SBI vs Canara Bank Home Loan Comparison: ನಿಮ್ಮ ಕನಸಿನ ಮನೆಯನ್ನು ನಿರ್ಮಿಸಿಕೊಳ್ಳಲು ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಎಲ್ಲ ಬ್ಯಾಂಕ್ ನಲ್ಲಿ ಕೂಡ ಗೃಹ ಸಾಲದ ಬಡ್ಡಿದರ ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವು ಬ್ಯಾಂಕ್ ನಲ್ಲಿ ಬಡ್ಡಿದರ ಕಡಿಮೆ ಇರುತ್ತದೆ. ಈ ಕಾರಣದಿಂದ ನೀವು ಎಲ್ಲ ಬ್ಯಾಂಕ್ ನಲ್ಲಿ ಮಾಹಿತಿ ಪಡೆದು, ನಂತರ ಗೃಹ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಇದೀಗ ನಾವು ನಿಮಗೆ ಗೃಹಸಾಲ ಪಡೆದುಕೊಳ್ಳಲು SBI ಮತ್ತು ಕೆನರಾ ಬ್ಯಾಂಕ್ ನಲ್ಲಿ ಯಾವುದು ಉತ್ತಮ ಅನ್ನುವ ಬಗ್ಗೆ ಮಾಹಿತಿಯನ್ನ ನೀಡುತ್ತೇವೆ. ಈ ಹೋಲಿಕೆ ನೋಡಿದ ನಂತರ ನಿಮಗೆ ಯಾವುದು ಉತ್ತಮ ಅನಿಸುತ್ತದೆ ಅಲ್ಲಿ ಹೋಂ ಲೋನ್ ಪಡೆದುಕೊಳ್ಳಬಹುದಾಗಿದೆ.
* ಬಡ್ಡಿದರ ಹೋಲಿಕೆ
ಎರಡು ಸಾರ್ವಜನಿಕ ವಲಯದ ಬ್ಯಾಂಕ್ ಗಳು ಸ್ಫರ್ಧಾತ್ಮಕ ಬಡ್ಡಿದರವನ್ನು ನೀಡುತ್ತಿವೆ. ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಉತ್ತಮವಾಗಿದ್ದರೆ ಕಡಿಮೆ ಬಡ್ಡಿಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. SBI ನಲ್ಲಿ ಗೃಹ ಸಾಲದ ಬಡ್ಡಿದರ 7.50% ನಿಂದ ಪ್ರಾರಂಭವಾಗಿ 8.70% ವರೆಗೆ ಇರುತ್ತದೆ. SBI ಮಹಿಳೆಯರಿಗೆ ಕಡಿಮೆ ಬಡ್ಡಿದರವನ್ನು ನೀಡುತ್ತಿದೆ. ಇನ್ನು ಕೆನರಾ ಬ್ಯಾಂಕ್ ನ ಆರಂಭಿಕ ಬಡ್ಡಿದರ 7.40% ನಿಂದ 10.25% ವರೆಗೆ ಇದೆ.
* ಪ್ರೊಸೆಸಿಂಗ್ ಪೀ ಮತ್ತು ಸಾಲದ ಚಾರ್ಜಸ್
SBI ನಲ್ಲಿ ಪ್ರೊಸೆಸಿಂಗ್ ಫೀಸ್ (Processing Fee) ಸಾಮಾನ್ಯವಾಗಿ 0.35% (ಕನಿಷ್ಠ 2000 ದಿಂದ 10000 + GST) ವರೆಗೆ ಇರುತ್ತದೆ. ಇನ್ನು ಕೆನರಾ ಬ್ಯಾಂಕ್ ನಲ್ಲಿ 0.50% (ಕನಿಷ್ಠ 1500 ರಿಂದ 10000 + GST) ವರೆಗೆ ಇರುತ್ತದೆ. ಟೇಕ್ ಓವರ್ ಲೋನ್ ನಲ್ಲಿ ಕಡಿಮೆ ಚಾರ್ಜಸ್ ವಿಧಿಸಲಾಗುತ್ತದೆ. ಎರಡು ಬ್ಯಾಂಕ್ ನಲ್ಲಿ ಪ್ಲೋಟಿಂಗ್ ರೇಟ್ (Floting Rate) ಲೋನ್ ಗಳಿಗೆ ಪ್ರಿ ಪೇಮೆಂಟ್ ಅಥವಾ ಫ್ಲೋರ್ ಕ್ಲೋಸರ್ ಚಾರ್ಜ್ ಇರುವುದಿಲ್ಲ.
