Shakti Scheme: ಉಚಿತ ಬಸ್ ಬೆನ್ನಲ್ಲೇ ಇನ್ನೊಂದು ನಿಯಮ ಜಾರಿಗೆ ತಂದ ರಾಜ್ಯ ಸರ್ಕಾರ, ಎಲ್ಲ ಮಹಿಳೆಯರಿಗೆ ಕಡ್ಡಾಯ.
ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಲು ಈಗ ಮಹಿಳೆಯರಿಗೆ ಈ ನಿಯಮ ಕಡ್ಡಾಯ.
Shakti Scheme Smart Card: ಕರ್ನಾಟಕ ರಾಜ್ಯದಾದ್ಯಂತ ಜೂನ್ 11 ರಿಂದ ಮಹಿಳೆಯರಿಗಾಗಿ ಶಕ್ತಿ ಯೋಜನೆ (Shakti Scheme) ಜಾರಿಯಾಗಿದೆ. ರಾಜ್ಯದ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇನ್ನು ಸರ್ಕಾರ ಐದು ಯೋಜನೆಗಳ ಅನುಷ್ಠಾನಕ್ಕಾಗಿ ಎಷ್ಟು ಖರ್ಚಾಗಲಿದೆ ಎನ್ನುವ ಬಗ್ಗೆ ಈಗಾಗಲೇ ಚರ್ಚೆ ನಡೆಸಿದೆ.
ಇನ್ನು ಉಚಿತ ಪ್ರಯಾಣ ಲಭ್ಯವಾಗಿ ಒಂದು ತಿಂಗಳು ಕಳೆದಿದೆ. ಇದೀಗ ಶಕ್ತಿ ಯೋಜನೆಗಾಗಿ ಇನ್ನೊಂದು ಹೊಸ ಸೌಲಭ್ಯವನ್ನು ನೀಡಲು ಸರ್ಕಾರ ಮುಂದಾಗಿದೆ. ಮಹಿಳೆಯರಿಗಾಗಿ ಟ್ಯಾಪ್ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ಮುಂದಾಗಿದೆ.
ಮಹಿಳೆಯರ ಶಕ್ತಿ ಯೋಜನೆ ಹೊಸ ಅಪ್ಡೇಟ್
ಸದ್ಯ ಶಕ್ತಿ ಯೋಜನೆ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ಮಹಿಳಾ ಪ್ರಯಾಣಿಕರ ದಾಖಲೆ ಪರಿಶೀಲಿಸಿ ಟಿಕೆಟ್ ನೀಡುವುದಕ್ಕೆ ಸಾಕಷ್ಟು ಸಮಯ ತಗುಲಲಿದೆ. ಹಾಗೆಯೇ ಬೇರೆ ರಾಜ್ಯದ ಮಹಿಳಾ ಪ್ರಯಾಣಿಕರಿದ್ದರೆ ಅವರಿಗೆ ಪುರುಷರಿಗೆ ನೀಡುವ ಮಾದರಿಯಲ್ಲಿ ಹಣ ಪಡೆದು ಟಿಕೆಟ್ ನೀಡಬೇಕಿದೆ.
ಇದರಿಂದ ನಿರ್ವಾಹಕರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಅದಕ್ಕಾಗಿ ಮಹಿಳಾ ಪ್ರಯಾಣಿಕರಿಗೆ ಮಾಮೂಲಿ ಸ್ಮಾರ್ಟ್ ಕಾರ್ಡ್ ಬದಲು ಟಪ್ ಅಂಡ್ ಟ್ರಾವೆಲ್ ಸ್ಮಾರ್ಟ್ ಕಾರ್ಡ್ ನೀಡಲು ಚಿಂತನೆ ನಡೆಸಲಾಗಿದೆ.
ಶಕ್ತಿ ಯೋಜನೆಗೆ ಮಹಿಳೆಯರಿಗಾಗಿ ಟ್ಯಾಪ್ ಸ್ಮಾರ್ಟ್ ಕಾರ್ಡ್
ಟ್ಯಾಪ್ ಸ್ಮಾರ್ಟ್ ಕಾರ್ಡ್ ಗಳನ್ನೂ ಮಹಿಳೆಯರು ಬಸ್ ಹತ್ತುವಾಗ ಬಾಗಿಲಲ್ಲಿ ಅಳವಡಿಸುವ ಯಂತ್ರಕ್ಕೆ ಟ್ಯಾಪ್ ಮಾಡಿ ನಂತರ ಇಳಿಯುವಾಗ ಮತ್ತೊಮ್ಮೆ ಟ್ಯಾಪ್ ಮಾಡಬೇಕಿದೆ.
ಆಗ ಮಹಿಳಾ ಪ್ರಯಾಣಿಕರು ಎಲ್ಲಿಂದ, ಎಲ್ಲಿಗೆ ಪ್ರಯಾಣಿಸಿದರು ಎಂಬ ನಿಖರ ಮಾಹಿತಿ ಪಡೆಯಬಹುದು ಎನ್ನಲಾಗಿದೆ. ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ಟ್ಯಾಪ್ ಆ್ಯಂಡ್ ಟ್ರಾವೆಲ್ ಸ್ಮಾರ್ಟ್‌ಕಾರ್ಡ್ ಬಳಸಲಾಗುತ್ತಿದೆ. ಅದೇ ಮಾದರಿಯ ಸ್ಮಾರ್ಟ್‌ಕಾರ್ಡ್‌ನ್ನು ಮಹಿಳಾ ಪ್ರಯಾಣಿಕರಿಗೆ ನೀಡುವ ಬಗ್ಗೆ ಚರ್ಚಿಸಲಾಗಿದೆ.