Senior Citizen Scheme: ಹಿರಿಯ ನಾಗರಿಕರಿಗೆ ಸಿಗಲಿದೆ 20,500 ರೂಪಾಯಿ ಲಾಭ, ಕೇಂದ್ರದ ಇನ್ನೊಂದು ಯೋಜನೆ ಬಿಡುಗಡೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಬದಲಾವಣೆ, ಸಿಗಲಿದೆ 20500 ರೂಪಾಯಿ.

Senior Citizen Saving Scheme: ಹಿರಿಯ ನಾಗರೀಕರಿಗಾಗಿ ಹಲವು ಉಳಿತಾಯ ಯೋಜನೆಗಳು ಲಭ್ಯವಿದೆ. ಬ್ಯಾಂಕ್ ಎಫ್ ಡಿ ಮತ್ತು ಸಣ್ಣ ಉಳಿತಾಯ ಯೋಜನೆಗಳು ಎರಡು ಕಡಿಮೆ ಅಪಾಯದ ಹೂಡಿಕೆ ಆಯ್ಕೆಗಳಾಗಿವೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಲಭ್ಯವಿರುವ ಬಡ್ಡಿದರವು ಪ್ರಸ್ತುತ ದಾಖಲೆ ಮಟ್ಟದಲ್ಲಿದೆ. ಹೂಡಿಕೆಗಾಗಿ ಈ ಆಯ್ಕೆಯನ್ನು ಪರಿಗಣಿಸುವ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬಹುದು.

Good news for senior citizens
Image Credit: Thehindubusinessline

ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ
ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆಗೆ ಜುಲೈನಿಂದ ಸೆಪ್ಟೆಂಬರ್ ವರೆಗೆ ಬಡ್ಡಿ ದರವನ್ನು ಶೇಕಡಾ 8.2 ಕ್ಕೆ ನಿಗದಿಪಡಿಸಲಾಗಿದೆ. ಈ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಹಿರಿಯ ನಾಗರಿಕರಿಗೆ ಹೊಸ ತೆರಿಗೆ ಪದ್ದತಿಯನ್ನು ಜಾರಿಗೆ ತರುವುದರೊಂದಿಗೆ ದೊಡ್ಡ ಘೋಷಣೆ ಮಾಡಿದ್ದರು. ಅದರ ಅಡಿಯಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಿತಿಯನ್ನು 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಈ ಬದಲಾವಣೆಯಿಂದ ಹಿರಿಯ ನಾಗರಿಕರಿಗೆ ಮೊದಲಿಗಿಂತ ಹೆಚ್ಚಿನ ಹೂಡಿಕೆಯ ಲಾಭ ಸಿಗುತ್ತಿದೆ. ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಬಡ್ಡಿದರವನ್ನು ಶೇಕಡಾ 8.2 ಕ್ಕೆ ಹೆಚ್ಚಿಸಲಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದು ಶೇಕಡಾ 8 ರಷ್ಟಿತ್ತು. ಅದಕ್ಕೂ ಮೊದಲು ಅದರ ಬಡ್ಡಿ ದರ ಶೇಕಡಾ 7.6 ರಷ್ಟಿದ್ದು ಹೂಡಿಕೆಯ ಮಿತಿ 15 ಲಕ್ಷ ರೂಪಾಯಿ ಆಗಿತ್ತು.

Senior Citizen Saving Scheme
Image Credit: Livemint

ಈಗ ಸಿಗಲಿದೆ 20,500 ರೂಪಾಯಿ ಲಾಭ
ಹೂಡಿಕೆಯ ಮಿತಿಯನ್ನು 30 ಲಕ್ಷಕ್ಕೆ ಹೆಚ್ಚಿಸಿ ಮತ್ತು ಬಡ್ಡಿ ದರವನ್ನು ಶೇಕಡಾ 8.2 ಕ್ಕೆ ಏರಿಸಿದ ಪರಿಣಾಮ ಐದು ವರ್ಷಗಳ ಮೆಚ್ಯುರಿಟಿ ಅವಧಿಯಲ್ಲಿ 12.30 ಲಕ್ಷದ ಬಡ್ಡಿ ದರದೊಂದಿಗೆ ಒಟ್ಟು 42.30 ಲಕ್ಷ ರೂಪಾಯಿ ಸಿಗಲಿದೆ. ಇದನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕ ಹಾಕಿದರೆ 2 ಲಕ್ಷ 46 ಸಾವಿರ ರೂಪಾಯಿ ಮತ್ತು ಮಾಸಿಕ ಆಧಾರದಲ್ಲಿ ನೋಡಿದರೆ 20,500 ರೂಪಾಯಿ ಆಗುತ್ತದೆ.

Join Nadunudi News WhatsApp Group

Join Nadunudi News WhatsApp Group