New Car And Used Car Details: ಮಧ್ಯಮ ವರ್ಗದ ಜನರಿಗೆ ಕಾರ್ ಖರೀದಿಸುದು ದೊಡ್ಡ ಕನಸಾಗಿರುತ್ತದೆ. ಈ ಕನಸನ್ನು ಈಡೇರಿಸಿಕೊಳ್ಳಲು ಅವರು ಸಾಲದ ಮೊರೆ ಹೋಗುತ್ತಾರೆ. ಆದರೆ ಕೆಲವರು ಹೊಸ ಕಾರ್ ಖರೀದಿ ಮಾಡಬೇಕಾ ಅಥವಾ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡಬೇಕಾ ಅನ್ನುವ ಗೊಂದಲಕ್ಕೆ ಒಳಗಾಗುತ್ತಾರೆ. ನೀವು ನಿಮ್ಮ ಬಜೆಟ್ ಗೆ ಅನುಗುಣವಾಗಿ ಹೊಸ ಕಾರ್ ಖರೀದಿ ಮಾಡಬಹುದು ಅಥವಾ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿ ಮಾಡಬಹುದಾಗಿದೆ. ಇದೀಗ ನಾವು ಕಾರ್ ಖರೀದಿ ಮಾಡಬೇಕು ಅಂದುಕೊಂಡವರಿಗೆ ಹೊಸ ಕಾರ್ ಹಾಗೆ ಸೆಕೆಂಡ್ ಕಾರ್ ನಲ್ಲಿ ಯಾವುದು ಉತ್ತಮ ಅನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಹೊಸ ಕಾರ್ ಮತ್ತು ಸೆಕೆಂಡ್ ಹ್ಯಾಂಡ್ ಕಾರ್
ಈಗಿನ ಮಾರುಕಟ್ಟೆಯಲ್ಲಿ ಹೊಸ ಕಾರ್ ಮತ್ತು ಸೆಕೆಂಡ್ ಹ್ಯಾಂಡ್ ಕಾರ್ ಎರಡು ಕೂಡ ಒಳ್ಳೆಯ ಅಂಶಗಳನ್ನು ಹೊಂದಿದೆ. ಆದರೆ ಹೊಸ ಕಾರ್ ಖರೀದಿ ಮಾಡಿದರೆ ನೀವೇ ಮೊದಲು ಅದರ ಮಾಲೀಕರಾಗುತ್ತೀರಿ. ಹೊಸ ಕಾರ್ ನಲ್ಲಿ ಇತ್ತೀಚಿನ ತಂತ್ರಜ್ಞಾನ , ಪೂರ್ವ ತಯಾರಿ, ವಿಶ್ವಾಸಾರ್ಹತೆ, ಹಾಗೆ ಹೆಚ್ಚಿನ ವೆಚ್ಚವಾಗುತ್ತದೆ. ಆದರೆ ಬಳಸಿದ ಕಾರ್ ಗಳು ಅಗ್ಗವಾಗಿದೆ, ತೆರಿಗೆ ಚಿಂತೆ ಇಲ್ಲ, ದುರಸ್ತಿ ಚಿಂತೆ ಹೆಚ್ಚಾಗಿರುತ್ತದೆ. ಸೆಕೆಂಡ್ ಹ್ಯಾಂಡ್ ಕಾರಿಗೆ ನೀವು ಎರಡನೆಯ ಮಾಲೀಕರಾಗುತ್ತೀರಿ. ಹೊಸ ಕಾರ್ ಮತ್ತು ಹಳೆಯ ಕಾರ್ ನಡುವಿನ ವ್ಯತ್ಯಾಸ ಈ ಕೆಳಗಿನಂತಿದೆ.
ಹೊಸ ಕಾರ್ ನ ಪ್ರಯೋಜನಗಳು
ಹೊಸ ಕಾರ್ ಖರೀದಿ ಮಾಡಿದರೆ ನೀವು ಸಾಕಷ್ಟು ಪ್ರಯೋಜನ ಪಡೆದುಕೊಳ್ಳಬಹುದು ಮತ್ತು ಆ ಪ್ರಯೋಜನ ಇಲ್ಲಿದೆ.
