Screen Guard: ನಿಮ್ಮ ಮೊಬೈಲ್ ಗೆ ಸ್ಕ್ರೀನ್ ಗಾರ್ಡ್ ಹಾಕಿದ್ದೀರಾ…? ಹಾಗಾದರೆ ಎಚ್ಚರ
ಮೊಬೈಲ್ ಗೆ ಸ್ಕ್ರೀನ್ ಗಾರ್ಡ್ ಹಾಕಿಸುವ ಮುನ್ನ ಈ ವಿಚಾರ ತಿಳಿದುಕೊಳ್ಳಿ
Screen Guard For Smartphone: ಸದ್ಯ ಎಲ್ಲರು ಕೂಡ ಸ್ಮಾರ್ಟ್ ಫೋನ್ ಅನ್ನು ಬಳಸುತ್ತಾರೆ. ದಿನ ನಿತ್ಯ ಬಳಸುವ ಅಗತ್ಯ ವಸ್ತುಗಳಲ್ಲಿ ಮೊಬೈಲ್ ಫೋನ್ ಕೂಡ ಒಂದಾಗಿದೆ ಎಂದರೆ ತಪ್ಪಾಗಲಾರದು. ಮೊಬೈಲ್ ಬಳಸದೆಯೇ ಕೆಲವರ ದಿನ ಆರಂಭವೇ ಆಗುವುದಿಲ್ಲ ಎನ್ನಬಹುದು. ಜನರು ಸಾವಿರದಿಂದ ಲಕ್ಷಗಟ್ಟಲೆ ಹಣವನ್ನು ಕೊಟ್ಟು ತಮಗಿಷ್ಟವಾದ ಮೊಬೈಲ್ ಫೋನ್ ಅನ್ನು ಖರೀದಿಸುತ್ತಾರೆ. ಮೊಬೈಲ್ ಫೋನ್ ಖರೀದಿಸಿದವರು ತಮ್ಮ ಮೊಬೈಲ್ ನ ಸುರಕ್ಶತೆಯ ಬಗ್ಗೆ ಕೂಡ ಕಾಳಜಿ ವಹಿಸುತ್ತಾರೆ.
ಇನ್ನು ಮೊಬೈಲ್ ಫೋನ್ ಗಳು ಕೈತಪ್ಪಿ ಬೀಳುವುದೇ ಹೆಚ್ಚು. ಈ ಸಮಯದಲ್ಲಿ ಮೊಬೈಲ್ ಫೋನ್ ಗಳಿಗೆ ಹಾನಿಯಾಗಬಾರದು ಎನ್ನುವ ಕಾರಣಕ್ಕೆ ಬಳಕೆದಾರರು ತಮ್ಮ ಮೊಬೈಲ್ ಫೋನ್ ಗಳಿಗೆ ಸ್ಕ್ರೀನ್ ಗಾರ್ಡ್ ಅನ್ನು ಬಳಸುತ್ತಾರೆ. ಮೊಬೈಲ್ ಫೋನ್ ಗಳಿಗೆ ಸ್ಕ್ರೀನ್ ಗಾರ್ಡ್ ಹಾಕುವುದರಿಂದ ಮೊಬೈಲ್ ಡಿಸ್ಪ್ಲೇ ಗೆ ರಕ್ಷಣೆಯನ್ನು ನೀಡುತ್ತದೆ. ಇನ್ನು ನೀವು ನಿಮ್ಮ ಮೊಬೈಲ್ ಫೋನ್ ಗೆ ಸ್ಕ್ರೀನ್ ಗಾರ್ಡ್ ಹಾಕುವ ಮುನ್ನ ಎಚ್ಚರ ವಹಿಸಬೇಕು. ಮೊಬೈಲ್ ಫೋನ್ ಗೆ ಸ್ಕ್ರೀನ್ ಗಾರ್ಡ್ ಹಾಕುವಾಗ ಗಮನಿಸಬೇಕಾದ ಅಂಶಗಳ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ.
