SBI Yono: SBI ನಲ್ಲಿ ಖಾತೆ ಇದ್ದವರಿಗೆ ಇನ್ನೊಂದು ಹೊಸ ಸೇವೆ, Yono ಆಪ್ ನಲ್ಲಿ ಹೊಸ ಸೇವೆ ಆರಂಭ.
SBI ನ ಈ ಹೊಸ ಸೌಲಭ್ಯದ ಮೂಲಕ ಗ್ರಾಹಕರ ಪಾವತಿ ಇನ್ನಷ್ಟು ಸುಲಭವಾಗಲಿದೆ.
SBI YONO Application New Update: ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ತನ್ನ ಗ್ರಾಹಕರಿಗಾಗಿ ಹೆಚ್ಚಿನ ಸೌಲಭ್ಯವನ್ನು ನೀಡುತ್ತಲೇ ಇರುತ್ತದೆ. ಇತ್ತೀಚಿಗೆ Online Banking ಹೆಚ್ಚುತ್ತಿದೆ. ಬ್ಯಾಂಕುಗಳು ತನ್ನ ಗ್ರಾಹಕರಿಂಗಿ ವಿವಿಧ ಸೌಲಭ್ಯವನ್ನು ನೀಡುತ್ತಾ ಗ್ರಾಹಕರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಿದೆ.
ಸದ್ಯ ಸರ್ಕಾರೀ ವಲಯದ ಪ್ರತಿಷ್ಠಿತ ಬ್ಯಾಂಕ್ ಆಗಿರುವ State Bank Of India ತನ್ನ ಗ್ರಾಹಕರಿಗಾಗಿ ಹೊಸ ಸೌಲಭ್ಯವನ್ನು ನೀಡಿದೆ. SBI ನ ಈ ಹೊಸ ಸೌಲಭ್ಯದ ಮೂಲಕ ಗ್ರಾಹಕರ ಪಾವತಿ ಇನ್ನಷ್ಟು ಸುಲಭವಾಗಲಿದೆ.
SBI ನಲ್ಲಿ ಖಾತೆ ಇದ್ದವರಿಗೆ ಇನ್ನೊಂದು ಹೊಸ ಸೇವೆ
ಸದ್ಯ ದೇಶದಲ್ಲಿ UPI Payment ಜನಸ್ನೇಹಿಯಾಗಿದೆ. ಅನೇಕ ರೀತಿಯ ವಹಿವಾಟುಗಳು UPI ಮೂಲಕವೇ ನಡೆಯುತ್ತಿದೆ. UPI Application ಗಳು ಪರಿಚಯವಾದಾಗಿನಿಂದ ಜನರು ಬ್ಯಾಂಕ್ ಗೆ ಭೇಟಿ ನೀಡುವುದನ್ನು ಕಡಿಮೆ ಮಾಡಿದ್ದಾರೆ. ಇನ್ನು UPI ತನ್ನ ಅಪ್ಲಿಕೇಶನ್ ನಲ್ಲಿ ಹೊಸ ಸೇವೆಯನ್ನು ಪರಿಚಯಿಸುತ್ತಿದ್ದಂತೆ ವಿವಿಧ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹೊಸ ಸೇವೆಯನ್ನ ನೀಡಲು ಮುಂದಾಗುತ್ತದೆ. ಸದ್ಯ SBI ತನ್ನ ಗ್ರಾಹಕರಿಗೆ ಹೊಸ App ಅನ್ನು ಪರಿಚಯಿಸುವ ಮೂಲಕ ಆನ್ಲೈನ್ ವಹಿವಾಟನ್ನು ಇನ್ನಷ್ಟು ಸುಲಭಗೊಳಿಸಿದೆ.
SBI YONO Application
ಪ್ರತಿಷ್ಠಿತ ಸರ್ಕಾರೀ ಬ್ಯಾಂಕ್ ಗಳಲ್ಲಿ ಒಂದಾದ SBI ಇದೀಗ ತನ್ನ ಆನ್ಲೈನ್ ಬ್ಯಾಂಕಿಂಗ್ ಅನ್ನು ಇನ್ನಷ್ಟು ವಿಸ್ತರಿಸಲು ಸಿದ್ಧತೆ ನಡೆಸುತ್ತಿದೆ. ಇದೀಗ ಎಸ್ ಬಿಐ ತನ್ನ YONO ಅಪ್ಲಿಕೇಶನ್ (SBI YONO Application) ನ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ನವೀಕರಿಸಿದ YONO ಅಪ್ಲಿಕೇಶನ್ ನ ಮೂಲಕ ಗ್ರಾಹಕರು ನೇರ ಪಾವತಿಯನ್ನು ಮಾಡಲು ಸಾಧ್ಯವಾಗುತ್ತದೆ. ಸದ್ಯ SBI ತನ್ನ YONO ಅಪ್ಲಿಕೇಶನ್ ನಲ್ಲಿ ಹೊಸ ಸೇವೆ ತರಲು ಮುಂದಾಗಿದೆ.
YONO ಆಪ್ ನಲ್ಲಿ ಹೊಸ ಸೇವೆ ಆರಂಭ
ಸದ್ಯ State bank Of India YONO ಆಪ್ ನಲ್ಲಿ ಹೊಸ ಸೇವೆ ಆರಂಭಿಸಿದೆ. SBI ತನ್ನ ಮೊಬೈಲ್ ಅಪ್ಲಿಕೇಶನ್ YONO ಮೂಲಕ NRE ಮತ್ತು NRO ಖಾತೆಗಳನ್ನು (Savings And Current Cccount) ಸುಲಭವಾಗಿ ತೆರೆಯಲು ಅನಿವಾಸಿ ಭಾರತೀಯರಿಗೆ (Non-Resident Indians -NRIs) ಡಿಜಿಟಲ್ ಸೌಲಭ್ಯವನ್ನು ಪ್ರಾರಂಭಿಸಿದೆ.
NRI Account
ನಾನ್ ರೆಸಿಡೆನ್ಶಿಯಲ್ ಎಕ್ಸ್‌ಟರ್ನಲ್ (NRI) ಖಾತೆಯು NRI ಹೆಸರಿನಲ್ಲಿ ತನ್ನ ವಿದೇಶಿ ಗಳಿಕೆಯನ್ನು ಭಾರತದಲ್ಲಿ ಠೇವಣಿ ಮಾಡಲು ತೆರೆಯಲಾದ ಬ್ಯಾಂಕ್ ಖಾತೆಯಾಗಿದೆ. ಗ್ರಾಹಕರು ಸುಲಭವಾಗಿ ಮತ್ತು ನಿಖರವಾಗಿ ಖಾತೆಗಳನ್ನು ತೆರೆಯಲು ಸಹಾಯ ಮಾಡುವ ತಡೆರಹಿತ, ಡಿಜಿಟಲೈಸ್ಡ್ ಖಾತೆ ತೆರೆಯುವ ಪ್ರಕ್ರಿಯೆಯನ್ನು ರಚಿಸಲು ಬ್ಯಾಂಕ್ ತಂತ್ರಜ್ಞಾನವನ್ನು ಬಳಸಿಕೊಂಡಿದೆ ಎಂದು SBI ಹೇಳಿಕೆಯಲ್ಲಿ ತಿಳಿಸಿದೆ. ಇದು NRI ಗಳಿಗೆ ಅವರ ಬ್ಯಾಂಕಿಂಗ್ ಅಗತ್ಯಗಳಿಗಾಗಿ ಒಂದು ನಿಲುಗಡೆ ಪರಿಹಾರವಾಗಿದೆ.