Saffron milk: ಮದುವೆಯ ಮೊದಲನೇ ರಾತ್ರಿ ವಧುವಿನ ಕೈಯಲ್ಲಿ ಹಾಲನ್ನು ಏಕೆ ಕೊಡುತ್ತಾರೆ, ವೈಜ್ಞಾನಿಕ ಕಾರಣ ತಿಳಿದುಕೊಳ್ಳಿ.
ಹೊಸದಾಗಿ ಮದುವೆಯಾಗಿರುವ ವಧು ವರನ ಕೋಣೆಗೆ ಹಾಲನ್ನು ತೆಗೆದುಕೊಂಡು ಹೋಗಲು ಕಾರಣವೇನು?
Scientific Reason For Saffron Milk: ಹಿಂದೂ ಧರ್ಮದ ಮದುವೆಯು (Marriage) ವಿಶೇಷ ಆಚರಣೆಯನ್ನು ಒಳಗೊಂಡಿರುತ್ತದೆ. ಹಿಂದೂ ಧರ್ಮದಲ್ಲಿ ಮದುವೆಯೂ ಸಂಪ್ರದಾಯದ ಪ್ರಕಾರ ನಡೆಯುತ್ತದೆ. ಮದುವೆಯ ಸಮಯದಲ್ಲಿ ವಿಶೇಷ ಆಚರಣೆಯನ್ನು ಮಾಡಲಾಗುತ್ತದೆ. ಸಾಕಷ್ಟು ಶಾಸ್ತ್ರಗಳನ್ನು ಮಾಡಿಕೊಂಡು ಶಾಸ್ತ್ರೋಸ್ತ್ರವಾಗಿ ಮದುವೆಯನ್ನು ನೆರವೇರಿಸಲಾಗುತ್ತದೆ.
ಮದುವೆಯ ಸಮಯದಲ್ಲಿ ಯಾವುದೇ ಶಾಸ್ತ್ರವನ್ನು ಮಿರುವಂತಿಲ್ಲ.ಯಾವುದೇ ಒಂದು ಶಾಸ್ತ್ರವನ್ನು ಮೀರಿದರು ಕೂಡ ಮದುವೆಗೆ ವಿಘ್ನ ಉಂಟಾಗುತ್ತದೆ ಎನ್ನುವುದು ಹಿರಿಯರ ನಂಬಿಕೆಯಾಗಿದೆ. ಸಾಮಾನ್ಯವಾಗಿ ಮದುವೆಯಲ್ಲಿ ಪುರೋಹಿತರು ಎಲ್ಲ ರೀತಿಯ ಶಾಸ್ತ್ರವನ್ನು ತಿಳಿದಿರುವ ಕಾರಣ ಮದುವೆಯನ್ನು ಶಾಸ್ತ್ರ ಬದ್ದವಾಗಿ ನೆರವೇರಿಸುತ್ತಾರೆ.
ಮದುವೆಯ ಮೊದಲನೇ ರಾತ್ರಿ ವಧುವಿನ ಕೈಯಲ್ಲಿ ಹಾಲನ್ನು ಏಕೆ ಕೊಡುತ್ತಾರೆ
ಮದುವೆಯಲ್ಲಿ ಹಲವು ವಿಧಿ ವಿಧಾನಗಳು ನಡೆಯುತ್ತದೆ. ಇನ್ನು ವಿವಾಹದ ಬಳಿಕ ಮೊದಲನೇ ರಾತ್ರಿಯ ಆಚರಣೆ ಮಾಡುವ ಪದ್ಧತಿ ಮೊದಲಿಂದ ಬಂದಿದೆ. ಇನ್ನು ಹೊಸದಾಗಿ ಮದುವೆಯಾಗಿರುವ ವಧು ವರನ ಕೋಣೆಗೆ ಹೋಗುವ ಸಮಯದಲ್ಲಿ ಒಂದು ಲೋಟ ಹಾಲನ್ನು ಹಿಡಿದುಕೊಂಡು ಹೋಗುತ್ತಾರೆ. ಇದು ಹಿಂದೂ ಧರ್ಮದ ವಿಶೇಷ ಸಂಪ್ರದಾಯವಾಗಿದೆ ಮತ್ತು ಈ ಸಂಪ್ರದಾಯಕ್ಕೆ ವಿಶೇಷ ಕಾರಣವಿದೆ.