- ಇತ್ತೀಚಿನ ವೈಶಿಷ್ಟ್ಯಗಳು
- ಯಾವುದೇ ಗುಪ್ತ ಇತಿಹಾಸವಿಲ್ಲ
- ಸುರಕ್ಷತೆ
- ಪೂರ್ಣ ತಯಾರಕರ ಖಾತರಿ
ಬಳಕೆ ಮಾಡಿದ ಕಾರ್ ಪ್ರಯೋಜನಗಳು
ಹೊಸ ಕಾರ್ ರೀತಿಯಲ್ಲಿಯೇ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡಿದರೂ ಕೂಡ ಕೆಲವು ಪ್ರಯೋಜನ ಸಿಗುತ್ತೆ.
- ಬಜೆಟ್ ಬೆಲೆಯಲ್ಲಿ ಪ್ರೀಮಿಯಂ ಮಾಡೆಲ್ ಖರೀದಿಸಬಹುದು
- ಇನ್ಸೂರೆನ್ಸ್ ಹಾಗೆ ರಿಜಿಸ್ಟ್ರೇಷನ್ ಖರ್ಚು ಕಡಿಮೆ ಇರುತ್ತದೆ.
- CPO (Certified Pre-Owned) ಕಾರುಗಳು ವಾರಂಟಿಗಳೊಂದಿಗೆ ಬರುತ್ತವೆ
ಹೊಸ ಕಾರಿನ ನಷ್ಟಗಳು
- ಹೆಚ್ಚು ಬೆಲೆ
- ಹೆಚ್ಚು ಇನ್ಸೂರೆನ್ಸ್
- ಲೋನ್ EMI ಹೆಚ್ಚಾಗಿರುತ್ತದೆ
ಬಳಕೆ ಮಾಡಿದ ಕಾರಿನ ನಷ್ಟಗಳು
- ಕಾರಿನ ಇತಿಹಾಸದ ಬಗ್ಗೆ ತಿಳುವಳಿಕೆ ಇರುವುದಿಲ್ಲ
- ಅಪಘಾತ ಹಾನಿ ಗುಟ್ಟಾಗಿಟ್ಟಿರುತ್ತಾರೆ
- ದುರಸ್ತಿಗೆ ಹೆಚ್ಚಿನ ಖರ್ಚು
- ಹಳೆಯ ಪಿಚರ್ಸ್
- ನಕಲಿ ದಾಖಲೆಗಳೊಂದಿಗೆ ಕದ್ದ ವಾಹನಗಳು
- ಪರಿಶೀಲನೆ ಅಗತ್ಯ ಇಲ್ಲವಾದರೆ ನಷ್ಟ ಆಗುವ ಸಾಧ್ಯತೆ ಹೆಚ್ಚು
- ತುಕ್ಕು ಹಿಡಿಯುವುದು ಮತ್ತು ಟೈರ್ ಗಳು / ಒಳಭಾಗದ ಮೇಲಿನ ಸವೆತ
- ಯಾವುದೇ ಖಾತರಿ ಇಲ್ಲ
2025 ರಲ್ಲಿ ಉತ್ತಮ ಬಳಕೆಯ ಕಾರ್ ಗಳು
- Maruti Suzuki Swift
- Wagon R
- Honda City Car
- Toyota Innova Crysta
- Hyundai Creta
ಕಾರ್ ಖರೀದಿ ಮಾಡುವವರಿಗೆ ಕೆಲವು ಸಲಹೆ
- ಬಳಸಿದ ಕಾರು ಮುಂಗಡವಾಗಿ ಮತ್ತು ವಿಮೆಯಲ್ಲಿ ಗಣನೀಯ ಹಣವನ್ನು ಉಳಿಸುತ್ತದೆ. ಆದರೆ ಇತರೆ ಖರ್ಚು ತಪ್ಪಿಸಲು ಬಯಸಿದರೆ ಹೊಸ ಕಾರ್ ಖರೀದಿ ಉತ್ತಮವಾಗಿದೆ.
- ಸೆಕೆಂಡ್ ಹ್ಯಾಂಡ್ ಕಾರನ್ನು ಸಂಪೂರ್ಣ ಟೆಸ್ಟ್ ಡ್ರೈವ್ ಮಾಡಿಸಬೇಕು
- ಹೊಸ ಕಾರ್ ಖರೀದಿಗೆ ಪೂರ್ಣ ತಯಾರಕರ ಖಾತರಿ ಇರುತ್ತದೆ. ಆದರೆ ಬಳಕೆ ಮಾಡಿದ ಕಾರ್ ಗೆ ಯಾವುದೇ ಖಾತರಿ ಇಲ್ಲ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

