SBI And Canara Bank Home Loan: ಮಧ್ಯಮ ವರ್ಗದ ಜನರಿಗೆ ಮನೆಯನ್ನು ಕಟ್ಟುವುದು ಅಥವಾ ಖರೀದಿಸುವುದು ದೊಡ್ಡ ಕನಸಾಗಿರುತ್ತದೆ. ಈ ಕನಸನ್ನು ಈಡೇರಿಸಿಕೊಳ್ಳುವ ಸಲುವಾಗಿ ಗೃಹ ಸಾಲವನ್ನು ಪಡೆದುಕೊಳ್ಳುತ್ತಾರೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಗೃಹ ಸಾಲದ ಬಡ್ಡಿದರದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಯಾವ ಬ್ಯಾಂಕ್ ಕಡಿಮೆ ಬಡ್ಡಿಗೆ ಗೃಹ ಸಾಲವನ್ನು ನೀಡುತ್ತಿದೆ ಎಂದು ತಿಳಿದುಕೊಂಡು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು ಉತ್ತಮ. ಜನರು ಸಾಮಾನ್ಯವಾಗಿ ಕೆನರಾ ಬ್ಯಾಂಕ್ ಮತ್ತು SBI ಹೆಚ್ಚು ಹೆಚ್ಚು ಗೃಹಸಾಲ ಮಾಡುವುದನ್ನು ನಾವು ಗಮನಿಸಬಹುದು. ಈ ಲೇಖನದಲ್ಲಿ ಕೆನರಾ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹಸಾಲ ಮಾಡಲು ಯಾವ ಬ್ಯಾಂಕ್ ಉತ್ತಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗಿದೆ.
Canara Bank And SBI Home Loan
ನಿಮ್ಮ ಕನಸಿನ ಮನೆಯನ್ನು ನಿರ್ಮಿಸಲು ಗೃಹ ಸಾಲ ಮಾಡಬೇಕು ಅಂದುಕೊಂಡಿದ್ದೀರಾ..? ಇದೀಗ ನಾವು SBI ಮತ್ತು ಕೆನರಾ ಬ್ಯಾಂಕ್ ಬಡ್ಡಿದರಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಈ ಎರಡು ಬ್ಯಾಂಕ್ ಗಳು ಸರ್ಕಾರೀ ಬ್ಯಾಂಕ್ ಆಗಿದೆ, ಆದರೆ ಇವುಗಳ ಬಡ್ಡಿದರ, ಶುಲ್ಕ ಹಾಗೆ ಅರ್ಹತೆಗಳು ಬೇರೆ ಬೇರೆ ಆಗಿದೆ. ಇವೆಲ್ಲದರ ಬಗ್ಗೆ ನಾವೀಗ ವಿವರವಾದ ಮಾಹಿತಿಯನ್ನ ತಿಳಿದುಕೊಳ್ಳೋಣ.
ಕೆನರಾ ಬ್ಯಾಂಕ್ ಗೃಹ ಸಾಲ
ಕೆನರಾ ಬ್ಯಾಂಕ್ಕೆ 5 ರಿಂದ 30 ವರ್ಷಗಳ ವರೆಗೆ ಗೃಹ ಸಾಲವನ್ನು ನೀಡುತ್ತದೆ. ಇನ್ನು ಕೆನರಾ ಬ್ಯಾಂಕ್ ನ ಗೃಹ ಸಾಲದ ಬಡ್ಡಿದರ ಸುಮಾರು 7.15% ನಿಂದ ಆರಂಭವಾಗುತ್ತದೆ. ಬಡ್ಡಿದರಗಳು ಸಾಮಾನ್ಯವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಆದಾಯಕ್ಕೆ ತಕ್ಕಂತೆ ಬದಲಾವಣೆ ಆಗುತ್ತದೆ ಹಾಗಾಗಿ ಬಡ್ಡಿದರ ಸರಾಸರಿ 8.5% ನಿಂದ ಆರಂಭವಾಗುತ್ತದೆ. https://canarabank.bank.in/housing-loan ವೆಬ್ ಸೈಟ್ ಗೆ ಭೇಟಿನೀಡುವ ಮೂಲಕ ಬಡ್ಡಿದರ ತಿಳಿದುಕೊಂಡು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಕೆನರಾ ಬ್ಯಾಂಕ್ ನಲ್ಲಿ ಪ್ರೊಸೆಸಿಂಗ್ ಫೀಸ್ (Processing Fee) ಸಾಮಾನ್ಯವಾಗಿ 0.50% (ಕನಿಷ್ಠ 1500 ರಿಂದ 10000 + GST) ವರೆಗೆ ಇರುತ್ತದೆ.
