SBI 996 Post SO Recruitment 2025: ಪದವಿ ಮುಗಿಸಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಇದೀಗ ಒಂದೊಳ್ಳೆ ಅವಕಾಶ ಒದಗಿಬಂದಿದೆ. ನೀವು ಪದವಿ ಮುಗಿಸಿ ಉದ್ಯೋಗಕ್ಕಾಗಿ ಹುಡುಕುತಿದ್ದರೆ, ಈ ಮಾಹಿತಿ ನಿಮಗೆ ಉಪಯುಕ್ತ ಆಗಲಿದೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪೆಷಲಿಸ್ಟ್ ಅಧಿಕಾರಿ (SBI SO) ಹುದ್ದೆಗೆ ಅರ್ಜಿ ಆವ್ಹಾನ ಮಾಡಿದೆ. ಹಾಗಾದರೆ ನಾವೀಗ ಈ ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ ಯಾರು ಅರ್ಜಿ ಸಲ್ಲಿಸಬಹುದು..? ಸಂಬಳ ಎಷ್ಟು..? ಅರ್ಜಿ ಸಲ್ಲಿಸುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆಯ ವಿವರಗಳು
* Vice President – Wealth (Senior Relationship Manager) ನಲ್ಲಿ ಒಟ್ಟು 506
ಹುದ್ದೆಗಳು, ಗರಿಷ್ಠ ವಯೋಮಿತಿ 42 ವರ್ಷಗಳು, 5 ರಿಂದ 12 ವರ್ಷ ಅನುಭವ ಹೊಂದಿರಬೇಕು.
* Assistant Vice President – Wealth (Relationship Manager) ನಲ್ಲಿ ಒಟ್ಟು 206
ಹುದ್ದೆಗಳು, ಗರಿಷ್ಠ ವಯೋಮಿತಿ 38 ವರ್ಷಗಳು, 3 ರಿಂದ 8 ವರ್ಷ ಅನುಭವ ಹೊಂದಿರಬೇಕು.
* Customer Relationship Executive (CRE) – Wealth ನಲ್ಲಿ ಒಟ್ಟು 284
ಹುದ್ದೆಗಳು, ಗರಿಷ್ಠ ವಯೋಮಿತಿ 35 ವರ್ಷಗಳು, 5 ವರ್ಷ ಅನುಭವ ಹೊಂದಿರಬೇಕು.
ಇದೀಗ SBI ಒಟ್ಟು 996 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಈ ನೇಮಕಾತಿ ಕಾಂಟ್ರಾಕ್ಟ್ ಆಧಾರದ ಮೇಲೆ ಇದ್ದು ಆಕರ್ಷಕ ಸಂಬಳದೊಂದಿಗೆ ಸ್ಥಿರ ಉದ್ಯೋಗದ ಭರವಸೆ ನೀಡುತ್ತದೆ.
ಶೈಕ್ಷಣಿಕ ಅರ್ಹತೆ
* ಯಾವುದೇ ಒಂದು ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು
* MBA / PGDM ( Finance / Marketing ) + IRDAI / NISM / AMFI ಸರ್ಟಿಫಿಕೇಟ್ ಪಡೆದುಕೊಂಡವರಿಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುತ್ತದೆ.
* VP ಮತ್ತು AVP ಹುದ್ದೆಗಳಿಗೆ MBA ಅತೀ ಅಗತ್ಯವಾಗಿದೆ.
ಸಂಬಳದ ಮಾಹಿತಿ
* VP – Wealth – ವಾರ್ಷಿಕವಾಗಿ 18 ರಿಂದ 28 ಲಕ್ಷ ಅಂದಾಜು
* AVP – Wealth – ವಾರ್ಷಿಕವಾಗಿ 14 ರಿಂದ 22 ಲಕ್ಷ ಅಂದಾಜು
* Customer Relationship Executive – ವಾರ್ಷಿಕವಾಗಿ 8 ರಿಂದ 14 ಲಕ್ಷ ಅಂದಾಜು
(ಇದರಲ್ಲಿ ಬೋನಸ್, ಇನ್ಸೆಂಟಿವ್, HRA, Medical, LTA ಎಲ್ಲರೂ ಬರುತ್ತದೆ)
ಅರ್ಜಿ ಸಲ್ಲಿಕೆಯ ದಿನಾಂಕಗಳು
ಡಿಸೆಂಬರ್ 2, 2025 ರಂದು ಅರ್ಜಿ ಸಲ್ಲಿಕೆ ಆರಂಭವಾಗಿದ್ದು 23 ಡಿಸೆಂಬರ್ 2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ. ಅರ್ಜಿ ಶುಲ್ಕ ಪಾವತಿ ಕೊನೆ ದಿನಾಂಕ ಕೂಡ 23 ಡಿಸೆಂಬರ್ 2025 ಆಗಿದೆ. ಅಂದಾಜಿನ ಪ್ರಕಾರ, ಶಾರ್ಟ್ ಲಿಸ್ಟ್ ಜನವರಿ 2026 ರಲ್ಲಿ ಬಿಡುಗಡೆ ಮಾಡಬಹುದು. ಇನ್ನು ಜನವರಿ ಅಥವಾ ಫೆಬ್ರುವರಿಯಲ್ಲಿ ಇಂಟರ್ವ್ಯೂ ಇರಬಹುದು.
