Ads By Google

Shakti Smart Card: ಉಚಿತ ಪ್ರಯಾಣ ಮಾಡುವ ಎಲ್ಲಾ ಮಹಿಳೆಯರು ಹಣ ಕಟ್ಟಬೇಕು, ಸರ್ಕಾರದ ಮಹತ್ವದ ನಿರ್ಧಾರ.

Shakti Smart Card Rate

Image Credit: allaboutbelgaum

Ads By Google

Shakti Smart Card Rate: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ Shakti Scheme ರಾಜ್ಯದಲ್ಲಿ ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದೆ. ರಾಜ್ಯದ ಮಹಿಳೆಯರು ರಾಜ್ಯದೆಲ್ಲೆಡೆ ಉಚಿತವಾಗಿ ಪ್ರಯಾಣಿಸಲು ಕಾಂಗ್ರೆಸ್ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಮಹಿಳೆಯರು ಒಂದು ರೂ. ಕೂಡ ಪಾವತಿಸಿದೆ ತಮ್ಮ Aadhar Card ಅಥವಾ ಇನ್ನಾವುದೇ ಗುರುತಿನ ಪುರಾವೆಯನ್ನು ತೋರಿಸುವ ಮೂಲಕ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದೀಗ ಮಹಿಳೆಯರ ಶಕ್ತಿ ಯೋಜನೆಯ ಕುರಿತು ಬಿಗ್ ಅಪ್ಡೇಟ್ ಲಭಿಸಿದೆ. ಶಕ್ತಿ ಯೋಜನೆಯಡಿ ಪ್ರಯಾಣ ಮಾಡುವವರು ಈ ಮಾಹಿತಿಯ ಬಗ್ಗೆ ತಿಳಿಯುವುದು ಉತ್ತಮ.

Image Credit: Twitter

ಮಹಿಳೆಯರ ಶಕ್ತಿ ಯೋಜನೆ
ಇನ್ನು ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತಗಳಿಂದ ಗೆದ್ದು ರಾಜ್ಯದಲ್ಲಿ ತನ್ನ ಅಧಿಕಾರವನ್ನು ಪಡೆದುಕೊಂಡಿದೆ. ಇನ್ನು ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಸರ್ಕಾರ ಜನರಿಗೆ ಐದು ಉಚಿತ ಯೋಜನೆಗಳನ್ನು ನೀಡುವುದಾಗಿ ಘೋಷಣೆ ಹೊರಡಿಸಿತ್ತು. ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಐದು ಯೋಜನೆಗಳ ಅನುಷ್ಠಾನದ ಕಾರ್ಯದಲ್ಲಿ ತೊಡಗಿಕೊಂಡಿದೆ.

ಇನ್ನು ಜೂನ್ 11 ರಂದು Shakti ಯೋಜನೆಗೆ ಚಾಲನೆ ನೀಡುವ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಕಲ್ಪಿಸಿಕೊಟ್ಟಿತ್ತು. ರಾಜ್ಯದ ಮಹಿಳೆಯರು ಜೂನ್ 11 ರಿಂದ ಉಚಿತ ಪ್ರಯಾಣದ ಲಾಭವನ್ನು ಪಡೆಯುತ್ತಿದ್ದಾರೆ. ಪ್ರತಿ ನಿತ್ಯ ಲಕ್ಷಾಂತರ ಮಹಿಳೆಯರು ಈ ಶಕ್ತಿ ಯೋಜನೆಯ ಅಡಿಯಲ್ಲಿ ಪ್ರಯಾಣ ನಡೆಸುತ್ತಿದ್ದಾರೆ.

ಇಲ್ಲಿಯತನಕ ಮಹಿಳೆಯರು Aadhar Card ಅಥವಾ ಇನ್ನಾವುದೇ ಗುರುತಿನ ಪುರಾವೆಯನ್ನು ನೀಡುವ ಮೂಲಕ ಸರ್ಕಾರೀ ಬಸ್ ಗಳಲ್ಲಿ ಉಚಿತ ಪ್ರಯಾಣ ನಡೆಸಬಹುದಿತ್ತು. ಆದರೆ ಇದೀಗ ರಾಜ್ಯ ಸರಕಾರ ಈ ನಿಯಮದಲ್ಲಿ ಬದಲಾವಣೆ ತಂದಿದೆ. ಶಕ್ತಿ ಯೋಜನೆಗೆ ಹೊಸ ನಿಯಮವನ್ನು ಸರ್ಕಾರ ಜಾರಿಗೊಳಿಸಿದೆ.

Image Credit: Dgyantimes

ಉಚಿತ ಪ್ರಯಾಣಕ್ಕೆ ಬೇಕು Shakti Smart Card
ಇನ್ನು ಮಹಿಳೆಯರ ಉಚಿತ ಪ್ರಯಾಣಕ್ಕೆಸರ್ಕಾರ Shakti Smart Card ಅನ್ನು ಘೋಷಿಸಿದೆ.ಇನ್ನುಮುಂದೆ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣವನ್ನು ಮಾಡುವಾಗ ಆಧಾರ ಕಾರ್ಡ್ ಅಥವಾ ಇನ್ನಿತರ ಗುರುತಿನ ಪುರಾವೆಯನ್ನು ನೀಡುವಂತಿಲ್ಲ. ಮಹಿಳೆಯರು ಶಕ್ತಿ ಯೋಜನೆಯ್ದಿ ಪ್ರಯಾಣಿಸಲು Shakti Smart Card ಮಾಡಿಸಬೇಕಾಗಿದೆ.

Shakti Smart Card Rate
ಇನ್ನು ರಾಜ್ಯ ಸರ್ಕಾರ ಈ Shakti Smart Card ಮಾಡಿಸಲು ಎಷ್ಟು ಹಣ ಪಾವತಿಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದೆ. ಶಕ್ತಿ ಯೋಜನೆಯ ಫಲಾನುಭವಿ ಮಹಿಳೆಯರು Shakti Smart Card ಮಾಡಿಸಲು 14.16 ರೂ. ಪಾವತಿಸಬೇಕಾಗಿದೆ. ಸದ್ಯದಲ್ಲೇ Shakti Smart Card ನೋಂದಣಿ ದಿನಾಂಕವನ್ನು ಸರ್ಕಾರ ಪ್ರಕಟಿಸಲಿದೆ. ಕರ್ನಾಟಕ ಒನ್, ಬಾಪೂಜಿ ಕೇಂದ್ರ, ಬೆಂಗಳೂರು ಒನ್ ನಲ್ಲಿ Shakti Smart Card ನೋಂದಣಿಗೆ ಅವಕಾಶ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field