Sewer Workers: ಕಾರ್ಮಿಕರಿಗೆ ಗುಡ್ ನ್ಯೂಸ್ ನೀಡಿದ ಸುಪ್ರೀಂ ಕೋರ್ಟ್, ಸಿಗಲಿದೆ 30 ಲಕ್ಷ ರೂಪಾಯಿ ಪರಿಹಾರ.
ಇಂತಹ ಕಾರ್ಮಿಕರು ಕೆಲಸದ ಸಮಯದಲ್ಲಿ ಪ್ರಾಣ ಕಳೆದುಕೊಂಡರೆ ಸಿಗಲಿದೆ 30 ಲಕ್ಷ ಪರಿಹಾರ.
Sewer Workers Death Compensation Amount: ಸದ್ಯ ದೇಶದಲ್ಲಿ ಹೊಸ ಹೊಸ ನಿಯಮಗಳು ಪರಿಚಯವಾಗುತ್ತಿದೆ. ಇನ್ನು ಭಾರತೀಯ ನ್ಯಾಯಾಲಯ ಕಾರ್ಮಿಕರಿಗಾಗಿ ವಿವಿಧ ಕಾನೂನನ್ನು ರೂಪಿಸಿದೆ ಎನ್ನಬಹುದು. ಕಾರ್ಮಿಕರ ಸುರಕ್ಷತೆ ಕೇಂದ್ರದ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಮಿಕ ಸುರಕ್ಷತೆಗೆ ಹೆಚ್ಚಿನ ನಿಗಾ ವಹಿಸುತ್ತಿದೆ.
ಇನ್ನು ಕಳೆದ ಐದು ವರ್ಷಗಳಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ದೇಶದಲ್ಲಿ ಸುಮಾರು 347 ಕ್ಕೋ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶ, ತಮಿಳುನಾಡು, ದೆಹಲಿಯಲ್ಲಿ ಈ ಸಾವಿನ ಪ್ರಕ್ರನಗಳು ಹೆಚ್ಚಾಗಿ ಬೆಳಕಿಗೆ ಬಂದಿವೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಒಳಚರಂಡಿ ಕಾರ್ಮಿಕರಿಗೆ ಮಹತ್ವದ ಆದೇಶ
ಇದೀಗ ಸುಪ್ರೀಂ ಕೋರ್ಟ್ ಒಳಚರಂಡಿ ನೈರ್ಮಲ್ಯ ಕಾರ್ಮಿಕರ (Sewer Deaths ) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. ಮ್ಯಾನ್ ಹೋಲ್ ಗಳನ್ನೂ ಸ್ವಚ್ಛಗೊಳಿಸುವ ಸಮಯದಲ್ಲಿ ಕಾರ್ಮಿಕರಿಗೆ ಎದುರಾಗುವ ತೊಂದರೆಗಳ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಒಳಚರಂಡಿ ಕೆಲಸ ಮಾಡುವಾಗ ಕಾರ್ಮಿಕ ಸತ್ತರೆ 30 ಲಕ್ಷ ಪರಿಹಾರ
ಮ್ಯಾನ್ ಹೋಲ್ ಗಳನ್ನೂ ಸ್ವಚ್ಛಗೊಳಿಸುವ ಸಮಯದಲ್ಲಿ ಕಾರ್ಮಿಕರು ಸಾಯುತ್ತಿರುವ ಪ್ರಕರಣ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಹೀಗಾಗಿ ಈ ಕೆಲಸದ ಸಮಯದಲ್ಲಿ ಕಾರ್ಮಿಕರು ಸಾವನ್ನಪ್ಪಿದರೆ ಸ್ಥಳೀಯ ಆಡಳಿತಗಳು 30 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶ ಹೊರಡಿಸಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಮಾನ ಕೈಗೊಂಡಿದೆ. ಇದರ ಜೊತೆಗೆ ಕೈಯಲ್ಲಿ ಕಸ ವಿಲೇವಾರಿ ಪದ್ದತಿಯನ್ನು ತೊಡೆದುಹಾಕಬೇಕು ಎಂದು ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಅಂಗವಿಕಲರಾದರೆ 20 ಲಕ್ಷ ಪರಿಹಾರ
ಕಾರ್ಮಿಕರ ಸಾವಿಗೆ ಪರಿಹಾರ ಮೊತ್ತ ನೀಡಬೇಕು ಎಂದು ನ್ಯಾಯಮೂರ್ತಿಗಳಾದ S . Ravindra Bhat ಮತ್ತು Aravindh Kumar ಅವರು ತೀರ್ಪನ್ನು ನೀಡಿದ್ದಾರೆ. ಒಳಚರಂಡಿ ನೈರ್ಮಲ್ಯ ಕಾರ್ಮಿಕರ (Sewer Deaths) ಸಾವಿನ ಪ್ರಕರಣಕ್ಕೆ 30 ಲಕ್ಷ ಪರಿಹಾರ ಹಾಗೂ ಚರಂಡಿ ಸ್ವಚ್ಛಗೊಳಿಸುವ ವೇಳೆ ಅಂಗವಿಕಲರಾದರೆ 20 ಲಕ್ಷ ಪರಿಹಾರ ನೋಡಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.