ಅರ್ಜಿ ಶುಲ್ಕ
* General / OBC / EWS – 750
* SC / ST / PwBD – ಶುಲ್ಕ ಮುಕ್ತವಾಗಿದೆ (No Fee)
ಆಯ್ಕೆ ವಿಧಾನ
* ಮೊದಲು ಆನ್ಲೈನ್ ಮೂಲಕ ಅರ್ಜಿ ಪರಿಶೀಲನೆ ಮಾಡಿ, ಶಾರ್ಟ್ ಲಿಸ್ಟ್ ಬಿಡುಗಡೆ ಮಾಡಲಾಗುತ್ತದೆ.
* ಇದಾದ ನಂತರ ಸಂದರ್ಶನ ಇರುತ್ತದೆ ( ಯಾವುದೇ ಲಿಖಿತ ಪರೀಕ್ಷೆ ಇಲ್ಲ)
* ದಾಖಲೆ ಪರಿಶೀಲನೆ ಮತ್ತು ಮೆಡಿಕಲ್ ಟೆಸ್ಟ್
ಕೆಲಸದ ಸ್ಥಳ
ಮುಂಬೈ, ದೆಹಲಿ, ಬೆಂಗರೂರು. ಹೈದ್ರಾಬಾದ್, ಚನ್ನೈ, ಕೋಲ್ಕತ್ತಾ, ಅಹಮದಾಬಾದ್, ಪುಣೆ, ಚಂಡೀಗಡ್ ನಂತಹ ಮೆಟ್ರೋ ನಗರಗಳು ಮತ್ತು ದೊಡ್ಡ ದೊಡ್ಡ ಶಾಖೆಗಳಿಗೆ ಪೋಸ್ಟಿಂಗ್ ಮಾಡಲಾಗುತ್ತದೆ.
ಅಗತ್ಯ ದಾಖಲೆಗಳು
* 10 ನೇ, 12 ನೇ, ಗ್ರಾಜುಯೇಷನ್ ಮತ್ತು ಪೋಸ್ಟ್ ಗ್ರಾಜುಯೇಷನ್ ಮಾರ್ಕ್ಸ್ ಕಾರ್ಡ್ ಗಳು.
* ಅನುಭವ ಪ್ರಮಾಣ ಪತ್ರ
* IRDAI / NISM / AMFI ಸರ್ಟಿಫಿಕೇಟ್ ಗಳು
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* ಜಾತಿ ಅಥವಾ EWS ಪ್ರಮಾಣ ಪತ್ರ
ಹುದ್ದೆಗೆ ಸಂಬಂಧಪಟ್ಟಂತೆ ಅಧಿಕೃತ ವೆಬ್ ಸೈಟ್ ಗಳು
* ಅಧಿಕೃತ ನೋಟಿಫಿಕೇಶನ್ ಗಾಗಿ –
* ಅರ್ಜಿ ಸಲ್ಲಿಸುವ ವೆಬ್ ಸೈಟ್ – https://sbi.bank.in/web/careers/current-openings
ಹುದ್ದೆಗೆ ಸಂಬಂಧಿಸಿದಂತೆ ಕೆಲವು ಅಗತ್ಯ ಮಾಹಿತಿ
* ಅರ್ಜಿ ಸಲ್ಲಿಸುವ ಮುನ್ನ Notification 2 ಅಥವಾ 3 ಬಾರಿ ಓದಿ
* ಪ್ರತಿ ಕಂಪನಿಯಿಂದ ಅನುಭವ ಪ್ರಮಾಣಪತ್ರ ಅಗತ್ಯವಾಗಿದೆ
* ಸಂದರ್ಶನ ಕ್ಕೆ Wealth Management, Mutual Funds, Insurance, Portfolio Management ಬಗ್ಗೆ ತಿಳಿದುಕೊಳ್ಳಿ
* MBA ಇಲ್ಲದಿದ್ದರೂ ಅತ್ಯುತ್ತಮ ಅನುಭವ ಇದ್ದರೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

