Second Hands: ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುವವರಿಗೆ ಹೊಸ ನಿಯಮ, ಎಚ್ಚರ ತಪ್ಪಿದರೆ ಕಟ್ಟಬೇಕು ಹೆಚ್ಚು ಹಣ.
ಕಾರ್ ಲೋನ್ ಪಡೆಯುವ ಮುನ್ನ ಈ ವಿಚಾರಗಳ ಬಗ್ಗೆ ಗಮನ ಇರಲಿ, ಸಮಸ್ಯೆ ಕಟ್ಟಿಟ್ಟ ಬುತ್ತಿ.
Second Hand Car loan Interest: ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಮಾದರಿಯ ಕಾರ್ ಗಳಿಗೂ ಹೆಚ್ಚಿನ ಬೇಡಿಕೆ ಇರುತ್ತದೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ದುಬಾರಿ ಕಾರ್ ಗಳು ಖರೀದಿಗೆ ಲಭ್ಯವಾಗಿರುತ್ತದೆ.
ಕಾರ್ ಖರೀದಿಸಲು ಎಲ್ಲರು ಬಯಸುತ್ತಾರೆ. ಆದರೆ ತಮಗೆ ಬೇಕಾದ ಬಜೆಟ್ ಬೆಲೆಯಲ್ಲಿ ಹೊಸ ಕಾರ್ ಖರೀದಿ ಅದೆಷ್ಟೋ ಜನರಿಗೆ ಕಷ್ಟವಾಗುತ್ತದೆ. ಹೀಗಾಗಿ ಜನರು ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಯತ್ತ ಗಮನ ಹರಿಸುತ್ತಾರೆ.
ಕಾರ್ ಲೋನ್ ಗಳ ಬಡ್ಡಿದರ ಹೆಚ್ಚು
ಇತ್ತೀಚಿಗೆ ವಿವಿಧ ಕಾರ್ ತಯಾಕಾರಕ ಕಂಪನಿಗಳು ಗ್ರಾಹಕರ ಅನುಕೂಲಕ್ಕಾಗಿ ವಿವಿಧ ರೀತಿಯ ಹಣಕಾಸು ಯೋಜನೆಯನ್ನು ಬಿಡುಗಡೆ ಗೊಳಿಸುತ್ತಿದೆ. ಇನ್ನು ಹಳೆಯ ಕಾರ್ ಖರೀದಿಗೆ ಸಾಲವನ್ನು (Car Loan) ನೀಡಲಾಗುತ್ತದೆ. ಆದರೆ ವಾಹನಗಳ ಸಾಲದ ಬಡ್ಡಿದರ ತುಸು ಹೆಚ್ಚಾಗಿರುತ್ತದೆ. ಇನ್ನು ಕೆಲವು ಕಾರ್ ಗಳ ಆರಂಭಿಕ ಬೆಲೆಯೇ 10 ರಿಂದ 12 ಲಕ್ಷ ಇರುತ್ತದೆ. ಹೀಗಾಗಿ ಸೆಕೆಂಡ್ ಹ್ಯಾಂಡ್ ಕಾರ್ ಬೆಲೆ ಸರಿ ಸುಮಾರು 6 ರಿಂದ 8 ಲಕ್ಷದಾಗಿರುತ್ತದೆ.
ಈ ಸಂದರ್ಭದಲ್ಲಿ ಕಾರ್ ಲೋನ್ ಪಡೆಯುವುದು ಅನಿವಾರ್ಯವಾಗುತ್ತದೆ. ಇನ್ನು ಕಾರ್ ಲೋನ್ ಪಡೆಯುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ವಾನಗಳಿಗೆ ಲೋನ್ ಪಡೆಯುವಾಗ ಲೋನ್ ಸಂಬಂದಿತ ಬಡ್ಡಿದರ ಹಾಗು ನಿಯಮಗಳ ಬಗ್ಗೆ ಮಾಹಿತಿ ತಿಳಿದರಬೇಕು.
ಕಾರ್ ಲೋನ್ ಪಡೆಯುವ ಮುನ್ನ ಈ ವಿಚಾರಗಳ ಬಗ್ಗೆ ಗಮನ ಇರಲಿ
ಯಾವುದೇ ಕಂಪನಿಯ ಕಾರ್ ಅನ್ನು ಖರೀದಿಸುವಾಗ ಕಂಪನಿಯು ನಿಮಗೆ ಲೋನ್ ಆಯ್ಕೆಯನ್ನು ನೀಡುತ್ತವೆ. ಇನ್ನು ಈ ಸಮಯದಲ್ಲಿ ನೀವು ಆಯ್ಕೆ ಮಾಡುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿನ ಬಡ್ಡಿದರವನ್ನು ಗಮನಿಸಿ.
ಸಾಮಾನ್ಯವಾಗಿ ಹೊಸ ಕಾರ್ ಖರೀದಿಗೆ ವರ್ಷಕ್ಕೆ ಶೇ. 8.6 ರಿಂದ ಶೇ. 15 ರವರೆಗೆ ಬಡ್ಡಿದರ ಇರುತ್ತದೆ. ಆದರೆ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಯ ಸಮಯದಲ್ಲಿ ಬಡ್ಡಿದರವು ಶೇ. 9.25 ರಿಂದ 25 ತಲುಪುತ್ತದೆ. ಈ ಕಾರಣದಿಂದ ಬಡ್ಡಿದರಗಳ ಮಾಹಿತಿ ತಿಳಿದಿರಬೇಕು. ಬ್ಯಾಂಕ್ ಗಳು ಹಳೆಯ ಕಾರಿನ ಮೇಲಿನ ಸಾಲವನ್ನು ಅಸುರಕ್ಷಿತ ಸಾಲವನ್ನಾಗಿ ಪರಿಗಣಿಸುವ ಕಾರಣ ಬಡ್ಡಿರವನ್ನು ಹೆಚ್ಚು ನೀಡುತ್ತದೆ.