ಮದುವೆಯ ಸಮಯದಲ್ಲಿ ಅನೇಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ವೈವಾಹಿಕ ಜೀವನದಲ್ಲಿ ಮೊದಲನೇ ರಾತ್ರಿಯೂ ನವ ಜೋಡಿಗೆ ವಿಶೇಷವಾಗಿರುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ನವ ವಧು ಮೊದಲನೇ ರಾತ್ರಿ ಹಾಲಿನಲ್ಲಿ ಕೇಸರಿ, ಬಾದಾಮಿ ಮಿಶ್ರಿತ ಹಾಲನ್ನು ತೆಗೆದುಕೊಂಡು ಕೋಣೆಗೆ ಹೋಗುತ್ತಾರೆ. ಹಿಂದಿನಿಂದಲೂ ಕೇಸರಿಯನ್ನು ಆರೋಗ್ಯಕರವಾದ ವಸ್ತುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ಕೇಸರಿ ಮಿಶ್ರಿತ ಹಾಲನ್ನು ನೀಡಲು ಕಾರಣವೇನು
ವೈಜ್ಞಾನಿಕವಾಗಿ ಕೇಸರಿಯು ಉತ್ತಮವಾದ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಮನಸ್ಥಿತಿಯನ್ನು ಸುಧಾರಿಸಲು, ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು, ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೇಸರಿಯನ್ನು ಹಾಲಿನಲ್ಲಿ ಬೆರಸಿ ನಿಯಮಿತವಾಗಿ ಸೇವಿಸುದರಿಂದ ಖಿನ್ನತೆಯ ಆರಂಭಿಕ ಚಿಹ್ನೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ಇನ್ನು ವಿವಾಹದ ಸಮಯದಲ್ಲಿ ನವ ಜೋಡಿ ಸಾಕಷ್ಟು ಶಾಸ್ತ್ರಗಳನ್ನು ಮಾಡುತ್ತಾರೆ. ಈ ವೇಳೆ ನವ ವಧು ವರ ಧಣಿದಿರುತ್ತಾರೆ. ಈ ಕಾರಣಕ್ಕೆ ದಂಪತಿಗಳಿಗೆ ವಿಶ್ರಾಂತಿ ಸಿಗಲೆಂದು ಒಂದು ಲೋಟ ಹಾಲನ್ನು ಮೊದಲ ರಾತ್ರಿಯಲ್ಲಿ ನೀಡಲಾಗುತ್ತದೆ.
ಹಾಲು ಟ್ರಿಟೋಫನ್ ಎನ್ನುವ ನಿದ್ರೆಯನು ಉಂಟುಮಾಡುವ ಅಂಶವನ್ನು ಹೊಂದಿರುತ್ತದೆ. ಆದ್ದರಿಂದ ಹಾಲು ಕುಡಿಯುವುದು ಉತ್ತಮ ನಿದ್ರೆ ಮಾಡಲು ಸಹಾಯಮಾಡುತ್ತದೆ. ದೇಹಕ್ಕೆ ವಿಶ್ರಾಂತಿ ಹಾಗು ಉತ್ತಮ ನಿದ್ರೆಯನ್ನು ನೀಡುವ ಕಾರಣ ಮೊದಲ ರಾತ್ರಿ ದಿನ ಒಂದು ಲೋಟ ಹಾಲನ್ನು ನೀಡಲಾಗುತ್ತದೆ.