Shah Rukh Khan: ಶಾರುಖ್ ಖಾನ್ ಕಾಫಿ ಕುಡಿಯುವ ಮಗ್ ಬೆಲೆ ಎಷ್ಟು ಗೊತ್ತಾ…? ದುಬಾರಿ ನಟನ ಐಷಾರಾಮಿ ಜೀವನ.

ಬಾಲಿವುಡ್ ಸ್ಟಾರ್ ನಟ ಬಳಸುತ್ತಿರುವ ಕಾಫಿ ಮಗ್ ಬೆಲೆ ಎಷ್ಟು..?

Shah Rukh Khan Expensive Coffee Cup: ಬಾಲಿವುಡ್ ನ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ಅವರು ತಮ್ಮ ಹೊಸ ಹೊಸ ಚಿತ್ರದ ಚಿತ್ರಿಕ್ರಣದಲ್ಲಿ ಬ್ಯುಸಿ ಆಗಿದ್ದಾರೆ. ಪಠಾಣ್ ಭರ್ಜರಿ ಯಶಸ್ಸಿನ ಬಳಿಕ ಬಾಲಿವುಡ್ ನ ಕಿಂಗ್ ಖಾನ್ ಇದೀಗ ಜವಾನ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿ ಶಾರುಖ್ ಖಾನ್ ಅತಿ ಹೆಚ್ಚು ಬೇಡಿಕೆ ಇರುವ ನಟರಾಗಿದ್ದಾರೆ.

ಇವರ ಅದ್ಭುತ ನಟನೆಗೆ ಕೋಟ್ಯಾಂತರ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಇನ್ನು ಭಾರತೀಯ ಚಿತ್ರರಂಗದ ಕಲಾವಿದರಾರು ಆಗಾಗ ತಮ್ಮ ಐಷಾರಾಮಿ ಜೀವನದ ವಿಚಾರವಾಗಿ ಸುದ್ದಿಯಾಗುತ್ತಾರೆ. ದುಬಾರಿ ಕಾರ್, ವಾಚ್, ಡ್ರೆಸ್ ಧರಿಸುವ ಮೂಲಕ ಆಗಾಗ ಹೈಲೈಟ್ ಆಗುತ್ತಾರೆ. ಇನ್ನು ಬಾಲಿವುಡ್ ನ ನಟರು ಹೆಚ್ಚಾಗಿ ಐಷಾರಾಮಿ ಜೀವನ ನಡೆಸುತ್ತಾರೆ.

Shah Rukh Khan Expensive Coffee Cup
Image Credit: India.Postsen

ಶಾರುಖ್ ಲಕ್ಸುರಿ ಲೈಫ್
ಇನ್ನು ಬಾಲಿವುಡ್ ಚಿತ್ರರಂಗದಲ್ಲಿ ಶಾರುಖ್ ಖಾನ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದಾರೆ. ಈ ಕಾರಣಕ್ಕೆ ಶಾರುಖ್ ಅತ್ಯಂತ ಲಕ್ಸುರಿ ಜೀವನ ನಡೆಸುತ್ತಾರೆ. ಈ ಹಿಂದೆ ಸಾಕಷ್ಟು ಬಾರಿ ಶಾರುಖ್ ಖಾನ್ ಅವರು ದುಬಾರಿ ಡ್ರೆಸ್ ಹಾಗು ಕಾರ್ ಖರೀದಿಯ ವಿಚಾರವಾಗಿ ಸುದ್ದಿಯಾಗಿದ್ದರು. ಇದೀಗ ಶಾರುಖ್ ಕೈಯಲ್ಲಿ ಮತ್ತೊಂದು ದುಬಾರಿ ವಸ್ತು ಕಾಣಿಸಿಕೊಂಡಿದೆ. ನೋಡಲು ಸಣ್ಣದಾಗಿದ್ದರೂ ಕೂಡ ಈ ವಸ್ತು ಊಹೆಗೂ ಮೀರಿ ದುಬಾರಿ ಬೆಲೆ ಬಾಳುತ್ತದೆ.

ಶಾರುಖ್ ಖಾನ್ ಕಾಫಿ ಕುಡಿಯುವ ವಿಡಿಯೋ ವೈರಲ್
ಶಾರುಖ್ ಖಾನ್ ಅವರ ವಿಡಿಯೋವೊಂದು ಇದೀಗ ಬಾರಿ ವೈರಲ್ ಆಗುತ್ತಿದೆ. 2017 ರಲ್ಲಿ ಹಂಚಿಕೊಂಡಿದ್ದ ಶಾರುಖ್ ಖಾನ್ ಅವರ ವಿಡಿಯೋ ಇದೀಗ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಈ ವೈರಲ್ ವಿಡಿಯೋದಲ್ಲಿ ಶಾರುಖ್ ಖಾನ್ ಕಾಫಿ ಮಗ್ ನಲ್ಲಿ ಸಿಫ್ ತೆಗೆದುಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ಬಾಲಿವುಡ್ ಸ್ಟಾರ್ ನಟ ಬಳಸುತ್ತಿರುವ ಕಾಫಿ ಮಗ್ ಹೀಟರ್ ಮತ್ತು ಎಲ್ ಇಡಿಲೈಟಿಂಗ್ ವೈಶಿಷ್ಟ್ಯವನ್ನು ಹೊಂದಿದೆ.

Shah Rukh Khan Expensive Coffee Cup
Image Credit: Me.Mashable

ಶಾರುಖ್ ಖಾನ್ ಕಾಫಿ ಕುಡಿಯುವ ಮಗ್ ಬೆಲೆ ಎಷ್ಟು ಗೊತ್ತಾ
ಈ ಕಾಫಿ ಮಗ್ ಎವರ್ ಟ್ರಾವೆಲ್ ಮಗ್ 2 ಪ್ಲಸ್ ಆಗಿದೆ. ಈ ಮಗ್  ನಲ್ಲಿ ಯಾವುದೇ ನೀರನ್ನು ಇರಿಸಿ ತಾಪಮಾನವನ್ನು ಸೆಟ್ ಮಾಡಿಕೊಳ್ಳಬಹುದು. ಈ ಮಗ್ ಅನ್ನು ಒಮ್ಮೆ ಚಾರ್ಜ್ ಮಾಡಿ ಮೂರು ಗಂಟೆಗಳ ಕಾಲ ಬಳಸಿಕೊಳ್ಳಬಹುದು. ಚಾರ್ಜಿಂಗ್ ಕೋಸ್ಟರ್ ಸಹ ಈ ಮಗ್ ನಲ್ಲಿ ಸಿಗುತ್ತದೆ. ಇದರಲ್ಲಿ ಅಳವಡಿಸಲಾದ ಪ್ಲಸ್ ಮತ್ತು ಮೈನಸ್ ಚಿಹ್ನೆಯ ಮೂಲಕ ಮಗ್ ನ ತಾಪಮಾನವನ್ನು ಸರಿಹೊಂದಿಸಿಕೊಳ್ಳಬಹುದು. ಈ ವಿಶೇಷ ಕಾಫಿ ಮಗ್ ನ್ ಬೆಲೆ 35,862 ರೂ. ಆಗಿದೆ.

Join Nadunudi News WhatsApp Group

Join Nadunudi News WhatsApp Group