Summer Holiday 2024: ರಾಜ್ಯದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್, ಬೇಸಿಗೆ ರಜೆ ಕುರಿತಂತೆ ಬಿಗ್ ಅಪ್ಡೇಟ್ ನೀಡಿದ ಸಿದ್ದರಾಮಯ್ಯ.

ರಾಜ್ಯದ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ವಿಶೇಷ ಸೌಲಭ್ಯವನ್ನು ನೀಡಲು ಸರ್ಕಾರ ನಿರ್ಧರಿಸಿದೆ.

School Summer Holiday 2024 New Rule: ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಅಧಿಕಾರವನ್ನು ಪಡೆದುಕೊಂಡ ಸಮಯದಿಂದ ರಾಜ್ಯದಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎನ್ನಬಹುದು. ಚುನಾವಣಾ ಸಮಯದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳ ಬೆನ್ನಲ್ಲೇ ಸಾಕಷ್ಟು ಯೋಜನೆಗಳನ್ನು ಸರ್ಕಾರ ಘೋಷಿಸಿದೆ.

ಸದ್ಯ ರಾಜ್ಯ ಸರ್ಕಾರ ಮಕ್ಕಳಿಗಾಗಿ ವಿಶೇಷ ಸೌಲಭ್ಯವನ್ನು ತರಲು ನಿರ್ಧರಿಸಿದೆ. ಶಾಲಾ ಮಕ್ಕಳು ಇದೀಗ ಶೈಕ್ಷಣಿಕ ಸಾಲಿನ ಕೊನೆಯ ಹಂತದಲ್ಲಿದ್ದರೆ. ಇನ್ನು ಮಾರ್ಚ್ ತಿಂಗಳ ಪರೀಕ್ಷೆಯ ನಂತರ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ನೀಡಲಾಗುತ್ತದೆ. ಈ ಬೆಸೆಗೆ ರಜೆಯಲ್ಲಿ ಮಕ್ಕಳಿಗೆ ವಿಶೇಷ ಸೌಲಭ್ಯವನ್ನು ನೀಡಲು ಸರ್ಕಾರ ನಿರ್ಧರಿಸಿದೆ.

School Summer Holiday Mid Day Meal
Image Credit: Udayindia

ರಾಜ್ಯದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್
ಸದ್ಯ ಶಾಲಾ ಮಕ್ಕಳಿ ಬೇಸಿಗೆ ರಜೆಯ ಖುಷಿಯಲ್ಲಿದ್ದಾರೆ ಇದೀಗ ಬೇಸಿಗೆ ರಜೆಯ ಜೊತೆಗೆ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಕನ್ನಟಕದಲ್ಲಿನ ಬರ ಪರಿಸ್ಥಿಯನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಲ್ಲಿ ಮಹತ್ವದ ಬದಲಾವಣೆ ಆಗಲಿದೆ.

ಬೇಸಿಗೆ ರಜೆ ಕುರಿತಂತೆ ಬಿಗ್ ಅಪ್ಡೇಟ್ ನೀಡಿದ ಸಿದ್ದರಾಮಯ್ಯ
ಬೇಸಿಗೆ ರಜೆಯಲ್ಲೂ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟವನ್ನು ಮುಂದುವರಿಸಲು ಚಿಂತನೆ ನಡೆಸಲಾಗಿದೆ ಎಂದು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಕರ್ನಾಟಕ ಸರ್ಕಾರವು 2023-24 ರ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಬರಪೀಡಿತ ತಾಲ್ಲೂಕುಗಳನ್ನು ಘೋಷಿಸಿದೆ. ಏಪ್ರಿಲ್ 2024 ಮತ್ತು ಮೇ 2024 ತಿಂಗಳುಗಳ ರಜಾ ದಿನಗಳಲ್ಲಿ ರಾಜ್ಯ ಸರ್ಕಾರವು ಮಧ್ಯಾಹ್ನ ಊಟ ಯೋಜನೆಯಡಿ ಶಾಲಾ ಮಕ್ಕಳಿಗೆ ಆಹಾರವನ್ನು ವಿತರಿಸಲು ಆದೇಶವನ್ನು ಹೊರಡಿಸಿದೆ.

School Summer Holiday 2024 New Rule
Image Credit: Live Mint

ಶಾಲಾ ಮಕ್ಕಳ ಬೇಸಿಗೆ ರಜಾ ದಿನದ ವಿವರ
ಭಾರತದಲ್ಲಿನ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಲು, PM-POSHA ಯೋಜನೆಯಡಿಯಲ್ಲಿ ಮಧ್ಯಾಹ್ನದ ಊಟದ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಬಿಸಿಯೂಟದ ಜೊತೆಗೆ ಮಕ್ಕಳಿಗೆ ವಾರಕ್ಕೆ ಎರಡು ದಿನದಲ್ಲಿ ಮೊಟ್ಟೆಯನ್ನು ಕೂಡ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Join Nadunudi News WhatsApp Group

ಶಾಲಾ ಮಕ್ಕಳು ಬಿಸಿಯೂಟವನ್ನು ಎಲ್ಲ ದಿನಗಳಲ್ಲಿಯೂ ಪಡೆಯಬಹುದು. ಕರ್ನಾಟಕದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಈ ಬಾರಿ ಏಪ್ರಿಲ್ 11 ರಿಂದ ಮೇ 28 ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ. ಈ ಸಮಯದಲ್ಲಿ ಮಕ್ಕಳು ಮನೆಯಲ್ಲಿದ್ದರು ಕೂಡ ಶಾಲೆಗೆ ಬಂದು ಬಿಸಿಯೂಟವನ್ನು ಸವಿಯಬಹುದಾಗಿದೆ.

PM-POSHAN Scheme
Image Credit: Sunyaias

Join Nadunudi News WhatsApp Group