* ಸಾಲದ ಮೊತ್ತ ಮತ್ತು ಅವಧಿ
ಎರಡು ಬ್ಯಾಂಕ್ ನಲ್ಲಿ ಕನಿಷ್ಠ 30 ವರ್ಷಗಳ ಅವಧಿ ಇರುತ್ತದೆ. ಲೋನ್ ಮೊತ್ತ ನಿಮ್ಮ ಆದಾಯಕ್ಕೆ ಅನುಗುಣವಾಗಿ ಇರುತ್ತದೆ. 5 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಸಿಗಬಹುದು. ಇನ್ನು SBI ನಲಿ Max gain ಓವರ್ ಡ್ರಾಫ್ಟ್ ಸೌಲಭ್ಯ ಇರುತ್ತದೆ. ಇದರಿಂದ ಬಡ್ಡಿ ಉಳಿತಾಯ ಮಾಡಬಹುದು. ಹಾಗೆ ಕೆನರಾ ಬ್ಯಾಂಕ್ ನಲ್ಲಿ ಟಾಪ್ ಅಪ್ ಲೋನ್ ಮತ್ತು ಸೋಲಾರ್ ಲೋನ್ ನಂತಹ ವಿಶೇಷ ಸ್ಕೀಮ್ ಗಳು ಇವೆ.
ಈ ಎರಡು ಬ್ಯಾಂಕ್ ನಲ್ಲಿ ಯಾವುದು ಉತ್ತಮ?
ಕಡಿಮೆ ಬಡ್ಡಿದರ ಮತ್ತು ಹೆಚ್ಚು ಆಫರ್ ಗಳಿಗೆ ಕೆನರಾ ಬ್ಯಾಂಕ್ ಉತ್ತಮ ಆಯ್ಕೆ ಆಗಿದೆ. ಇನ್ನು SBI ನಲ್ಲಿ ಹೆಚ್ಚು ಶಾಖೆಗಳು, ವಿಶ್ವಾಸಾರ್ಹತೆಗಳು ಮತ್ತು ಸುಲಭ ಸೇವೆಗಳು ಲಭ್ಯವಿದೆ. ಮಹಿಳೆಯರು, ಸರ್ಕಾರೀ ನೌಕರರು ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಪಡೆದುಕೊಂಡವರಿಗೆ ಎರಡು ಬ್ಯಾಂಕ್ ನಲ್ಲಿ ರಿಯಾಯಿತಿ ಸಿಗುತ್ತದೆ. ಗೃಹಸಾಲ ಟೇಕ್ ಓವರ್ (Home Loan Take Over) ಮಾಡುವವರಿಗೆ ಕೆನರಾ ಬ್ಯಾಂಕ್ ಹೆಚ್ಚು ಆಕರ್ಷಕ ಆಫರ್ ಗಳನ್ನೂ ನೀಡುತ್ತದೆ. ಆನ್ಲೈನ್ ಅಪ್ಲಿಕೇಶನ್ ಮತ್ತು EMI ಕ್ಯಾಲ್ಕುಲೇಟರ್ ಎರಡು ಬ್ಯಾಂಕ್ ನಲ್ಲಿ ಲಭ್ಯವಿದೆ. ನಿಮ್ಮ ಆದಾಯ ಮತ್ತು ಕ್ರೆಡಿಟ್ ಸ್ಕೋರ್ ಗೆ ತಕ್ಕಂತೆ ಯಾವುದು ಉತ್ತಮ ಅದನ್ನು ಆಯ್ಕೆ ಮಾಡಿ. ಇದೀಗ ನಿಮಗೆ ಯಾವ ಬ್ಯಾಂಕ್ ಉತ್ತಮ ಅನಿಸುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

