Secure Credit Card: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ…? ಇಲ್ಲಿದೆ ಡೀಟೇಲ್ಸ್

ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲದಿದ್ದರೂ ಸಿಗುತ್ತೆ ಕ್ರೆಡಿಟ್ ಕಾರ್ಡ್...!

Secure Credit Card Details: ದೇಶದಲ್ಲಿ ಹೆಚ್ಚಿನ ಜನರು Credit card ಅನ್ನು ಬಳಸುತ್ತಾರೆ. ಸಾಲ ಪಡೆಯಲು ಈ ಕ್ರೆಡಿಟ್ ಕಾರ್ಡ್ ಹೆಚ್ಚಿನ ಪಾತ್ರ ವಹಿಸುತ್ತದೆ. ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಲು ಕ್ರೆಡಿಟ್ ಸ್ಕೋರ್ ಮುಖ್ಯವಾಗಿರುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ನಾತ್ರ ನೀವು Credit Card ಅನ್ನು ಪಡೆಯಲು ಸಾಧ್ಯವಾಗುತ್ತದೆ. ಆದ್ಯಾಗೂ, ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿ ಇಲ್ಲದಿದ್ದರೂ ನೀವು Credit Card ಅನ್ನು ಪಡೆಯಬಹುದು. ಅದು ಹೇಗೆ ಎನ್ನುವ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

Secure Credit Card Details
Image Credit: Paytm

ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲದಿದ್ದರೂ ಸಿಗುತ್ತೆ ಕ್ರೆಡಿಟ್ ಕಾರ್ಡ್…!
ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಪಡೆಯಲು ಸಾಧ್ಯವಿದೆ. ಹೌದು, ನೀವು ಈ ಸಮಯದಲ್ಲಿ Secure Credit Card ಅನ್ನು ಪಡೆಯಬಹುದು. ಇವು ಸಾಮಾನ್ಯ ಕ್ರೆಡಿಟ್ ಕಾರ್ಡ್‌ಗಳಿಗಿಂತ ಭಿನ್ನವಾಗಿವೆ. ಇದನ್ನು ನಿಶ್ಚಿತ ಠೇವಣಿ (FD) ಆಧಾರದ ಮೇಲೆ ನೀಡಲಾಗುತ್ತದೆ. ನೀವು ಸಮಯಕ್ಕೆ ಪಾವತಿಯನ್ನು ಮಾಡದಿದ್ದರೆ, ನೀವು ಭದ್ರತೆಯಾಗಿ ನೀಡಿದ FD ಯಿಂದ ನಿಮ್ಮ ಹಣವನ್ನು ಮರುಪಡೆಯಲಾಗುತ್ತದೆ.

ನೀವು ಪರಿಪೂರ್ಣ ಕ್ರೆಡಿಟ್ ಸ್ಕೋರ್‌ ಗಿಂತ ಕಡಿಮೆ ಹೊಂದಿದ್ದರೆ ನೀವು FD ಹೊಂದಿದ್ದರೆ ಈ ಸುರಕ್ಷಿತ ಕ್ರೆಡಿಟ್ ಕಾರ್ಡ್ ಅನ್ನು ನೀವು ಸುಲಭವಾಗಿ ಪಡೆಯಬಹುದು. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಈ ಕಾರ್ಡ್‌ ಗಳು FD ಮೊತ್ತಕ್ಕೆ ಸಮಾನವಾದ ಕ್ರೆಡಿಟ್ ಮಿತಿಯನ್ನು ಹೊಂದಿರುತ್ತವೆ. ಅಂದರೆ ನೀವು FD ಯಲ್ಲಿ 2 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದರೆ Credit ಮಿತಿಯೂ 2 ಲಕ್ಷ ರೂಪಾಯಿ ಆಗಿರುತ್ತದೆ.

Credit Crad Latest News
Image Credit: Paytm

ಸುರಕ್ಷಿತ ಕ್ರೆಡಿಟ್ ಕಾರ್ಡ್ ಗಳು ಯಾವುವು…?
ಸ್ಟೆಪ್ ಅಪ್ ಕ್ರೆಡಿಟ್ ಕಾರ್ಡ್, ಎಸ್‌ಬಿಐ ಕಾರ್ಡ್ ಉನ್ನತಿ ಮತ್ತು ಆಕ್ಸಿಸ್ ಇನ್‌ ಸ್ಟಾ ಈಸಿ ಕ್ರೆಡಿಟ್ ಕಾರ್ಡ್ ಈ ಪ್ರಕಾರದ ಸುರಕ್ಷಿತ ಕ್ರೆಡಿಟ್ ಕಾರ್ಡ್‌ ಗಳಾಗಿವೆ. ಸುಲಭ ಲಭ್ಯತೆ ಮತ್ತು ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳ ಕಾರಣದಿಂದಾಗಿ ಇವುಗಳು ಜನಪ್ರಿಯವಾಗುತ್ತಿವೆ. FD ಗಳಲ್ಲಿ ಯಾವುದೇ ಲಾಕ್ ಇನ್ ಅವಧಿ ಇರುವುದಿಲ್ಲ. ಈ ಕಾರ್ಡ್ ಪಡೆಯಲು ಕನಿಷ್ಠ ಎರಡು ಸಾವಿರ ರೂಪಾಯಿ ಠೇವಣಿ ಇಡಲು ಅವಕಾಶ ಕಲ್ಪಿಸಲಾಗಿದೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚು ಹೆಚ್ಚು FD ಗಳನ್ನು ತೆರೆಯುವ ಮೂಲಕ ನಿಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಬಹುದು.

Secure Credit Card
Image Credit: Business-standard

Join Nadunudi News WhatsApp Group

Join Nadunudi News WhatsApp Group