Kisan Credit Card Loan: ದೇಶದಲ್ಲಿ ರೈತರಿಗೆ ಸಾಲ ಸೌಲಭ್ಯ ನೀಡಲು ಹಲವಾರು ಯೋಜನೆಗಳು ಜಾರಿಯಲ್ಲಿದೆ. ಇದೀಗ ರೈತರನ್ನು ಸಾಲದಾತರಿಂದ ರಕ್ಷಿಸಲು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ. ಈ ಯೋಜನೆಯ ಮೂಲಕ ರೈತರು 5 ಲಕ್ಷ ರೂ.ವರೆಗಿನ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಯಾವ ಸೌಲಭ್ಯಗಳು?
ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಅಗತ್ಯವಾದ ಹಣಕಾಸಿನ ನೆರವು ಒದಗಿಸುತ್ತದೆ. ಈ ಯೋಜನೆಯಡಿ ರೈತರು ಒಟ್ಟು 5 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು, ಇದರಲ್ಲಿ 3 ಲಕ್ಷ ರೂ. ಬೆಳೆಗೆ ಮತ್ತು 2 ಲಕ್ಷ ರೂ. ಕೃಷಿಗೆ ಸಂಬಂಧಿಸಿದ ಇತರ ಕೆಲಸಗಳಿಗೆ ಸಿಗುತ್ತದೆ. ಸಾಲದ ಬಡ್ಡಿದರವು 7% ಆಗಿದ್ದರೂ, ಸರ್ಕಾರವು 2% ಬಡ್ಡಿ ಸಬ್ಸಿಡಿ ಮತ್ತು 3% ಸಕಾಲಿಕ ಮರುಪಾವತಿ ಬೋನಸ್ ಒದಗಿಸುವುದರಿಂದ, ರೈತರು ಕೇವಲ 4% ಬಡ್ಡಿಯಲ್ಲಿ ಸಾ�ಲ ಪಡೆಯಬಹುದು. ಇದು ದೇಶದ ಅತ್ಯಂತ ಕಡಿಮೆ ಬಡ್ಡಿಯ ಕೃಷಿ ಸಾಲವಾಗಿದೆ.
ಯಾರಿಗೆ ಸಿಗುತ್ತದೆ ಕಿಸಾನ್ ಕ್ರೆಡಿಟ್ ಕಾರ್ಡ್?
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಈ ಕೆಳಗಿನ ವರ್ಗದ ಜನರು ಅರ್ಹರಾಗಿದ್ದಾರೆ:
- ಸಣ್ಣ ಮತ್ತು ಅತಿ ಸಣ್ಣ ರೈತರು
- ಭೂರಹಿತ ಕೃಷಿ ಕಾರ್ಮಿಕರು
- ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಕೃಷಿ, ತೋಟಗಾರಿಕೆ, ಮತ್ತು ಡೈರಿ ಉದ್ಯಮದಲ್ಲಿ ತೊಡಗಿರುವವರು
- ಸ್ವ-ಸಹಾಯ ಗುಂಪುಗಳು (SHGs) ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳು (JLGs)
ಈ ಯೋಜನೆಯು ರೈತರಿಗೆ ಕೃಷಿಯ ಜೊತೆಗೆ, ಕೊಯ್ಲಿನ ನಂತರದ ಖರ್ಚು, ಗೃಹ ಬೇಡಿಕೆಗಳು, ತೋಟಗಾರಿಕೆ, ಮತ್ತು ಕೃಷಿ ಉಪಕರಣಗಳ ದುರಸ್ತಿಗೆ ಸಹ ಸಾಲ ಒದಗಿಸುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಬೇಕಾದ ದಾಖಲೆಗಳು
ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯವಾಗಿವೆ:
- ಗುರುತಿನ ಚೀಟಿ (ವೋಟರ್ ಐಡಿ, ಆಧಾರ್ ಕಾರ್ಡ್, ಅಥವಾ ಪ್ಯಾನ್ ಕಾರ್ಡ್)
- ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಅಥವಾ ಇತರ ದಾಖಲೆ
ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡರೆ ಅರ್ಜಿ ಪ್ರಕ್ರಿಯೆ ಸುಲಭವಾಗುತ್ತದೆ.