Shakti Scheme: ಮಹಿಳೆಯರು ಆಧಾರ್ ಕಾರ್ಡ್ ತೋರಿಸಿ ಉಚಿತ ಪ್ರಯಾಣ ಮಾಡುವಂತಿಲ್ಲ, ನಿಯಮ ಬದಲಿಸಿದ ಸರ್ಕಾರ.

ಇನ್ನುಮುಂದೆ ಶಕ್ತಿ ಯೋಜನೆಯಡಿ ಪ್ರಯಾಣ ಮಾಡುವ ಪ್ರತಿ ಮಹಿಳೆಯರು ಕೂಡ ಈ ನಿಯಮವನ್ನು ಪಾಲಿಸಬೇಕಿದೆ.

Shakti Smart Card Update: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ Shakti Scheme ಮೊದಲು ಜಾರಿಗೆ ಬಂದಿತ್ತು. ಜೂನ್ 11 ರಂದು ಅನುಷ್ಠಾನಗೊಂಡಿದ್ದ ಮಹಿಳೆಯರ ಉಚಿತ ಪ್ರಯಾಣ ಮೂರು ತಿಂಗಳು ಪೂರ್ಣಗೊಂಡಿದೆ. ರಾಜ್ಯದ ಪ್ರತಿ ಮಹಿಳೆಯರು ಈ ಶಕ್ತಿ ಯೋಜನೆಯಡಿ ಒಂದು ರೂ. ಕೊಡದೆ ಶೂನ್ಯ ಬೆಲೆಯಲ್ಲಿ ರಾಜ್ಯದೆಲ್ಲೆಡೆ ಪ್ರಯಾಣವನ್ನು ಮಾಡುತ್ತಿದ್ದರು.

ಶಕ್ತಿ ಯೋಜನೆ ಪ್ರಾರಂಭಗೊಂಡ ಮೂರು ತಿಂಗಳ ಬಳಿಕ ಇದೀಗ ರಾಜ್ಯ ಸರ್ಕಾರ ಶಕ್ತಿ ಯೋಜನೆಯ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇನ್ನುಮುಂದೆ ಶಕ್ತಿ ಯೋಜನೆಯಡಿ ಪ್ರಯಾಣ ಮಾಡುವ ಪ್ರತಿ ಮಹಿಳೆಯರು ಕೂಡ ಈ ನಿಯಮವನ್ನು ಪಾಲಿಸಬೇಕಿದೆ.

shakti smart card new updates
Image Credit: Pmmodiyojana

ಮಹಿಳೆಯರ ಶಕ್ತಿ ಯೋಜನೆ ಪ್ರಾರಂಭಗೊಂಡು ಮೂರು ತಿಂಗಳು ಮುಕ್ತಾಯ
ಇನ್ನು ಜೂನ್ 11 ರಂದು Shakti ಯೋಜನೆಗೆ ಚಾಲನೆ ನೀಡುವ ಮೂಲಕ ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಕಲ್ಪಿಸಿಕೊಟ್ಟಿತ್ತು. ರಾಜ್ಯದ ಮಹಿಳೆಯರು ಜೂನ್ 11 ರಿಂದ ಉಚಿತ ಪ್ರಯಾಣದ ಲಾಭವನ್ನು ಪಡೆಯುತ್ತಿದ್ದಾರೆ. ಪ್ರತಿ ನಿತ್ಯ ಲಕ್ಷಾಂತರ ಮಹಿಳೆಯರು ಈ ಶಕ್ತಿ ಯೋಜನೆಯ ಅಡಿಯಲ್ಲಿ ಪ್ರಯಾಣ ನಡೆಸುತ್ತಿದ್ದಾರೆ.

ಇಲ್ಲಿಯತನಕ ಮಹಿಳೆಯರು Aadhar Card ಅಥವಾ ಇನ್ನಾವುದೇ ಗುರುತಿನ ಪುರಾವೆಯನ್ನು ನೀಡುವ ಮೂಲಕ ಸರ್ಕಾರೀ ಬಸ್ ಗಳಲ್ಲಿ ಉಚಿತ ಪ್ರಯಾಣ ನಡೆಸಬಹುದಿತ್ತು. ಆದರೆ ಇದೀಗ ರಾಜ್ಯ ಸರಕಾರ ಈ ನಿಯಮದಲ್ಲಿ ಬದಲಾವಣೆ ತಂದಿದೆ. ಶಕ್ತಿ ಯೋಜನೆಗೆ ಹೊಸ ನಿಯಮವನ್ನು ಸರ್ಕಾರ ಜಾರಿಗೊಳಿಸಿದೆ.

Congress Government Shakti Scheme
Image Credit: Thehindu

ಸದ್ಯದಲ್ಲೇ ದಾಖಲೆಗಳ ಜೊತೆ ಉಚಿತ ಪ್ರಯಾಣಕ್ಕೆ ಬ್ರೇಕ್ ಬೀಳಲಿದೆ
ಇನ್ನು ಮಹಿಳೆಯರ ಉಚಿತ ಪ್ರಯಾಣಕ್ಕೆಸರ್ಕಾರ Shakti Smart Card ಅನ್ನು ಘೋಷಿಸಿದೆ. ಈ ಮೂಲಕ ಮಹಿಳೆಯರು Aadhaar card ಅಥವಾ ಇನ್ನಾವುದೇ ID ಪುರಾವೆಯನ್ನು ತೋರಿಸುವ ಮೂಲಕ ಉಚಿತ ಮಾಡುವುದನ್ನು ನಿಲ್ಲಿಸಲಿದೆ. ಇನ್ನುಮುಂದೆ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣವನ್ನು ಮಾಡುವಾಗ ಆಧಾರ ಕಾರ್ಡ್ ಅಥವಾ ಇನ್ನಿತರ ಗುರುತಿನ ಪುರಾವೆಯನ್ನು ನೀಡುವಂತಿಲ್ಲ. ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣಿಸಲು Shakti Smart Card ಮಾಡಿಸಬೇಕಾಗಿದೆ.

Join Nadunudi News WhatsApp Group

Shakti Smart Card
ಇನ್ನು ರಾಜ್ಯ ಸರ್ಕಾರ ಈ Shakti Smart Card ಮಾಡಿಸಲು ಎಷ್ಟು ಹಣ ಪಾವತಿಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದೆ. ಶಕ್ತಿ ಯೋಜನೆಯ ಫಲಾನುಭವಿ ಮಹಿಳೆಯರು Shakti Smart Card ಮಾಡಿಸಲು 14.16 ರೂ. ಪಾವತಿಸಬೇಕಾಗಿದೆ. ಕರ್ನಾಟಕ ಒನ್, ಬಾಪೂಜಿ ಕೇಂದ್ರ, ಬೆಂಗಳೂರು ಒನ್ ನಲ್ಲಿ Shakti Smart Card ನೋಂದಣಿಗೆ ಅವಕಾಶ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಮುಂದಿನ ತಿಂಗಳಿಂದ ಮಹಿಳೆಯರಿಗೆ Shakti Smart Card ವಿತರಣೆ ಮಾಡುವ ಸಾಧ್ಯತೆ ಹೆಚ್ಚಿದೆ.

Join Nadunudi News WhatsApp Group