Shakti Yojana: ಉಚಿತ ಪ್ರಯಾಣಿಸುವ ಮಹಿಳೆಯರಿಗೆ ಹೊಸ, ಇನ್ಮುಂದೆ ಇವರಿಗಿಲ್ಲ ಫ್ರೀ ಟಿಕೆಟ್

ಈ ನಿಯಮ ಪಾಲಿಸದಿದ್ದರೆ ನಿಮಗಿಲ್ಲ ಉಚಿತ ಪ್ರಯಾಣ..!

Shakti Yojana New Rule: ರಾಜ್ಯದಲ್ಲಿ ಜಾರಿಯಾಗಿರುವ ಉಚಿತ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿದೆ. ಇನ್ನು ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಲಾಭವನ್ನು ಮಹಿಳೆಯರು ಪಡೆಯುತ್ತಿದ್ದಾರೆ.

ರಾಜ್ಯದ ಮಹಿಳೆಯರು ಒಂದು ರೂ. ಖರ್ಚು ಮಾಡದೆ ಇಡೀ ರಾಜ್ಯದಾದ್ಯಂತ ಉಚಿತ ಪ್ರಯಾಣವನ್ನು ಮಾಡುತ್ತಿದ್ದಾರೆ. ಈವರೆಗೆ ತಮ್ಮ ವೈಯಕ್ತಿಕ ದಾಖಲೆಯನ್ನು ನೀಡಿ ಉಚಿತ ಪ್ರಯಾಣವನ್ನು ಮಾಡುತ್ತಿರುವ ಮಹಿಳೆಯರಿಗೆ ಇದೀಗ ಸರ್ಕಾರದಿಂದ ಹೊಸ ರೂಲ್ಸ್ ಜಾರಿಯಾಗಿದೆ.

Shakti Yojana New Rule
Image Credit: Karnataka Times

ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಹೊಸ ರೂಲ್ಸ್
ರಾಜ್ಯದಲ್ಲಿ ಮಹಿಳೆಯರು ತಮ್ಮ ವೈಯಕ್ತಿಕ ದಾಖಲೆಗಳನ್ನು ತೋರಿಸುತ್ತ ಈವರೆಗೆ ಸರ್ಕಾರೀ ಬಸ್ ಗಳಲ್ಲಿ ಉಚಿತ ಪ್ರಯಾಣವನ್ನು ಮಾಡುತ್ತಿದ್ದರು. ವೈಯಕ್ತಿಕ ದಾಖಲೆಗಳಾದ ವೋಟರ್ ಐಡಿ, ಆಧಾರ್, ಪಾನ್ ಕಾರ್ಡ್ ನ ದಾಖಲೆಯನ್ನು ನೀಡಿ ಹಣವನ್ನು ನೀಡದೆ KSRTC ಬಸ್ ನಲ್ಲಿ ಸಂಚರಿಸಲು ಸರ್ಕಾರ ಈವರೆಗೆ ಅವಕಾಶವನ್ನು ನೀಡಿತ್ತು. ಆದರೆ ಇದೀಗ ಈ ನಿಯಮದಲ್ಲಿ ಮಹತ್ವದ ಬದಲಾವಣೆ ಆಗಿದೆ. ಇಂದಿನಿಂದ ಶಕ್ತಿ ಯೋಜನೆಗೆ ಈ ಹೊಸ ನಿಯಮ ಅನ್ವಯ ಆಗಲಿದೆ.

ಈ ನಿಯಮ ಪಾಲಿಸದಿದ್ದರೆ ನಿಮಗಿಲ್ಲ ಉಚಿತ ಪ್ರಯಾಣ..!
ಸದ್ಯ UIDAI ಹತ್ತು ವರ್ಷಗಳ ಹಿಂದೆ ಮಾಡಿಸಲಾದ ಆಧಾರ್ ಕಾರ್ಡ್ ನವೀಕರಣ ಕಡ್ಡಾಯಗೊಳಿಸಿದೆ. ಎಲ್ಲರು ಕೂಡ ಆಧಾರ್ ನವೀಕರಣವನ್ನು ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಶಕ್ತಿ ಯೋಜನೆಯ ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆಯಲು ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ಗಳು ಅಪ್ಡೇಟ್ ಆಗುವುದು ಅಗತ್ಯವಾಗಿದೆ. ಅಗತ್ಯ ದಾಖಲೆಯೊಂದಿಗೆ ಆಧಾರ್ ಲಿಂಕ್ ಆಗಿದ್ದರು ಆಧಾರ್ ಅಪ್ಡೇಟ್ ಆಗಿರುವುದು ಅಗತ್ಯ ಆಗಿದೆ. ಅಪ್ಡೇಟ್ ಆಗಿರುವ ಆಧಾರ್ ಕಾರ್ಡ್ ಅನ್ನು ತೋರಿಸಿದರೆ ಮಾತ್ರ ನೀವು ಉಚಿತ ಪ್ರಯಾಣವನ್ನು ಮಾಡಲು ಸಾಧ್ಯವಾಗುತ್ತದೆ.

Shakti Yojana Rules Update
Image Credit: Deccanherald

ಆಧಾರ್ ಕಾರ್ಡ್ ಅನ್ನು ನವೀಕರಿಸುವುದು ಹೇಗೆ…?
*ಮೊದಲು UIDAI Website ಆಗಿರುವ https://myaadhaar.uidai.gov.in/ ಗೆ ಭೇಟಿ ನೀಡಬೇಕು.

Join Nadunudi News WhatsApp Group

*UIDAI Website ನಲ್ಲಿ ಲಾಗಿನ್ ಆಗಿ Password ರಚಿಸಬೇಕು.

*ನಂತರ My Aadhaar ಮೇಲೆ ಟ್ಯಾಬ್ ಮಾಡಿ ಆಧಾರ್ ವಿವರಗಳನ್ನು ನವೀಕರಿಸಿ ನಮೂದಿಸಬೇಕು.

*ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ ಲಾಗಿನ್ ಆಗಬೇಕು.

•ನಂತರ ನೀವು ಬದಲಾವಣೆ ಮಾಡಬೇಕಾದ ವಿವರವನ್ನು ಭರ್ತಿ ಮಾಡಬೇಕು.

•ನಂತರ ಡಾಕ್ಯುಮೆಂಟ್ಸ್ ಅಪ್ಡೇಟ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.

•ಇಲ್ಲಿ ನೀವು ಆಧಾರ್ ಗೆ ಸಂಬಂಧಿಸಿದ ಮಾಹಿತಿಯನ್ನು ನೋಡುತ್ತಿರಿ.

•ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ನಂತರ ವಿಳಾಸವನ್ನು ನವೀಕರಿಸಲು ಅಗತ್ಯವಿರುವ ದಾಖಲೆಗಳನ್ನು ಅಪ್‌ ಲೋಡ್ ಮಾಡಿ.

•ನಂತರ ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸ್ವೀಕರಿಸಿ.

•ನಂತರ ನೀವು ನವೀಕರಣ ವಿನಂತಿ ಸಂಖ್ಯೆ (URN) ಸಂಖ್ಯೆ 14 ಅನ್ನು ಪಡೆಯುತ್ತೀರಿ.

•ಇದರ ಮೂಲಕ ನೀವು ಆಧಾರ್ ನವೀಕರಣ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಬಹುದು.

Free bus travel for women in Karnataka
Image Credit: The Hindu

Join Nadunudi News WhatsApp Group