Shakthi Yojana: ಶಕ್ತಿ ಯೋಜನೆಯ ಮೂಲಕ ಬಸ್ ಹತ್ತುತ್ತಿರುವ ಮಹಿಳೆಯರಿಗೆ ಶೀಘ್ರವೇ ಈ ನಿಯಮ
ಇನ್ಮುಂದೆ ನೀವು ಶಕ್ತಿ ಯೋಜನೆಯ ಫಲ ಪಡೆಯಬೇಕಾದರೆ ನೀವು ಸ್ಮಾರ್ಟ್ ಕಾರ್ಡ್ ಪಡೆಯುದು ಕಡ್ಡಾಯ ವಾಗಿ ಬೇಕಿದೆ.
Shakthi Yojana Smart Card New Updates: ಕಾಂಗ್ರೆಸ್(Congress) ಸರಕಾರದ ಗ್ಯಾರಂಟಿ ಯೋಜನೆಗಳು ಇಂದು ಬಹು ಬೇಡಿಕೆಯನ್ನು ಹೊಂದಿದ್ದು, ಒಂದೊಂದೆ ಜಾರಿಯಾಗುತ್ತಿದೆ, ಅದರಲ್ಲೂ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆ ಬಹು ಬೇಡಿಕೆಯನ್ನು ಹೊಂದಿದ್ದು ಬಹಳಷ್ಟು ಮಹಿಳೆಯರು ಈ ಯೋಜನೆಗಳ ಸದುಪಯೋಗ ಕೂಡ ಮಾಡಿಕೊಂಡಿದ್ದಾರೆ, ಇನ್ನೂ ಶಕ್ತಿ ಯೋಜನೆಯಲ್ಲಿ(Shakthi Yojana) ಉಚಿತ ಪ್ರಯಾಣ ಇದ್ದು ಮಹಿಳೆಯರು ಆಧಾರ್ ಕಾರ್ಡ್(Aadhar Card) ತೋರಿಸಿ ರಾಜ್ಯ ದಲ್ಲಿ ಪ್ರಯಾಣ ನಡೆಸುತ್ತಿದ್ದಾರೆ, ಆದರೆ ಇನ್ಮುಂದೆ ನೀವು ಶಕ್ತಿ ಯೋಜನೆಯ ಫಲ ಪಡೆಯಬೇಕಾದರೆ ನೀವು ಸ್ಮಾರ್ಟ್ ಕಾರ್ಡ್ ಪಡೆಯುದು ಕಡ್ಡಾಯ ವಾಗಿ ಬೇಕಿದೆ.
ಸ್ಮಾರ್ಟ್ ಕಾರ್ಡ್ ಮಾಡಿಸಿ
ಶಕ್ತಿ ಯೋಜನೆ ಪ್ರಾರಂಭಗೊಂಡು ಇದೀಗ ಈಗಾಗಲೇ ಮೂರು ತಿಂಗಳು ಕಳೆದಿದೆ, ಇದೀಗ ರಾಜ್ಯ ಸರ್ಕಾರ ಶಕ್ತಿ ಯೋಜನೆಯ ಬಗ್ಗೆ ಮಹತ್ವದ ನಿಯಮವನ್ನು ಕೈಗೊಂಡಿದ್ದು, ಇನ್ನುಮುಂದೆ ಶಕ್ತಿ ಯೋಜನೆಯಡಿ ಪ್ರಯಾಣ ಮಾಡುವ ಎಲ್ಲಾ ಮಹಿಳೆಯರು ಕೂಡ ಈ ನಿಯಮವನ್ನು ಪಾಲಿಸಬೇಕಿದ್ದು ಮಹಿಳೆಯರು Aadhaar card ಅಥವಾ ಇನ್ನಾವುದೇ ID ಪುರಾವೆಯನ್ನು ತೋರಿಸುವ ಕ್ರಮ ವನ್ನು ಸ್ಥಗಿತ ಮಾಡಲಿದೆ, ಶಕ್ತಿ ಯೋಜನೆಯ ಸೌಲಭ್ಯ ಪಡೆಯಲು ಮಹಿಳೆಯರು Shakti Smart Card ಮಾಡಿಸಲು ಕರ್ನಾಟಕ ಒನ್, ಬಾಪೂಜಿ ಕೇಂದ್ರ, ಮೂಲಕ ಶಕ್ತಿ ಯೋಜನೆಗೆ ನೋಂದಣಿಗೆ ಅವಕಾಶ ನೀಡಲಿದೆ, ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು ಮುಂದಿನ ತಿಂಗಳಿಂದ ವಿತರಣೆ ಮಾಡಲು ಸಿದ್ದತೆ ನಡೆಸಿದೆ
ಮಹಿಳೆಯರ ಸಂಖ್ಯೆ ಹೆಚ್ಚಳ
ಉಚಿತ ಬಸ್ ಸೇವೆ ಆರಂಭ ವಾದ ನಂತರ ಮಹಿಳೆಯರ ಪ್ರಯಾಣ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದೆ, ಈ ಯೋಜನೆಯ ಬೇಡಿಕೆ ಕೂಡ ಹೆಚ್ಚಾಗಿದ್ದು ಪುರುಷರಿಗಿಂತ ಮಹಿಳೆಯರೆ ಹೆಚ್ಚಾಗಿ ಪ್ರಯಾಣ ಮಾಡಿದ್ದಾರೆ,
ಯೋಜನೆ ನಿಲ್ಲಿಸುವ ಬಗ್ಗೆ ಸುಳ್ಳು ಸುದ್ದಿ
ಈಗಾಗಲೇ ಶಕ್ತಿ ಯೋಜನೆ ಸ್ಥಗಿತ ಗೊಳ್ಳುವ ಬಗ್ಗೆ ಹಲವಾರು ಸುದ್ದಿಗಳು ಹಬ್ಬಿದ್ದವು, ,ಈ ಬಗ್ಗೆ ಸರಕಾರವು ಇದು ಸುಳ್ಳು ಸುದ್ದಿ, ಯಾಗಿದ್ದು ನಂಬಬೇಡಿ ಎಂದ ಸರ್ಕಾರ ಮಾಹಿತಿನೀಡಿದೆ, ಉಚಿತ ಬಸ್ ಯೋಜನೆಯನ್ನು ನಿಲ್ಲಿಸುವ ಬಗ್ಗೆ ಸಾಕಷ್ಟು ವದಂತಿಗಳು ಇದ್ದವು. , ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಈ ಬಗ್ಗೆ ಮಾಹಿತಿ ನೀಡಿ ಗ್ಯಾರಂಟಿ ಯೋಜನೆಗಳು ನಿರಂತರವಾಗಿ ನಡೆಯುವ ಪ್ರಕ್ರಿಯೆ ಆಗಿದ್ದು ಇದರ ಬಗ್ಗೆ ಸಂದೇಹ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.