Sehar Shinwari: ನರೇಂದ್ರ ಮೋದಿ ಮೇಲೆ ದೂರು ನೀಡಲು ಮುಂದಾದ ಪಾಕ್ ನಟಿ, ದೆಹಲಿ ಪೋಲೀಸರ ಖಡಕ್ ಉತ್ತರ.

ನರೇಂದ್ರ ಮೋದಿಯವರ ಮೇಲೆ ದೂರು ನೀಡಿದ ಪಾಕ್ ನಟಿಗೆ ಜನರು ಟ್ರೊಲ್ ಮಾಡಿದ್ದಾರೆ.

Sehar Shinwari PM Narendra Modi: ಪಾಕಿಸ್ತಾನದ ನಟಿ ಒಬ್ಬರು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ದ ದೂರು ದಾಖಲಿಸಲು ದೆಹಲಿ ಪೊಲೀಸರು ಸಹವನ್ನು ಸಾಮಾಜಿಕ ಮಾದ್ಯಮದಲ್ಲಿ ಕೇಳಿದ್ದಾರೆ. ಈ ಕ್ಷಣದಲ್ಲಿ ಪಾಕಿಸ್ತಾನದಲ್ಲಿ ಏನಾಗುತ್ತಿವೆ ಅನ್ನುವುದಕ್ಕೆ ಭಾರತವೇ ಹೊಣೆಯಾಗಿದೆ.

ಪ್ರಧಾನಿ ವಿರುದ್ಧ ದೂರು ದಾಖಲಿಸಿ ಎಂದ ನಟಿಗೆ ನೆಟ್ಟಿಗರು ಭರ್ಜರಿ ಗೇಲಿ ಮಾಡುತ್ತಿದ್ದಾರೆ. ಹಾಗೆ ದೆಹಲಿ ಪೊಲೀಸರು ನಟಿಗೆ ಪ್ರತ್ಯುತ್ತರ ನೀಡಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗುತ್ತಿದೆ.

Sehar Shinwari about narendra modi
Image Credit: newstrend

ಭಾರತದ ಪ್ರಧಾನಿ ವಿರುದ್ಧ ದೂರು ನೀಡಿದ ಪಾಕಿಸ್ತಾನದ ನಟಿ
ಮಂಗಳವಾರ ಟ್ವೀಟ್ ಮಾಡಿರುವ ಪಾಕಿಸ್ತಾನಿ ನಟಿ ಸಹೇರ್ ಶಿನ್ವಾರಿ, ದೆಹಲಿ ಪೊಲೀಸರ ಆನ್‌ಲೈನ್ ಸಂಪರ್ಕ ಯಾರಿಗಾದರೂ ತಿಳಿದಿದೆಯೇ, ನನ್ನ ದೇಶ ಪಾಕಿಸ್ತಾನದಲ್ಲಿ ಅರಾಜಕತೆ ಮತ್ತು ಭಯೋತ್ಪಾದನೆಯನ್ನು ಹರಡುತ್ತಿರುವ ಭಾರತದ ಪ್ರಧಾನಿ ಮತ್ತು ಭಾರತೀಯ ಗುಪ್ತಚರ ಸಂಸ್ಥೆ RAW ವಿರುದ್ಧ ನಾನು ದೂರು ದಾಖಲಿಸಬೇಕಾಗಿದೆ.

ಭಾರತೀಯ ನ್ಯಾಯಾಲಯಗಳು ಸ್ವತಂತ್ರವಾಗಿದ್ದರೆ, ಆಗ ಭಾರತದ ಸುಪ್ರೀಂ ಕೋರ್ಟ್ ನನಗೆ ನ್ಯಾಯವನ್ನು ನೀಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ದೆಹಲಿ ಪೊಲೀಸರು ತುಂಬಾ ತಮಾಷೆಯ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Join Nadunudi News WhatsApp Group

People trolled Pakistani actress Sehar Shinwari who complained about Narendra Modi
Image Credit: india.postsen

ಪಾಕಿಸ್ತಾನದ ನಟಿ ಪ್ರತ್ಯುತ್ತರ ನೀಡಿದ ದೆಹಲಿ ಪೊಲೀಸರು
ಸಹೇರ್ ಶಿನ್ವಾರಿ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ದೆಹಲಿ ಪೊಲೀಸರು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದ್ದಾರೆ. ನಮಗೆ ಪಾಕಿಸ್ತಾನದಲ್ಲಿ ಇನ್ನೂ ಅಧಿಕಾರ ವ್ಯಾಪ್ತಿ ಇಲ್ಲ. ನಿಮ್ಮ ದೇಶದಲ್ಲಿ ಇಂಟರ್​ನೆಟ್​ ಸೌಲಭ್ಯ ಕಡಿತಗೊಂಡಿದ್ದರೂ ಕೂಡ ನೀವು ಹೇಗೆ ಈ ಟ್ವೀಟ್​ ಮಾಡಿದ್ದೀರಿ ಎಂಬುದನ್ನು ನಾವು ತಿಳಿಯಲು ಬಯಸುತ್ತೇವೆ ಎಂದು ದೆಹಲಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

Join Nadunudi News WhatsApp Group