Ads By Google

Virat And Shah Rukh Khan: ವಿರಾಟ್ ಅನ್ನು ಅಳಿಯ ಎಂದು ಕರೆದ ಶಾರುಖ್ ಖಾನ್, ಅಷ್ಟಕ್ಕೂ ಇಬ್ಬರ ನಡುವಿನ ಸಂಬಂಧ ಏನು…?

Shah Rukh Khan About Virat Kohli

Image Source: Prajawani

Ads By Google

Shah Rukh Khan About Virat Kohli: ಬಾಲಿವುಡ್ ನ ಕಿಂಗ್ ಖಾನ್ Shah Rukh Khan ಕೋಲ್ಕತ್ತಾ ತಂಡದ ಮಾಲೀಕರು ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ. ಶಾರುಖ್ ಖಾನ್ ಸಿನಿಮಾದ ಜೊತೆಗೆ ಕ್ರಿಕೆಟ್ ನಲ್ಲಿ ಕೊಡ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಇನ್ನು ಶಾರುಖ್ ಖಾನ್ ಅವರು ಸದ್ಯ ಜವಾನ್ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ ಎನ್ನಬಹುದು.

ಶಾರುಖ್ ಖಾನ್ ನಟನೆಯ ಎಲ್ಲ ಚಿತ್ರಗಳು ಬಹುತೇಕ ಹಿಟ್ ಕಂಡಿವೆ. ಇನ್ನು ಶಾರುಖ್ ಖಾನ್ Social Media ದಲ್ಲಿ ಆಗಾಗ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಲೇ ಇರುತ್ತಾರೆ. ಸದ್ಯ ಶಾರುಖ್ ಖಾನ್ ಅವರು ವಿರಾಟ್ ಕೊಹ್ಲಿ ಅವರ ಬಗ್ಗೆ ಮಾತನಾಡಿ ಮತ್ತೆ ಹೈಲೈಟ್ ಆಗಿದ್ದಾರೆ.

Image Credit: Hindustantimes

#Ask SRK ಸೆಷನ್
ಇದೀಗ Shah Rukh Khan ಅವರು ಸೋಶಿಯಲ್ ಮೀಡಿಯಾದಲ್ಲಿ #Ask SRK ಸೆಷನ್ ನಡೆಸಿದ್ದು ಅಭಿಮಾನಿಗಳು ಇವರ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ Shah Rukh Khan ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರರ Virat kohli ಅವರ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಸದ್ಯ SRK ಈ ಹೇಳಿಕೆ ಇವರಬ್ಬರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸಿದೆ ಎನ್ನಬಹುದು.

ವಿರಾಟ್ ಅನ್ನು ಅಳಿಯ ಎಂದು ಕರೆದ ಶಾರುಖ್ ಖಾನ್
ಜವಾನ್ ಚಿತಾರದ ಖುಷಿಯಲ್ಲಿರುವ ಶಾರುಖ್ ಖಾನ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. #Ask SRK ಸೆಷನ್ ನಲ್ಲಿ ವ್ಯಕ್ತಿಯೋರ್ವರು ಜವಾನ್ ಸ್ಟೈಲ್ ನಲ್ಲಿ Virat Kohli ಬಗ್ಗೆ ಮಾತನಾಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಶಾರುಖ್ ಖಾನ್ “ನನಗೆ Virat Kohli ಎಂದರೆ ತುಂಬಾ ಇಷ್ಟ. ಅವರು ನಮ್ಮವರೇ, ನನಗೆ ಅಳಿಯ ಇದ್ದ ಹಾಗೆ. ಅವರಾ ಏಳಿಗೆಗಾಗಿ ಸದಾ ಪ್ರಾರ್ಥಿಸುತ್ತೇನೆ” ಎಂದು ಅಭಿಮಾನಿಗಳ ಪ್ರಶ್ನೆಗೆ ಕಿಂಗ್ ಖಾನ್ ಉತ್ತರ ನೀಡಿದ್ದಾರೆ.

Image Credit: Hindustantimes

ವಿರಾಟ್ ಹಾಗೂ ಶಾರುಖ್ ಖಾನ್ ಬಾಂಧ್ಯವ್ಯ ಮೆಚ್ಚಿದ ಅಭಿಮಾನಿಗಳು
ಇನ್ನು ಶಾರುಖ್ ಖಾನ್ ಹಾಗೂ ವಿರಾಟ್ ಕೊಹ್ಲಿ ಈ ಹಿಂದೆ IPL 2023 ರ ವೇಳೆ ಎಲ್ಲರ ಗಮನ ಸೆಳೆದಿದ್ದರು. IPL ಪಂದ್ಯ ನೋಡಲು ಬಂದ ಶಾರುಖ್ ಖಾನ್ ವಿರಾಟ್ ಕೊಹ್ಲಿ ಅವರ ಜೊತೆ ಮೈದಾನದಲ್ಲಿ ಪಠಾಣ್ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪಠಾಣ್ ಚಿತ್ರದ ಹಾಡು ಜೋಮ್ ಜೋ ಪಠಾಣ್ ಹಾಡಿಗೆ ವಿರಾಟ್ ಜೊತೆ ಶಾರುಖ್ ಖಾನ್ ಭರ್ಜರಿ ಸ್ಟೆಪ್ ಹಾಕಿದ್ದರು.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸಂಚಲನ ಮೂಡಿಸಿತ್ತು. ಈ ವೇಳೆ ಇಬ್ಬರ ಬಾಂದವ್ಯ ಕಂಡು ಅಭಿಮಾನಿಗಳು ಖುಷಿ ಪಟ್ಟಿದ್ದರು. ಸದ್ಯ ಇದೀಗ ಮತ್ತೆ ವಿರಾಟ್ ಅವರ ಬಗ್ಗೆ ಶಾರುಖ್ ಖಾನ್ ಅವರ ಮಾತುಗಳು ಎಲ್ಲರ ಮೆಚ್ಚುಗೆ ಕಾರಣವಾಗಿದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.