Sampath Jayaram: ಆತ್ಮಹತ್ಯೆ ಮಾಡಿಕೊಂಡ ಅಗ್ನಿಸಾಕ್ಷಿ ಸೀರಿಯಲ್ ನಟ, ಆಘಾತದಲ್ಲಿ ಕನ್ನಡ ಕಿರುತೆರೆ.

ಅಗ್ನಿಸಾಕ್ಶಿ ಧಾರಾವಾಹಿ ನಟ ಸಂಪತ್ ಜಯರಾಮ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Agnisakshi Serial Actor Sampath Jayaram Suicide: ಕಿರುತೆರೆ ಹಾಗು ಹಿರಿತೆರೆಯಲ್ಲಿ ಹೆಸರು ಮಾಡಿದ್ದ ಸಂಪತ್ ಜಯರಾಮ್ (Sampath Jayaram)  ಅವರು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.

ಯುವ ನಟ ಸಂಪತ್ ಜಯರಾಮ್ ಅವರು ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ (Agnisakshi Serial) 

ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದರು. ಧಾರಾವಾಹಿಗಳ ಜೊತೆಗೆ ಕನ್ನಡದ ಕೆಲವು ಚಿತ್ರಗಳಲ್ಲೂ ಕೂಡ ನಟ ಸಂಪತ್ ಜಯರಾಮ್ ನಟಿಸಿದ್ದಾರೆ.

Agnisakshi serial actor Sampath Jayaram committed suicide.
Image Credit: news18

ಅಗ್ನಿಸಾಕ್ಷಿ ಖ್ಯಾತಿಯ ನಟ ಸಂಪತ್ ಜಯರಾಮ್ ಆತ್ಮಹತ್ಯೆ
ಅಗ್ನಿಸಾಕ್ಷಿ ಖ್ಯಾತಿಯ ಯುವ ನಟ ಸಂಪತ್ ಜಯರಾಮ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಪತ್ ಜಯರಾಮ್ ಅವರಿಗೆ 35 ವರ್ಷ. ನಟ ಸಂಪತ್ ಜಯರಾಮ್ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆಲಮಂಗಲದ ಅರಿಶಿನಕುಂಟೆಯಲ್ಲಿ ಈ ಘಟನೆ ಸಂಭವಿಸಿದೆ. ಕನ್ನಡ ಚಿತ್ರರಂಗ ಸಂಪತ್ ಜಯರಾಮ್ ಅವರ ನಿಧನನಿಂದಾಗಿ ಕಂಬನಿ ಮಿಡಿಯುತ್ತಿದೆ.

ಸಂಪತ್ ಜಯರಾಮ್ ಆತ್ಮಹತ್ಯೆ ಕಾರಣ
ಕಳೆದ ಒಂದು ವರ್ಷದ ಹಿಂದೆ ಸಂಪತ್ ಜಯರಾಮ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಆಗಿ ಒಂದು ವರ್ಷದಲ್ಲೇ ಸಂಪತ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

Join Nadunudi News WhatsApp Group

Actor Sampath Jayaram committed suicide due to lack of opportunities
Image Credit: news18

ಇತ್ತೀಚಿನ ದಿನಗಳಲ್ಲಿ ಸಂಪತ್ ಜಯರಾಮ್ ಅವರಿಗೆ ನಟಿಸಲು ಸೂಕ್ತ ಅವಕಾಶಗಳು ಸಿಗದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಶನಿವಾರ ನೆಲಮಂಗಲದಲ್ಲಿ ಸಂಪತ್ ಜಯರಾಮ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಗ್ನಿಸಾಕ್ಷಿಯಲ್ಲಿ ಸಂಪತ್ ಜಯರಾಮ್
ಕನ್ನಡದಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಬಹಳ ಜನಪ್ರಿಯತೆಯನ್ನು ಪಡೆದಿತ್ತು. ಅಗ್ನಿಸಾಕ್ಷಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ಈ ಧಾರಾವಾಹಿಯಲ್ಲಿ ಟಾಪ್ ಒನ್ ರಲ್ಲಿ ಇರುತ್ತಿತ್ತು. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿರುವ ಎಲ್ಲ ಪಾತ್ರದಾರಿಗಳು ಕೂಡ ಬಹ ಖ್ಯಾತಿ ಪಡೆದಿದ್ದರು. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕಿಯಾದ ಸನ್ನಿಧಿ ಅವರ ಅಣ್ಣನ ಪಾತ್ರದಲ್ಲಿ ಸಂಪತ್ ಜಯರಾಮ್ ನಟಿಸಿದ್ದರು. ಅಣ್ಣನ ಪಾತ್ರಕ್ಕೆ ಸಂಪತ್ ಜೀವ ತುಂಬಿದ್ದರು.

Join Nadunudi News WhatsApp Group