನ ಗ್ರಾಹಕರಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಲಭ್ಯವಾಗಲು ಹೊಸ ಸೌಲಭ್ಯವನ್ನು ಪರಿಚಯಿಸಿದೆ.

Good news for SBI customers
Image Credit: Indiatvnews

Mobile Hand Held Devise
State Bank Of India ಇದೀಗ ತನ್ನ ಗ್ರಾಹಕರಿಗಾಗಿ “Mobile Hand Held Devise ” ಸೇವೆಯನ್ನು ಆರಂಭಿಸಲು ಸಜ್ಜಾಗಿದೆ. ಈ ಹೊಸ ಸೇವೆಯು ಗ್ರಾಹಕರಿಗೆ ತಮ್ಮ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ಪಡೆಯಲು ಅವಕಾಶವನ್ನು ನೀಡುತ್ತದೆ. Mobile Hand Held ಸಾಧನವು ಐದು ಕೋರ್ ಬ್ಯಾಂಕಿಂಗ್ ಸೇವೆಯನ್ನು ಒದಗಿಸುತ್ತದೆ. ನಗದು ಹಿಂಪಡೆಯುವಿಕೆ, ನಗದು ಠೇವಣಿ, ನಿಧಿ ವರ್ಗಾವಣೆ, ಬ್ಯಾಲೆನ್ಸ್ ವಿಚಾರಣೆ, ಮಿನಿ ಸ್ಟೇಟ್ಮೆಂಟ್ ವಿವರವನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group