Setu Bandha: 1 ರಿಂದ 10 ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್, ಶಾಲೆಗಳಲ್ಲಿ ಆರಂಭ ಆಗಲಿದೆ ಹೊಸ ಕಾರ್ಯಕ್ರಮ.

ಕರ್ನಾಟಕದ ಎಲ್ಲ ಶಾಲೆಗಳಲ್ಲಿ ಸೇತುಬಂಧ ಕಾರ್ಯಕ್ರಮವನ್ನ ಮಾಡಲು ಸೂಚನೆಯನ್ನ ನೀಡಲಾಗಿದೆ.

Setu Bandha Program: ರಾಜ್ಯದಲ್ಲಿ ಎಲ್ಲಾ ಶಾಲೆಗಳು (School) ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಹೌದು ಜೂನ್ 1 ನೇ ತಾರೀಕಿನಿಂದ ರಾಜ್ಯದಲ್ಲಿ ಎಲ್ಲಾ ಶಾಲೆಗಳು ತೆರೆಯಲಿದ್ದು ಮಕ್ಕಳು ಖುಷಿ ಖುಷಿಯಿಂದ ಮತ್ತೆ ಶಾಲೆಗಳಿಗೆ ಹೋಗಲಿದ್ದಾರೆ. ಸದ್ಯ ರಾಜ್ಯದಲ್ಲಿ ಮಕ್ಕಳ ಶಿಕ್ಷಣ ಪದ್ದತಿಯಲ್ಲಿ ಕೆಲವು ಬದಲಾವಣೆಗಳನ್ನ ಮಾಡಲಾಗುತ್ತಿದ್ದು ಇದು ಮಕ್ಕಳ ಶಿಕ್ಷಣ ಮೇಲೆ ಬಹಳ ಒಳ್ಳೆಯ ಪರಿಣಾಮವನ್ನ ಉಂಟುಮಾಡಲಿದೆ.

Setubandha program will start for school children
Image Credit: news18

ಜೂನ್ 1 ರಿಂದ ಶಾಲೆಗಳು ಆರಂಭ
ಮಕ್ಕಳಿಗೆ ಬೇಸಿಗೆ ಮುಗಿದಿದ್ದು ಜೂನ್ ಮೊದಲ ದಿನವೇ ಶಾಲೆಗಳು ಆರಂಭ ಆಗಲಿದೆ ಎಂದು ಶಿಕ್ಷಣ ಇಲಾಖೆ ಆದೇಶವನ್ನ ಹೊರಡಿಸಿದೆ. ಇದರ ನಡುವೆ ರಾಜ್ಯ ಶಿಕ್ಷಣ ಇಲಾಖೆ ಮಕ್ಕಳ ಶಿಕ್ಷಣ ಪದ್ದತಿಯಲ್ಲಿ ಬದಲಾವಣೆ ಮಾಡಲು ಮುಂದಾಗಿದ್ದು ಇದು 1 ರಿಂದ 10 ನೇ ತರಗತಿ ಮಕ್ಕಳಿಗೆ ಅನ್ವಯಿಸಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಶಾಲಾ ಮಕ್ಕಳಿಗೆ ಆರಂಭ ಆಗಲಿದೆ ಸೇತುಬಂಧ ಕಾರ್ಯಕ್ರಮ
ಹೌದು ರಾಜ್ಯ ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ಶಾಲೆಗಳು ಸೇತುಬಂಧ ಕಾರ್ಯಕ್ರಮವನ್ನ ಮಾಡಲು ತೀರ್ಮಾನವನ್ನ ಮಾಡಿದೆ. ಮಕ್ಕಳ ಬುದ್ಧಿಶಕ್ತಿ ಮತ್ತು ಶಿಕ್ಷಣ ಮಟ್ಟವನ್ನ ಹೆಚ್ಚಿಸುವ ಉದ್ದೇಶದಿಂದ ಎಲ್ಲಾ ಶಾಲೆಗಳಲ್ಲಿ ಸೇತುಬಂಧ ಕಾರ್ಯಕ್ರಮ ಅಳವಡಿಸಲು ಆದೇಶವನ್ನ ಹೊರಡಿಸಲಾಗಿದೆ.

Setubandha program will start for school children
Image Credit: careers360

1 ರಿಂದ 3 ನೇ ತರಗತಿ ಮಕ್ಕಳಿಗೆ 30 ದಿನದ ಕಾಲ ಮತ್ತು 4 ರಿಂದ ಹತ್ತನೇ ತರಗತಿ ಮಕ್ಕಳಿಗೆ 15 ದಿನಗಳ ಕಾಲ ಸೇತುಬಂಧ ಕಾರ್ಯಕ್ರಮ ಮಾಡಲು ಸೂಚನೆಯನ್ನ ನೀಡಲಾಗಿದೆ. ಮಕ್ಕಳ ಸೇತುಬಂಧ ಕಾರ್ಯಕ್ರಮದ ವಿನ್ಯಾಸ ಮತ್ತು ಸಾಹಿತ್ಯವನ್ನ ಸಿದ್ದಪಡಿಸಿ https://desert.karnataka.gov.in/info-sethubandha ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಮಕ್ಕಳ ತರಗತಿ ಮತ್ತು ವಯಸ್ಸಿಗೆ ಅನುಗುಣವಾಗಿ ಕಾರ್ಯಕ್ರಮವನ್ನ ಮಾಡಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group