ನಿಮ್ಮ ಮೊಬೈಲ್ ಗೆ ಸ್ಕ್ರೀನ್ ಗಾರ್ಡ್ ಹಾಕುವ ಮುನ್ನ ಈ ವಿಚಾರ ತಿಳಿದಿರಲಿ
•ಸ್ಕ್ರೀನ್ ಗಾರ್ಡ್ ಆಂಟಿ ಸ್ಕ್ರ್ಯಾಚ್ ಆಗಿದ್ದರೆ ಬೆಸ್ಟ್ ಆಗಿರುತ್ತದೆ. ನೀವು ಹೊಸ ಸ್ಮಾರ್ಟ್ ಫೋನ್ ಖರೀದಿಸಿದ್ದರೆ ಫೋನ್ ಸ್ಕ್ರೀನ್ ಅನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿರಿಸಲು ಮತ್ತು ಗೀರುಗಳಿಂದ ರಕ್ಷಿಸಲು ಉತ್ತಮ ಸ್ಕ್ರೀನ್ ಗಾರ್ಡ್ ಬಳಸಿ. ಫೋನ್ ಪರದೆಯನ್ನು ಸ್ಕ್ರಾಚ್ ಮಾಡದಂತೆ ಅಥವಾ ಹಾನಿಯಾಗದಂತೆ ಸ್ಕ್ರೀನ್ ಗಾರ್ಡ್ ನೋಡಿಕೊಳ್ಳುತ್ತವೆ.
•ನೀವು ಸ್ಕ್ರೀನ್ ಗಾರ್ಡ್ ಖರೀದಿಸಿದಾಗ, ಅದನ್ನು ಬಳಸಲು ಆರಾಮದಾಯಕವಾಗಿದೆಯೇ ಎಂದು ನೋಡಿ. ನಿಮ್ಮ ಫೋನ್ ಪರದೆಯ ಮೇಲೆ ಸ್ಕ್ರೀನ್ ಗಾರ್ಡ್ ಅನ್ನು ಹಾಕಿದ ನಂತರ ಅದನ್ನು ಬಳಸಲು ನಿಮಗೆ ಅನುಕೂಲಕರವಾಗಿರಬೇಕು. ನೀವು ಬಳಸುವ ಸ್ಕ್ರೀನ್ ಗಾರ್ಡ್ ಟಚ್ ಸ್ಕ್ರೀನ್ ಗೆ ತೊಂದರೆಯಾಗಬಾರದು.
•ಆನ್ ಲೈನ್ ನಲ್ಲಿ ಸ್ಕ್ರೀನ್ ಗಾರ್ಡ್ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ನೀವು ಅಂತಹ ಖರೀದಿದಾರರಾಗಿದ್ದರೆ, ಸರಿಯಾದ ಗಾತ್ರದ ಸ್ಕ್ರೀನ್ ಗಾರ್ಡ್ ಅನ್ನು ಖರೀದಿಸಿ. ದೊಡ್ಡ ಅಥವಾ ಚಿಕ್ಕ ಗಾತ್ರದ ಸ್ಕ್ರೀನ್ನಿ ಗಾರ್ಡ್ ನಿಮ್ಮ ಫೋನ್ ಅನ್ನು ಹಾಳುಮಾಡುತ್ತದೆ.
•ನಾವು ಸದಾ ಸ್ಮಾರ್ಟ್ ಫೋನ್ ಬಳಸುತ್ತೇವೆ. ಅನೇಕ ಬಾರಿ ನಮ್ಮ ಕೈಗಳು ಎಣ್ಣೆಯುಕ್ತವಾಗಿರಬಹುದು. ಆ ಸಮಯದಲ್ಲಿ ಸ್ಕ್ರೀನ್ ಸ್ಪರ್ಶಿಸಿದರೂ ಫೋನ್ ಹಾಳಾಗದಂತೆ ಮತ್ತು ಫಿಂಗರ್ ಪ್ರಿಂಟ್ ಬೀಳದಂತೆ ರಕ್ಷಿಸಲು ಸ್ಕ್ರೀನ್ ಗಾರ್ಡ್ ಬಳಸುವುದು ಉತ್ತಮ.