Free Bus: ಮಹಿಳೆಯರು ದಿನಕ್ಕೆ ಎಷ್ಟು ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು, ಷರತ್ತುಗಳು ಅನ್ವಯ.

ಮಹಿಳೆಯರು ರಾಜ್ಯದಲ್ಲಿ ಎಷ್ಟು ಬಸ್ ಗಳಲ್ಲಿ ಉಚಿತ ಸಂಚಾರ ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯಿರಿ.

Shakti Scheme Rule In Karnataka: ನಿನ್ನೆಯಿಂದ ರಾಜ್ಯದಾದ್ಯಂತ ಮಹಿಳೆಯರಿಗಾಗಿ ಶಕ್ತಿ ಯೋಜನೆ (Shakti Scheme) ಆರಂಭಗೊಂಡಿದೆ. ಕರ್ನಾಟಕ ರಾಜ್ಯದ ಮಹಿಳೆಯರು ಉಚಿತ ಬಸ್ ಪ್ರಯಾಣದ (Free Bus Travel) ಸೌಲಭ್ಯವನ್ನು ಪಡೆಯಬಹುದಾಗಿದೆ. ಇನ್ನು ಶಕ್ತಿ ಯೋಜನೆಯ ಕುರಿತಾಗಿ ಈಗಾಗಲೇ ಸಾಕಷ್ಟು ಅಪ್ಡೇಟ್ ಗಳು ಹೊರಬರುತ್ತಿದೆ.

ಶಕ್ತಿ ಯೋಜನೆಗಾಗಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಈಗಾಗಲೇ ಉಚಿತ ಪ್ರಯಾಣಕ್ಕಾಗಿ ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನು ಸರ್ಕಾರ ಜಾರಿಗೊಳಿಸಿದೆ. ಇದೀಗ ಮಹಿಳೆಯರು ಎಷ್ಟು ಬಸ್ ಗಳಲ್ಲಿ ಉಚಿತ ಪ್ರಯಾಣವನ್ನು ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ನೀಡಲಾಗಿದೆ.

Women can travel free only in government buses.
Image Credit: news9live

ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ
ನಿನ್ನೆಯಿಂದ ರಾಜ್ಯದ ಮಹಿಳೆಯರು ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತ ಬಸ್ ಪ್ರಯಾಣವನ್ನು ಮಾಡಬಹುದಾಗಿದೆ. ಉಚಿತ ಪ್ರಯಾಣಕ್ಕಾಗಿ ಈಗಾಗಲೇ ಸರ್ಕಾರ ಒಂದಿಷ್ಟು ಷರತ್ತುಗಳನ್ನು ಹಾಕಿದೆ. ಮಹಿಳೆಯರು ಸರ್ಕಾರ ವಿಧಿಸಿದ ಷರತ್ತುಗಳ ಮೇರೆಗೆ ಉಚಿತ ಬಸ್ ಪ್ರಯಾಣದ ಲಾಭವನ್ನುಪಡೆದುಕೊಳ್ಳಬಹುದಾಗಿದೆ.

ಮಹಿಳೆಯರು ತಮ್ಮ ಫೋಟೋ ಜೊತೆಗೆ ವಿಳಾಸ ಧ್ರಡೀಕರಿಸಲಾದ ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ನ ಮೂಲಕ ಪ್ರಯಾಣ ಮಾಡಬಹುದು. ಉಚಿತ ಪ್ರಯಾಣಕ್ಕೆ ಪ್ರತ್ಯೇಕ ಬಸ್ ಪಾಸ್ ನೀಡಲಾಗುವುದಿಲ್ಲ. ಎಸಿ ಹಾಗೂ ಐಷಾರಾಮಿ ಬಸ್ ಗಳನ್ನೂ ಹೊರತುಪಡಿಸಿ ಇತರ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ಸರಕಾರಿ ಬಸ್ ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು.

Women can travel free only in government buses.
Image Credit: news9live

ಬೆಂಗಳೂರು ನಗರದಲ್ಲಿಯುವ ಮಹಿಳೆಯರು BMTC ವೋಲ್ಟ್ ಬಸ್ ಗಳನ್ನೂ ಹೊರತುಪಡಿಸಿ ಸಾಮಾನ್ಯ ಬಸ್ ಗಳಲ್ಲಿ ಮಾತ್ರ ಸಂಚರಿಸಬಹುದು.ಕರ್ನಾಟಕದಲ್ಲಿ ಮಾತ್ರ ಈ ಉಚಿತ ಪ್ರಯಾಣ ಲಭ್ಯವಿದೆ. ಹೊರ ರಾಜ್ಯಗಳ ಪ್ರಯಾಣಕ್ಕೆ ಉಚಿತ ಪ್ರಯಾಣ ನೀಡಲಾಗುವುದಿಲ್ಲ. ಸರ್ಕಾರದ ನಾಲ್ಕು ನಿಗಮಗಳ ಬಸ್ ಗಳಲ್ಲೂ ಉಚಿತ ಪ್ರಯಾಣವನ್ನು ನೀಡಲಾಗುವುದು.

Join Nadunudi News WhatsApp Group

ಮಹಿಳೆಯರು ದಿನಕ್ಕೆ ಎಷ್ಟು ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು
ಸರ್ಕಾರೀ ಬಸ್ ಗಳಲ್ಲಿ ಮಾತ್ರ ಮಹಿಳೆಯರು ಉಚಿತ ಪ್ರಯಾಣವನ್ನು ಮಾಡಬಹುದು. ಎಸಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ಇನ್ನು ಮಹಿಳೆಯರು ರಾಜ್ಯದಲ್ಲಿ ಎಷ್ಟು ಬಸ್ ಗಳಲ್ಲಿ ಉಚಿತ ಸಂಚಾರ ಮಾಡಬಹುದು ಎನ್ನುವ ಬಗ್ಗೆ ಈಗಾಗಲೇ ಸರ್ಕಾರ ಮಹಿತಿ ನೀಡಿದೆ. ರಾಜ್ಯದ 6,308 ನಗರ, 5,958 ಸಾಮಾನ್ಯ ಹಾಗೂ 3,943 ವೇಗದೂತ ಬಸ್ಸುಗಳು ಸೇರಿದಂತೆ ಮಹಿಳೆಯರು ಒಟ್ಟು 18,609 ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ಮಾಡಬಹುದು.

Women can travel free only in government buses.
Image Credit: livemint

ಐಷಾರಾಮಿ ಸಾರಿಗೆ ಬಸ್ ಗಳಲ್ಲಿ ಶಕ್ತಿ ಯೋಜನೆ ಲಭ್ಯವಿರುವುದಿಲ್ಲ. ಗುರುತಿನ ಚೀಟಿ ಪರಿಶೀಲನೆ ನಡೆಸಿ ಶೂನ್ಯ ಟಿಕೆಟ್ ವಿತರಿಸಲಾಗುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ಇಟಿಎಮ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಲ್ಲಿ ಮ್ಯಾನುವಲ್ ರೀತ್ಯಾ ಪಿಂಕ್ ಟಿಕೆಟ್ ವಿತರಿಸಲು ಕ್ರಮ ವಹಿಸಲಾಗುತ್ತದೆ. ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರು ಮುಂಗಡವಾಗಿ ಟಿಕೆಟ್ ಅನ್ನು ಬುಕ್ ಮಾಡಿ ಪ್ರಯಾಣಿಸಲು ಸರ್ಕಾರ ಅವಕಾಶ ನೀಡಿದೆ.

Join Nadunudi News WhatsApp Group