SBI ಗೃಹ ಸಾಲ
2025 ರಲ್ಲಿ SBI ನ ಗೃಹ ಸಾಲದ ಬಡ್ಡಿದರ 7.25% ನಿಂದ 8.45% ಆಗಿದೆ. ಈ ಬಡ್ಡಿದರ ಕ್ರೆಡಿಟ್ ಸ್ಕೋರ್ ಮೇಲೆ ಬದಲಾವಣೆ ಆಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ನೀವು ತೆಗೆದುಕೊಂಡ ಸಾಲದ ಬಡ್ಡಿದರ ಕೂಡ ಕಡಿಮೆ ಆಗುತ್ತದೆ. ನಿಮ್ಮ ಮಾಸಿಕ ಸಂಬಳದ ಆಧಾರದ ಮೇಲೆ ಬ್ಯಾಂಕ್ ಗೃಹ ಸಾಲವನ್ನು ನೀಡುತ್ತದೆ. SBI ನಲ್ಲಿ ಗರಿಷ್ಠ ಸಾಲದ ಅವಧಿ 30 ವರ್ಷಗಳು ಆಗಿರುತ್ತದೆ, ಹಾಗೆ ಮರುಪಾವತಿ ಅವಧಿ 70 ವರ್ಷಗಳು ಆಗಿರುತ್ತದೆ. SBI ನಲ್ಲಿ ಪ್ರೊಸೆಸಿಂಗ್ ಫೀಸ್ (Processing Fee) ಸಾಮಾನ್ಯವಾಗಿ 0.35% (ಕನಿಷ್ಠ 2000 ದಿಂದ 10000 + GST) ವರೆಗೆ ಇರುತ್ತದೆ.
Canara Bank ಸಾಲಕ್ಕೆ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಭಾವಚಿತ್ರ
- ಯುಟಿಲಿಟಿ ಬಿಲ್ ಅಥವಾ ರೆಂಟ್ ಅಗ್ರಿಮೆಂಟ್
- ಕಳೆದ 3-6 ತಿಂಗಳ ಸಂಬಳ ಸ್ಲಿಪ್
- ಬ್ಯಾಂಕ್ ಪಾಸ್ ಬುಕ್
- ಆಸ್ತಿ ದಾಖಲೆಗಳು
- ಸ್ವಯಂ ಉದ್ಯೋಗಿಗಳು ಹೆಚ್ಚುವರಿಯಾಗಿ, IT Returns, Balance Sheet ನೀಡಬೇಕು.
SBI ಸಾಲಕ್ಕೆ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಸಂಬಳ ಪಡೆಯುವವರು, ಫಾರ್ಮ್ 16 ಮತ್ತು 3 ತಿಂಗಳ ಸಂಬಳದ ಸ್ಲಿಪ್ ನೀಡಬೇಕು
- ಸ್ವಂತ ಉದ್ಯೋಗ ಮಾಡುವವರು ITR 3 ವರ್ಷ ಮತ್ತು GST ರಿಟರ್ನ್ಸ್ ಕೊಡಬೇಕು
- ಆಸ್ತಿ ದಾಖಲೆಗಳು (ಸೇಲ್ ಅಗ್ರಿಮೆಂಟ್, Encumbrance ಸರ್ಟಿಫಿಕೇಟ್)
ಕೆನರಾ ಬ್ಯಾಂಕ್ ನಲ್ಲಿ ಆನ್ಲೈನ್ ಮೂಲಕ ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಮೊದಲು https://www.canarabank.bank.in/ ಗೆ ಭೇಟಿ ನೀಡಿ, ಮೊಬೈಲ್ ನಂಬರ್ ಹಾಕಿ ನಂತರ OTP ನಮೂದಿಸಬೇಕು. ವಯಕ್ತಿಕ ದಾಖಲೆ, ಉದ್ಯೋಗ, ಆದಾಯ ವಿವರವನ್ನು ಭರ್ತಿ ಮಾಡಬೇಕು. ನಂತರ ದಾಖಲೆಗಳನ್ನು ಅಪ್ಲೋಡ್ ಮಾಡಿ KYC ಪೂರ್ಣಗೊಳಿಸಬೇಕು. ನಿಮಗೆ 24 ರಿಂದ 48 ಗಂಟೆಗಳಲ್ಲಿ ಸಾಲ ಮಂಜೂರಾತಿ ಪತ್ರ ಬರುತ್ತದೆ.
SBI ನಲ್ಲಿ ಈ ರೀತಿಯಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಮೊದಲು ಆನ್ಲೈನ್ ನಲ್ಲಿ SBI YONO ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ, ನಂತರ ಸಾಲಗಳು ವಿಭಾಗಕ್ಕೆ ಹೋಗಿ ಗೃಹ ಸಾಲವನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ವಯಕ್ತಿಕ ವಿವರಗಳು, ಆದಾಯದ ವಿವರಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ.
ಈ ಎರಡು ಬ್ಯಾಂಕ್ ಗಳ ಗೃಹ ಸಾಲದ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ, ನಿಮಗೆ ಯಾವುದು ಉತ್ತಮ ಅನಿಸುತ್ತದೆ ಆ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಎರಡು ಬ್ಯಾಂಕ್ ನಲ್ಲಿ ಪ್ಲೋಟಿಂಗ್ ರೇಟ್ (Floting Rate) ಲೋನ್ ಗಳಿಗೆ ಪ್ರಿ ಪೇಮೆಂಟ್ ಅಥವಾ ಫ್ಲೋರ್ ಕ್ಲೋಸರ್ ಚಾರ್ಜ್ ಇರುವುದಿಲ್ಲ.
ವಿಶೇಷ ಸೂಚನೆ: ನಾಡುನುಡಿ ಮಾದ್ಯಮದಲ್ಲಿ ಯಾವುದೇ ಸುಳ್ಳುಸುದ್ದಿ ಪ್ರಕಟಿಸಲಾಗುವುದಿಲ್ಲ. ಬ್ಯಾಂಕಿಂಗ್ ಬಡ್ಡಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಂದೇ ಬ್ಯಾಂಕುಗಳಿಗೆ ಭೇಟಿನೀಡಿ.

