Scientists Discover: ಇನ್ನುಮುಂದೆ ಮಾನವನಿಗೆ ವಯಸ್ಸೇ ಆಗಲ್ಲ, ಹೊಸ ಔಷಧ ಕಂಡುಹಿಡಿದ ವಿಜ್ಞಾನಿಗಳು.

ವಯಸ್ಸಾಗುದನ್ನು ತಡೆಯಲು ಹೊಸ ಔಷಧ ಕಂಡುಹಿಡಿದ ವಿಜ್ಞಾನಿಗಳು.

Scientists Discover A New Drug: ಪ್ರತಿಯೊಬ್ಬ ಮಾನವನು ವರ್ಷ ಕಳೆಯುತ್ತಿದ್ದಂತೆ ವಯಸ್ಸಾಗುವುದು ಸಹಜವಾಗಿದೆ. ಮಾನವನಿಗೆ ವರ್ಷ ಕಳೆದು ವಯಸ್ಸಾಗುವಿಕೆ ಜಗದ ನಿಯಮ ಎನ್ನಬಹುದು. ಇದೀಗ ವಯಸ್ಸಾಗುವಿಕೆಯನ್ನು ತಡೆಯಲು ವಿಜ್ಞಾನಿಗಳು ಮಾತ್ರೆಯೊಂದನ್ನು ಕಂಡು ಹಿಡಿದಿದ್ದಾರೆ. ಯಾವ ವಿಜ್ಞಾನಿಗಳು ಈ ಸಂಶೋಧನೆಯನ್ನು ಮಾಡಿದ್ದಾರೆ ಎಂಬ ಮಾಹಿತಿಯನ್ನು ತಿಳಿಯೋಣ.

Scientists Discover A New Drug
Image Credit: Medical

ವಯಸ್ಸಾಗುವಿಕೆಯನ್ನು ತಡೆಯಲು ಹೊಸ ಮಾತ್ರೆ ಕಂಡುಹಿಡಿದ ವಿಜ್ಞಾನಿಗಳು
ಹಾವರ್ಡ್ ಸ್ಕೂಲ್ ನ ವಿಜ್ಞಾನಿಗಳು ವಯಸ್ಸಾಗುವಿಕೆಯನ್ನು ನಿಲ್ಲಿಸುವಂತಹ ಮಾತ್ರೆಯೊಂದನ್ನು ಕಂಡು ಹಿಡಿದಿದ್ದಾರೆ. ಕೆಮಿಕಲಿ ಇಂಡ್ಯೂಸ್ ರಿಪೋಗ್ರಾಮಿಂಗ್ ಟು ರಿಸರ್ವ್ ಸೆಲ್ಯುಲಾರ್ ಏಜಿಂಗ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಸಂಶೋಧಕರ ಅಧ್ಯಯನವನ್ನು ಜುಲೈ 12 ರಂದು ಏರಿಜಿಂಗ್ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. ಈ ರಾಸಾಯನಿಕ ಕಾಕ್ ಟೆಲ್ ನಲ್ಲಿ ಏಳು ಏಜೇಂಟ್ ಗಳು ಇರುತ್ತದೆ.

ಇವುಗಳಲ್ಲಿ ಹಲವು ಇತರೆ ದೈಹಿಕ ಹಾಗು ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ನೀಡುತ್ತದೆ. ಹಾವರ್ಡ್ ಮೆಡಿಕಲ್ ಸ್ಕೂಲ್ ತಂಡವು ವಯಸ್ಸನ್ನು ಹಿಮ್ಮೆಟ್ಟಿಸಲು ಮಾನವ ಜೀವಕೋಶಗಳನ್ನು ಪುನರುಜೀವಗೊಳಿಸಲು ಮೂರೂ ವರ್ಷಗಳ ಕಾಲ ಸಂಶೋಷಣೆ ನಡೆದಿದೆ ಎಂದು ಹೇಳಿದೆ.

ಕಾಕ್ ಟೆಲ್ ರಾಸಾಯನಿಕಗಳನ್ನು ಮಾನವನ ಮೇಲೆ ಪ್ರಯೋಗ ಮಾಡಲು ಸಿದ್ಧತೆ
ಈ ಬಗ್ಗೆ ಸಂಶೋಧಕರು ಟ್ವೀಟ್ ಮಾಡಿದ್ದಾರೆ. ಆಪ್ಟಿಕ್ ನರ, ಮೆದುಳಿನ ಅಂಗಾಂಶ, ಮೂತ್ರಪಿಂಡ ಮತ್ತು ಸ್ನಾಯುಗಳ ಮೇಲಿನ ಅಧ್ಯಯನಗಳು ಇಲಿಗಳಲ್ಲಿ ಸುಧಾರಿತ ದೃಷ್ಟಿ ಮತ್ತು ವಿಸ್ತೃತ ಜೀವಿತಾವಧಿಯೊಂದಿಗೆ ಭರವಸೆಯ ಫಲಿತಾಂಶಗಳನ್ನು ತೋರಿಸಿವೆ ಮತ್ತು ಇತ್ತೀಚಿಗೆ ಈ ವರ್ಷದ ಏಪ್ರಿಲ್ ನಲ್ಲಿ ಮಂಗಗಳಲ್ಲಿ ದೃಷ್ಟಿ ಸುಧಾರಿಸಿವೆ ಎಂದು ಸಂಶೋಧಕರು ಟ್ವೀಟ್ ಮಾಡಿದ್ದಾರೆ.

Join Nadunudi News WhatsApp Group

ಇನ್ನು ಈ ರಾಸಾಯನಿಕ ಕಾಕ್ ಟೆಲ್ ಅನ್ನು ಮಾನವರ ಮೇಲೆ ಕ್ಲಿನಿಕಲ್ ಪ್ರಯೋಗ ಮಾಡಲು ಸಿದ್ದತೆಗಳು ನಡೆಯುತ್ತಿವೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಈ ಅಧ್ಯಯನ ಆರಂಭಿಸಲಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Join Nadunudi News WhatsApp Group