Septembar Holiday: ಸೆಪ್ಟೆಂಬರ್ ನಲ್ಲಿ ಅರ್ಧ ತಿಂಗಳು ಬ್ಯಾಂಕ್ ಬಂದ್, ಬ್ಯಾಂಕ್ ವ್ಯವಹಾರ ಆದಷ್ಟು ಬೇಗ ಮುಗಿಸಿಕೊಳ್ಳಿ.
ಬ್ಯಾಂಕ್ ನಲ್ಲಿ ವಹಿವಾಟು ನಡೆಸುವವರು ಬ್ಯಾಂಕ್ ರಜಾ ದಿನಗಳ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.
Septembar Bank Holiday List: ಇದೀಗ ಆಗಸ್ಟ್ 2023 ಇನ್ನೇನು 8 ದಿನಗಳಲ್ಲಿ ಮುಗಿಯಲಿದೆ. ಆಗಸ್ಟ್ ಅಂತ್ಯಗೊಂಡ ಬಳಿಕ ಸೆಪ್ಟೆಂಬರ್ ತಿಂಗಳು ಆರಂಭಗೊಳ್ಳಲಿದೆ. ಇನ್ನು ಹೊಸ ತಿಂಗಳು ಆರಂಭಗೊಂಡಾಗ ಆರ್ ಬಿಐ(RBI) ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಬಾರಿ ಕೂಡ ಆರ್ ಬಿಐ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬ್ಯಾಂಕ್ ನಲ್ಲಿ ವಹಿವಾಟು ನಡೆಸುವವರು ಬ್ಯಾಂಕ್ ರಜಾ ದಿನಗಳ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.
ಸೆಪ್ಟೆಂಬರ್ ನಲ್ಲಿ 16 ದಿನಗಳು ಬ್ಯಾಂಕ್ ಬಂದ್
ಇನ್ನು ಭಾರತೀಯ ರಿಸರ್ವ್ ಇತ್ತೀಚೆಗಷ್ಟೇ 2000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿತ್ತು. 2,000 ನೋಟುಗಳ ವಿನಿಮಯ ಹಾಗೂ ಠೇವಣಿಗಾಗಿ ಆರ್ ಬಿಐ ಸೆಪ್ಟೆಂಬರ್ 30 ರ ವ ರೆಗೆ ಕಾಲಾವಕಾಶವನ್ನು ನೀಡಿದೆ. ಇನ್ನು 2,000 ನೋಟಿನ ಠೇವಣಿ ಅಥವಾ ವಿನಿಮಯಕ್ಕಾಗಿ ಸೆಪ್ಟೆಂಬರ್ ನಲ್ಲಿ ಮಾತ್ರ ಅವಕಾಶ ಇರುತ್ತದೆ.
ನೀವು ಹಣದ ಠೇವಣಿ ಅಥವಾ ವಿನಿಮಯ ಮಾಡಿಕೊಳ್ಳಲು ಇನ್ನು ಒಂದು ತಿಂಗಳು ಬಾಕಿ ಇದೆ ಎಂದು ಭಾವಿಸಬೇಡಿ. ಏಕೆಂದರೆ ಸೆಪ್ಟೆಂಬರ್ ನಲ್ಲಿ 16 ದಿನಗಳು ಬ್ಯಾಂಕುಗಳಿಗೆ ರಜೆ ಇರುತ್ತದೆ. ಈ ಕಾರಣಕ್ಕೆ ನೀವು ಕೇವಲ 14 ದಿನಗಳು ಮಾತ್ರ ಬ್ಯಾಂಕ್ ನಲ್ಲಿ ವಹಿವಾಟನ್ನು ನಡೆಸಬಹುದಾಗಿದೆ. ಇದೀಗ ಸೆಪ್ಟೆಂಬರ್ ತಿಂಗಳಿನಲ್ಲಿ ಬ್ಯಾಂಕುಗಳಿಗೆ ಯಾವ ದಿನಾಂಕದಂದು, ಯಾವ ವಿಶೇಷಕ್ಕೆ ರಜೆ ಇರುತ್ತದೆ ಎನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
ಬ್ಯಾಂಕ್ ನ 16 ದಿನಗಳ ರಜಾ ದಿನದ ವಿವರ
*ಇನ್ನು ಸೆಪ್ಟೆಂಬರ್ 3, 10, 17, 24 ಭಾನುವಾರ ಇರುವ ಕಾರಣ ದೇಶದಾದ್ಯಂತ ಬ್ಯಾಂಕ್ ರಜೆಯಲ್ಲಿರುತ್ತದೆ. ಪ್ರತಿ ತಿಂಗಳ ಭಾನುವಾರ ಬ್ಯಾಂಕುಗಳಿಗೆ ರಜೆ ಇರುವುದು ಸಾಮಾನ್ಯ.
* ಸೆಪ್ಟೆಂಬರ್ 9 ಮತ್ತು 23 ಎರಡನೇ ಮತ್ತು ನಾಲ್ಕನೇ ಶನಿವಾರ ಆದ ಕಾರಣ ಬ್ಯಾಂಕ್ ಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 6 ಬುಧವಾರ ಕೃಷ್ಣಾ ಜನ್ಮಾಷ್ಠಮಿಯ ದಿನ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 18 ಮಂಗಳವಾರ ಗಣೇಶ ಚತುರ್ಥಿಯ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 19 ಮತ್ತು 20 ಗಣೇಶ ಚತುರ್ಥಿಯ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 22 ಶ್ರೀ ನಾರಾಯಣ ಗುರು ಸಮಾಧಿ ದಿನದ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 23 ಮಹಾರಾಜಾ ಹರಿಸಿಂಗ್ ಜಿ ಅವರಾ ಜನ್ಮದಿನದ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 25 ಶ್ರೀಮಂತ ಶಂಕರ ಜನ್ಮದಿನೋತ್ಸವ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 27 ಪ್ರವಾದಿ ಮೊಹಮದ್ದ್ ಅವರ ಜನ್ಮದಿನದ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 28 ಈದ್ -ಮಿಲಾದ್ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 29 ಈದ್ -ಮಿಲಾದ್ ನಂತರ ಇಂದ್ರಜಾತಾ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.