Jawan Review: SRK ಅಭಿನಯದ ಜವಾನ್ ಚಿತ್ರ ನಿಜಕ್ಕೂ ಹೇಗಿದೆ…? ಚಿತ್ರ ನೋಡಿದ ಜನರು ಹೇಳಿದ್ದೇನು.
ಇದೀಗ ಪಠಾಣ್ ದಾಖಲೆಯ ಬೆನ್ನಲ್ಲೇ ಶಾರುಖ್ ಖಾನ್ ಜವಾನ್ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಲು ಸಿದ್ಧವಾಗಿದೆ.
Shah Rukh Khan Movie Review Kannada: ಬಾಲಿವುಡ್ ನ ಕಿಂಗ್ Shah Rukh Khan ಪಠಾಣ್ ಚಿತ್ರದ ಯಶಸ್ಸಿನ ಬಳಿಕ ಇದೀಗ ಮತ್ತೆ ಹೊಸ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಲಿದ್ದಾರೆ. ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಖಾನ್ (Shah Rukh Khan) ಇದೀಗ ತಮ್ಮ ‘ಜವಾನ್‘ (Jawan) ಚಿತ್ರದ ವಿಚಾರವಾಗಿ ಮತ್ತೆ ಸುದ್ದಿಯಾಗುತ್ತಿದ್ದಾರೆ.
ಇನ್ನು ಶಾರುಖ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಪಠಾಣ್ ಚಿತ್ರ ದೇಶದೆಲ್ಲೆಡೆ ಜನವರಿ 25 ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಇದೀಗ ಪಠಾಣ್ ದಾಖಲೆಯ ಬೆನ್ನಲ್ಲೇ ಶಾರುಖ್ ಖಾನ್ Jawan ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಲು ಸಿದ್ಧವಾಗಿದೆ.
ಅದ್ದೂರಿಯಾಗಿ ಬಿಡುಗಡೆಗೊಂಡಿದೆ ಜವಾನ್
ಐದು ವರ್ಷದ ಬಳಿಕ ಶಾರುಖ್ ಖಾನ್ ಪಠಾಣ್ ಚಿತ್ರದ ಮೂಲಕ ಮತ್ತೆ ದಾಖಲೆ ಬರೆದಿದ್ದರು. ಇದೀಗ ಶಾರುಖ್ ಅಭಿನಯದ ‘ಜವಾನ್’ ಚಿತ್ರ ಸೆಪ್ಟೆಂಬರ್ 7 ರಂದು ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಬಹು ನಿರೀಕ್ಷಿತ ಜವಾನ್ ಚಿತ್ರ ಬಿಡುಗಡೆಯಾಗಿ ಶಾರುಖ್ ಅಭಿಮಾನಿಗಳು ಕಾಯುತ್ತಿದ್ದರು. ಹಿಂದಿ, ತಮಿಳು, ತೆಲಗು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಿದ್ದು ಬಾಕ್ಸ್ ಓಫೀಸ್ ಅನ್ನು ಕಬಳಿಸಲು ಜವಾನ್ ಸಿದ್ಧವಾಗಿದೆ.
ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರ ನಿಜಕ್ಕೂ ಹೇಗಿದೆ…?
ದೇಶ ಉಳಿಸುವ ಜವಾನ್ ಆಗಿ ಶಾರುಖ್ ಖಾನ್ ತೆರೆ ಮೇಲೆ ಮಿಂಚಿದ್ದಾರೆ. ಕಾಲಿವುಡ್ ನ ಖ್ಯಾತ ನಿರ್ದೇಶಕ ಅಟ್ಲಿ (Atlee) ಅವರು ನಿರ್ದೇಶನ ಮಾಡಿದ್ದು ಸಿನಿಮಾ ಬಗ್ಗೆ ಪ್ರೇಕ್ಷಕರು ಬರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಿಡ್ ನೈಟ್ ಶೋಗಳಿಂದಲೇ ಜವಾನ್ ಚಿತ್ರಕ್ಕೆ ಭರ್ಜರಿ ರೆಸ್ಪೋನ್ಸ್ ಲಭಿಸಿದೆ.
Twitter ನಲ್ಲಿ ಜವಾನ್ ಚಿತ್ರದ ಬಗ್ಗೆ ಬೆಸ್ಟ್ Review ಲಭಿಸಿದೆ. ಜವಾನ್ ಒಬ್ಬ ವಿನ್ನರ್, ಅಟ್ಲಿ ಅವರು ಮಾಸ್ ಜಗತ್ತಿನಲ್ಲಿ ನಮ್ಮನ್ನು ಮನರಂಜಿಸುತ್ತಾರೆ. ಇಂದೊಂದು ಅಮೋಘ ಎಂಟರ್ಟೈನರ್ ನೋಡಲೇಬೇಕಾದ ಸಿನಿಮಾ ಎಂದು ಒಬ್ಬರು ಟ್ವೀಟ್ ಮಾಡಿದ್ರೆ, ಇನ್ನೊಬ್ಬರು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಎಂದಿದ್ದಾರೆ.
ಭರ್ಜರಿಯಾಗಿದೆ Javan Second Half
ಜವಾನ್ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಯಾವುದೇ ತಪ್ಪಿಲ್ಲದಿರುವ High Action Entertainer ಚಿತ್ರ ಇದಾಗಿದ್ದು, ಮಾಸ್ ಮತ್ತು ಕ್ಲಾಸ್ ಮಿಶ್ರಣವಾಗಿದೆ. ಕಿಂಗ್ ಖಾನ್ ಮಾಸ್ಟರ್ ಪೀಸ್ ನಟನೆ ಅಟ್ಲಿ ನಿರ್ದೇಶನದಿಂದ ಸಿನಿಮಾ ಎಲ್ಲರ ಗಮನ ಸೆಳೆದಿದೆ. ಇನ್ನು ಭಾರತೀಯ ಸಿನಿಮಾರಂಗದಲ್ಲಿ ಇದುವರೆಗೆ ಮಾಡಿದ ಪರಿಪೂರ್ಣ ಆಕ್ಷನ್ ಎಂಟರ್ ಟೈನರ್ ಇದಾಗಿದೆ.
VFX ಅತ್ಯತ್ತಮ ಗುಣಮಟ್ಟವನ್ನು ಹೊಂದಿದೆ. ಚಿತ್ರದ ಕಥೆ ಅದ್ಭುತವಾಗಿದೆ. ಇನ್ನು ಚಿತ್ರದ 2 ಹಾಫ್ ನಲ್ಲಿ ಅಸಲಿ ಮಜಾ ಇದೆ ಎಂದು ಟ್ವೀಟ್ ನಲ್ಲಿ ಪ್ರತಿಕ್ರಿಯಿಸಲಾಗಿದೆ. ಇನ್ನು ಜವಾನ್ ಬಿಡುಗಡೆಗೊಂಡ ಕೆಲವೇ ಕ್ಷಣದಲ್ಲಿ ಹೆಚ್ಚಿನ ರೆಸ್ಪೋನ್ಸ್ ಪಡೆದಿದ್ದುಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಹಣ ಕೊಳ್ಳೆ ಹೊಡೆಯುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.