Ads By Google

SBI: ಈಗ ವಾಟ್ಸಾಪ್ ಮೂಲಕ ಬಳಸಿ SBI ನ ಈ ಸೇವೆ, ಖಾತೆ ಇದ್ದವರಿಗೆ ಹೊಸ ಸೇವೆ ಆರಂಭಿಸಿದ SBI.

You can get bank details on your WhatsApp by sending just one message.

Image Credit: You can get bank details on your WhatsApp by sending just one message.

Ads By Google

SBI WhatsApp Banking: ದೇಶದ ಪ್ರತಿಷ್ಠಿತ ಸರಕಾರಿ ಬ್ಯಾಂಕ್ ಆಗಿರುವ ಎಸ್ ಬಿಐ (SBI) ತನ್ನ ಗ್ರಾಹಕರಿಗೆ ವಿವಿಧ ರೀತಿಯ ಸೌಲಭ್ಯವನ್ನು ನೀಡುತ್ತಿದೆ. ಇನ್ನು ಹೊಸ ಸೌಲಭ್ಯ ಒದಗಿಸುದರ ಜೊತೆಗೆ ಗ್ರಾಹಕರ ಸುರಕ್ಷತೆಗಾಗಿ ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಇದೀಗ ಎಸ್ ಬಿಐ ಬ್ಯಾಂಕ್ ತನ್ನ ಗ್ರಾಹರಿಗೆ ವಿಶೇಷ ಸೌಲಭ್ಯವನ್ನು ನೀಡಲು ಮುಂದಾಗಿದೆ.

ನೀವು ಎಸ್ ಬಿಐ ಬ್ಯಾಂಕ್ ನ ಗ್ರಾಹಕರಾಗಿದ್ದರೆ ಈ ಮಾಹಿತಿ ತಿಳಿದುಕೊಳ್ಳುವ ಮೂಲಕ ಬ್ಯಾಂಕ್ ನ ಹೊಸ ಸೇವೆಯ ಉಪಯೋಗವನ್ನು ಪಡೆದುಕೊಳ್ಳಿ.

ಎಸ್ ಬಿಐ ಖಾತೆದಾರರಿಗೆ ಸಿಹಿ ಸುದ್ದಿ
ಇತ್ತೀಚಿಗೆ ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp) ಹತ್ತು ಹಲವು ಫೀಚರ್ ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇನ್ನು ವಾಟ್ಸಾಪ್ ಬಳಕೆದಾರರು ವಾಟ್ಸಾಪ್ ನ ಮೂಲಕ ತಮ್ಮ ವೈಯಕ್ತಿಕ ವಿವರಗಳನ್ನು ಕೂಡ ಪಡೆಯಬಹುದು.

Image Credit: Rewariyasat

ಇತ್ತೀಚಿಗೆ ಹೆಚ್ಚಿನ ಬ್ಯಾಂಕ್ ಗಳು ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯವನ್ನು ನೀಡುತ್ತದೆ. ವಾಟ್ಸಾಪ್ ನ ಮೂಲಕ ಬ್ಯಾಂಕಿಂಗ್ ಸೌಲಭ್ಯ ಪಡೆಯುವುದು ಸುಲಭವಾಗಿದೆ.

ಕೇವಲ ಒಂದು ಸಂದೇಶ ನೀಡುವ ಮೂಲಕ ನಿಮ್ಮ ವಾಟ್ಸಾಪ್ ನಲ್ಲಿ ಬ್ಯಾಂಕ್ ನ ವಿವರಗಳನ್ನು ಪಡೆಯಬಹುದು. ಇದೀಗ ಎಸ್ ಬಿಐ ತನ್ನ ಗ್ರಾಹಕರಿಗೆ ಈ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ವಾಟ್ಸಾಪ್ ನ ಮೂಲಕ ಬ್ಯಾಂಕಿಂಗ್ ಸೌಲಭ್ಯ ಪಡೆಯುವುದು ಹೇಗೆ ಎನ್ನುವ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

ವಾಟ್ಸಾಪ್ ನಲ್ಲಿ ಬ್ಯಾಂಕಿಂಗ್ ಸೌಲಭ್ಯ
ಎಸ್ ಬಿಐ ಗ್ರಾಹಕರು ಇದೀಗ ವಾಟ್ಸಾಪ್ ನಲ್ಲಿ ತಮ್ಮ ಅಕೌಂಟ್ ಬ್ಯಾಲೆನ್ಸ್ ಪರಿಶೀಲನೆ, ಅಕೌಂಟ್ ಸ್ಟೇಟ್ಮೆಂಟ್ ಪಡೆಯುವುದು ಹಾಗೂ ಇನ್ನಿತರ ಬ್ಯಾಂಕ್ ನ ವಿವರವನ್ನು ತಿಳಿದುಕೊಳ್ಳಬಹುದು. ಬ್ಯಾಂಕ್ ಗೆ ನೋಂದಾಯಿಸಲಾದ ನಂಬರ್ ನ ಮೂಲಕ 7208933148 ನಂಬರ್ ಗೆ ಸಂದೇಶ ಕಳುಹಿಸಿ ನಿಮ್ಮ ಬ್ಯಾಂಕ್ ವಿವರವನ್ನು ತಿಳಿದುಕೊಳ್ಳಬಹುದು.

Image Credit: Tv9hindi

ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸುವ ವಿಧಾನ
WAREG ಟೈಪ್ ಮಾಡಿ ನಿಮ್ಮ ಅಕೌಂಟ್ ನಂಬರ್ ನಲ್ಲಿ  1234567890 ಎಂದು ಮೆಸ್ಸೇಜ್ ಟೈಪ್ ಮಾಡಿ 7208933148 ಸಂಖ್ಯೆಗೆ ಸಂದೇಶ ಕಳುಹಿಸಬೇಕು. ಈ ರೀತಿ ಮಾಡಿದಾಗ ನಿಮ್ಮ ವಾಟ್ಸಾಪ್ ನಲ್ಲಿ ಬ್ಯಾಂಕಿಂಗ್ ಸೇವೆ ನೋಂದಣಿ ಆಗುತ್ತದೆ. ಧ್ರಡೀಕರಣ ಸ್ವೀಕೃತಿ ಮೆಸ್ಸೇಜ್ ಕೂಡ ವಾಟ್ಸಾಪ್ ಸಂಖ್ಯೆಗೆ ಬರುತ್ತದೆ. ವಾಟ್ಸಾಪ್ ಬ್ಯಾಂಕಿಂಗ್ ನ ಮೂಲಕ ನಿಮ್ಮ ಖಾತೆಯ ಎಲ್ಲ ವೈಯಕ್ತಿಕ ವಿವರವನ್ನು ತಿಳಿದುಕೊಳ್ಳಬಹುದು.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in