Shalamalee: ಒಂದೇ ಹಾಡಿನ ಮೂಲಕ ದೇಶಾದ್ಯಂತ ಫೇಮಸ್ ಆದ ಪುಟ್ಟ ಹುಡುಗಿ, ಈ ಹಾಡಿಗೆ ಜನರು ಫುಲ್ ಫಿದಾ.
ಓಡಿ ಓಡಿ ಬಂದು ಹಣೆಗೆ ನೀಡಿ ನೀನೆ ಡಿಡಿಕ್ಕ ಹಾಡು ವೈರಲ್, ಹಾಡಿದ ಪುಟ್ಟ ಹುಡುಗಿ ಯಾರು.
Shalamalee Song Viral: ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಭಕ್ತಿ ಗೀತೆಯೊಂದು ಸಖತ್ ಫೇಮಸ್ ಆಗಿದೆ. ಈ ಭಕ್ತಿ ಗೀತೆ ಕೇಳಿದ ಜನರು ಮೋಡಿ ಆಗಿದ್ದಾರೆ. ಪುಟ್ಟ ಹುಡುಗಿಯ ಧ್ವನಿಗೆ ಎಲ್ಲರೂ ಸಹ ಫಿದಾ ಆಗಿದ್ದಾರೆ. ಈಗಲೂ ಸಹ ಆ ಹಾಡು ಹೆಚ್ಚಿನ ಜನರ ಬಾಯಲ್ಲಿ ಕೇಳಿ ಬರುತ್ತಿದೆ. ಮುದ್ದು ಪುಟಾಣಿಯ ಭಕ್ತಿಗೀತೆಗೆ ಎಲ್ಲರೂ ಮನ ಸೋತಿದ್ದಾರೆ.
ಟ್ರೆಂಡಿಂಗ್ ಆದ ಭಕ್ತಿಗೀತೆ
ಈಗ ಎಲ್ಲರ ಬಾಯಲ್ಲೂ ಓಡಿ ಓಡಿ ಬಂದು ಹಣೆಗೆ ನೀಡಿ ನೀನೆ ಡಿಡಿಕ್ಕ, ಡಿಡಿಕ್ಕ, ಡಿಡಿಕ್ಕ ಡಿಡಿಕ್ಕ ಎಂದು ಡಿಡಿ ಅಡ್ಯಾನೆ ರಂಗ ಡಿಡಿ ಅಡ್ಯಾನೆ ಹಾಡು ಕೇಳುಬರುತ್ತಿದೆ. ಏಕೆಂದರೆ ಪುಟ್ಟ ಹುಡುಗಿಯ ಈ ಹಾಡು ಎಲ್ಲೆಡೆ ಜನಪ್ರಿಯತೆ ಪಡೆದಿದೆ. ವಾಟ್ಸಾಪ್ ಸ್ಟೇಟಸ್ ನಿಂದ ಹಿಡಿದು ಇನ್ಸ್ಟಾಗ್ರಾಮ್ ಸ್ಟೋರಿ ಯಲ್ಲಿ ಸಹ ಈ ಹಾಡು ಬೆರಗು ಮೂಡಿಸುತ್ತಿದೆ. ಇನ್ನು ಈ ಹಾಡನ್ನು ಕೇಳಿದ ಜನರು ಇದಕ್ಕೆ ಧ್ವನಿಯಾದವರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.
ಓಡಿ ಓಡಿ ಬಂದು ಹಣೆಗೆ ನೀಡಿ ನೀನೆ ಡಿಡಿಕ್ಕ ಹಾಡನ್ನು ಹಾಡಿದ ಪುಟಾಣಿ ಯಾರು
ಓಡಿ ಓಡಿ ಬಂದು ಹಣೆಗೆ ನೀಡಿ ನೀನೆ ಡಿಡಿಕ್ಕ ಹಾಡನ್ನು ಹಾಡಿದ ಪುಟಾಣಿಯ ಹೆಸರು ಶಾಲ್ಮಲಿ. ಈ ಭಕ್ತಿಗೀತೆಯನ್ನು ಶಾಲ್ಮಲಿ ತನ್ನ ಮಧುರವಾದ ಕಂಠದಿಂದ ಹಾಡಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಸಣ್ಣ ಹುಡುಗಿ ಶಾಲ್ಮಲಿ ಈ ಮೊದಲು ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ ಅನ್ನುವ ಹಾಡಿನ ಮೂಲಕ ಜನಪ್ರಿಯತೆ ಪಡೆದ ಪುಟಾಣಿ. ಇದೀಗ ಡಿಡಿಕ್ಕ, ಡಿಡಿಕ್ಕ, ಡಿಡಿಕ್ಕ ಎನ್ನುವ ಹಾಡಿಗೆ ಧ್ವನಿ ಆಗುವ ಮೂಲಕ ಮತ್ತೆ ಜನರ ಮೋಡಿಗೆ ಕಾರಣರಾಗಿದ್ದಾಳೆ.
ಪುಟ್ಟ ಹುಡುಗಿ ಶಾಲ್ಮಲಿಯ ನಗು, ಖುಷಿಯಾಗಿರುವ ಕಣ್ಣುಗಳು, ಒಂದೇ ಕೈಯಿಂದ ಪುಟ್ಟ ಪುಟ್ಟ ಬೆರಳುಗಳಿಂದ ಪುಟ್ಟ ಹುಡುಗಿಯು ನುಡಿಸುತ್ತಿರುವ ಆ ವಿಡಿಯೋ ಜನರ ಮನ ಸೆಳೆಯುತ್ತಿವೆ. ಎಲ್ಲಿ ನೋಡಿದರು ಈ ಪುಟ್ಟ ಹುಡುಗಿಯ ಹಾಡು ಕೇಳಿ ಬರುತ್ತಿದೆ.
ಈ ಮೊದಲು ಶಾಲ್ಮಲಿ ಹಾಡಿದ್ದ ಹಾಡಿಗೆ ಪ್ರಧಾನಿ ಮೋಡಿ ಅವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋ ಪ್ರತಿಯೊಬ್ಬರ ಮುಖದಲ್ಲಿ ನಗುವನ್ನು ಮೂಡಿಸುತ್ತದೆ. ಅಸಾಧಾರಣ ಪ್ರತಿಭೆ ಮತ್ತು ಕ್ರಿಯಾಶೀಲತೆ ಈ ಬಾಲಕಿಯಲ್ಲಿದೆ. ಬೆಸ್ಟ್ ವಿಶೇಸ್ ಟು ಶಾಲ್ಮಲಿ ಎಂದು ಬರೆದುಕೊಂಡಿದ್ದರು.