Sukanya Samriddhi Yojana Detailed Information: ಸುಕನ್ಯಾ ಸಮೃದ್ಧಿ ಯೋಜನೆಯು ಪೋಷಕರು ತಮ್ಮ ಮಗಳ ಭವಿಷ್ಯವನ್ನು ಸುರಕ್ಷಿತ ಗೊಳಿಸಲು ಇರುವ ಒಂದು ಉತ್ತಮ ಮಾರ್ಘ. ಹೌದು ಹೆಣ್ಣು ಮಕ್ಕಳ ಆರ್ಥಿಕ ಭದ್ರತೆ ಮತ್ತು ಸುರಕ್ಷತೆ ಯನ್ನು ಉತ್ತೇಜಿಸುದು ಇದರ ಉದ್ದೇಶ ಆಗಿದೆ. ಭಾರತ ಸರ್ಕಾರದ ಬೆಂಬಲದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಹಾಗೆ ಈ ಯೋಜನೆ ತೆರಿಗೆ ಮುಕ್ತ ಲಾಭವನ್ನು ನೀಡುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆ (SSY) ಭಾರತ ಸರ್ಕಾರದ ಒಂದು ಸುರಕ್ಷಿತ ಉಳಿತಾಯ ಯೋಜನೆಯಾಗಿದ್ದು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗಾಗಿ ವಿನ್ಯಾಸಿಸಲಾಗಿದೆ. ಇದನ್ನು 2015ರಲ್ಲಿ ಪ್ರಾರಂಭಿಸಲಾಯಿತು ಮತ್ತು ಪೋಸ್ಟ್ ಆಫೀಸ್ ಅಥವಾ ಅಧಿಕೃತ ಬ್ಯಾಂಕುಗಳಲ್ಲಿ ಖಾತೆ ತೆರೆಯಬಹುದು. ಪ್ರಸ್ತುತ, ಈ ಯೋಜನೆಯಲ್ಲಿ 8.2% ಬಡ್ಡಿದರವಿದ್ದು, ಇದು ಸಂಯುಕ್ತ ಬಡ್ಡಿಯೊಂದಿಗೆ ಲೆಕ್ಕಹಾಕಲಾಗುತ್ತದೆ. ಈ ಯೋಜನೆಯು ತೆರಿಗೆ ಮುಕ್ತವಾಗಿದ್ದು, EEE (Exempt-Exempt-Exempt) ಸ್ಥಿತಿಯನ್ನು ಹೊಂದಿದೆ – ಅಂದರೆ ಹೂಡಿಕೆ, ಬಡ್ಡಿ ಮತ್ತು ಮ್ಯಾಚುರಿಟಿ ಮೊತ್ತ ಎಲ್ಲವೂ ತೆರಿಗೆ ರಹಿತ.
ಈ ಯೋಜನೆಯು ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಸಹಾಯ ಮಾಡುತ್ತದೆ. ಒಂದು ಕುಟುಂಬದಿಂದ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಖಾತೆ ತೆರೆಯಬಹುದು, ಆದರೆ ಅವಳಿಜವಳಿಗಳಿದ್ದರೆ ಮೂರು ಖಾತೆಗಳನ್ನು ಅನುಮತಿಸಲಾಗುತ್ತದೆ. 2025ರಲ್ಲಿ ಇದು ಇನ್ನೂ ಜನಪ್ರಿಯವಾಗಿದ್ದು, ಲಕ್ಷಾಂತರ ಖಾತೆಗಳು ತೆರೆಯಲಾಗಿವೆ.
ಅರ್ಹತೆ ಹಾಗೆ ಖಾತೆ ತೆರೆಯುವ ವಿಧಾನ
ಹೆಣ್ಣು ಮಗು 10 ವರ್ಷದೊಳಗಿನವಳಾಗಿದ್ದರೆ ಮಾತ್ರ ಖಾತೆ ತೆರೆಯಬಹುದು. ಪೋಷಕರು ಅಥವಾ ಕಾನೂನು ಪೋಷಕರು ಖಾತೆಯನ್ನು ನಿರ್ವಹಿಸುತ್ತಾರೆ. ಖಾತೆ ತೆರೆಯಲು ಜನ್ಮ ಪ್ರಮಾಣಪತ್ರ, ಆಧಾರ್ ಕಾರ್ಡ್ ಮತ್ತು ವಿಳಾಸ ಪುರಾವೆಯಂತಹ ದಾಖಲೆಗಳು ಬೇಕು. ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿನಲ್ಲಿ ಸರಳವಾಗಿ ತೆರೆಯಬಹುದು, ಮತ್ತು ಆನ್‌ಲೈನ್ ಸೌಲಭ್ಯವೂ ಲಭ್ಯವಿದೆ.
ವಾರ್ಷಿಕವಾಗಿ ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಕನಿಷ್ಠ ಠೇವಣಿ ಮಾಡದಿದ್ದರೆ ಖಾತೆ ಡೀಫಾಲ್ಟ್ ಆಗುತ್ತದೆ, ಆದರೆ 50 ರೂಪಾಯಿ ದಂಡ ಪಾವತಿಸಿ ಮರುಪ್ರಾರಂಭಿಸಬಹುದು. ಠೇವಣಿಗಳನ್ನು ನಗದು, ಚೆಕ್ ಅಥವಾ ಆನ್‌ಲೈನ್ ಮೂಲಕ ಮಾಡಬಹುದು.
ಹೂಡಿಕೆ ಹಾಗೆ ಲಾಭ
ದಿನಕ್ಕೆ 400 ರೂಪಾಯಿ ಉಳಿಸಿದರೆ (ಅಂದರೆ ತಿಂಗಳಿಗೆ ಸುಮಾರು 12,000 ರೂಪಾಯಿ ಅಥವಾ ವರ್ಷಕ್ಕೆ 1.5 ಲಕ್ಷ), 15 ವರ್ಷಗಳ ಹೂಡಿಕೆಯ ನಂತರ 21 ವರ್ಷಗಳಲ್ಲಿ ಸುಮಾರು 70 ಲಕ್ಷ ರೂಪಾಯಿ ಪಡೆಯಬಹುದು. ಉದಾಹರಣೆಗೆ, 5 ವರ್ಷದ ಮಗುವಿಗೆ ಪ್ರಾರಂಭಿಸಿದರೆ, ಒಟ್ಟು ಹೂಡಿಕೆ 22.5 ಲಕ್ಷ ರೂಪಾಯಿ, ಬಡ್ಡಿ ಸುಮಾರು 46.77 ಲಕ್ಷ ರೂಪಾಯಿ ಆಗುತ್ತದೆ. ಇದು ಸಂಯುಕ್ತ ಬಡ್ಡಿಯ ಲೆಕ್ಕಾಚಾರದಿಂದ ಬರುತ್ತದೆ.
ಬಡ್ಡಿದರವು ಪ್ರತಿ ತ್ರೈಮಾಸಿಕವಾಗಿ ಪರಿಷ್ಕರಣೆಗೊಳ್ಳುತ್ತದೆ, ಆದರೆ 2025ರ ಆಗಸ್ಟ್‌ನಲ್ಲಿ ಇದು 8.2% ಆಗಿದೆ. ಇದು ಬ್ಯಾಂಕ್ FDಗಳಿಗಿಂತ ಹೆಚ್ಚು ಲಾಭದಾಯಕ ಮತ್ತು ಸುರಕ್ಷಿತ.
ಮೆಚುರಿಟಿ ಅವಧಿ
ಖಾತೆ ತೆರೆದ 21 ವರ್ಷಗಳ ನಂತರ ಮ್ಯಾಚುರಿಟಿ ಆಗುತ್ತದೆ, ಆದರೆ ಠೇವಣಿಗಳು ಕೇವಲ 15 ವರ್ಷಗಳು. ಮಗಳು 18 ವರ್ಷ ತುಂಬಿದ ನಂತರ ಅಥವಾ 10ನೇ ತರಗತಿ ಪಾಸ್ ಆದ ನಂತರ ಹಣ ಹಿಂಪಡೆಯಬಹುದು. ಶಿಕ್ಷಣಕ್ಕಾಗಿ 50% ವರೆಗೆ ಹಿಂಪಡೆಯಬಹುದು, ಮತ್ತು ಮದುವೆಗಾಗಿ ಮ್ಯಾಚುರಿಟಿ ಮೊದಲೇ ಮುಗಿಸಬಹುದು.
ಖಾತೆಯನ್ನು ಮಗಳು 18 ವರ್ಷ ತುಂಬಿದ ನಂತರ ಸ್ವತಃ ನಿರ್ವಹಿಸಬಹುದು. ಅಕಾಲಿಕ ಮುಚ್ಚುವಿಕೆಗೆ ಕೆಲವು ನಿಯಮಗಳಿವೆ, ಉದಾಹರಣೆಗೆ ಮಗಳ ಮರಣ ಅಥವಾ ತೀವ್ರ ಕಾಯಿಲೆ.