Shawarma Ban: ಕಬಾಬ್, ಕಾಟನ್ ಕಂಡಿ, ಗೋಭಿ ಬೆನ್ನಲ್ಲೇ ಇನ್ನೊಂದು ಆಹಾರ ಬ್ಯಾನ್, ಸರ್ಕಾರದ ಆದೇಶ

ರಾಜ್ಯದಲ್ಲಿ ಇನ್ನುಮುಂದೆ ಸಿಗಲ್ಲ ಶವರ್ಮಾ

Shawarma Ban In Karnataka: ಸದ್ಯ ರಾಜ್ಯ ಸರ್ಕಾರ ಜನಸಾಮನ್ಯರಿಗಾಗಿ ಅನೇಕ ಸೌಲಭ್ಯವನ್ನು ನೀಡುವುದರ ಜೊತೆಗೆ ಜನರ ಜೀವಕ್ಕೆ ಹಾನಿಯಾಗುವಂತಹ ಆಹಾರ ಪದಾರ್ಥಗಳನ್ನು ನಿಷೇಧ ಮಾಡುವತ್ತ ಗಮನ ಹರಿಸುತ್ತಿದೆ. ಇತ್ತೀಚೆಗಷ್ಟೇ ಸರ್ಕಾರ ಗೋಬಿ ಮಂಚೂರಿ, ಕಲರ್ ಹಾಕಿರುವ ಕಬಾಬ್, ಪಾನಿಪುರಿ, ಕಾಟನ್ ಕ್ಯಾಂಡಿಯನ್ನು ನಿಷೇದಿಸಿತ್ತು.

ಈ ಜನಪ್ರಿಯ ತಿಂಡಿಗಳಲ್ಲಿ ಹಾನಿಕಾರಣ ಅಂಶಗಳು ಕಂಡುಬಂದ ಹಿನ್ನಲೆ ಸರ್ಕಾರ ಈ ಆಹಾರ ಪದಾರ್ಥಗಳನ್ನು ನಿಷೇಧಿಸಿತ್ತು. ಸದ್ಯ ಈ ಎಲ್ಲ ಆಹಾರ ಪದಾರ್ಥಗಳನ್ನು ನಿಷೇಧಿಸಿರುವ ಸರ್ಕಾರ ಇದರ ಬೆನ್ನಲ್ಲೇ ಇನ್ನೊಂದು ಕ್ರಮ ಕೈಗೊಂಡಿದೆ. ಹೌದು, ಜನರ ಅರೋಗ್ಯ ಸುರಕ್ಷತೆಗಾಗಿ ಸರ್ಕಾರ ಈ ಆಹಾರ ಪದಾರ್ಥವನ್ನು ನಿಷೇಧಿಸಲು ಮುಂದಾಗಿದೆ.

Shawarma Ban In Karnataka
Image Credit: The Hindu

ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ, ಪಾನಿಪುರಿ ಬೆನ್ನಲೇ ಈ ಜನಪ್ರಿಯ ಆಹಾರ ಬ್ಯಾನ್
ರಾಜ್ಯಾದ್ಯಂತ ಸಂಗ್ರಹಿಸಲಾದ ಹಲವಾರು Shawarma ಮಾದರಿಗಳಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಪತ್ತೆಯಾಗಿದೆ. ಹೀಗಾಗಿ ಆಹಾರ ಮತ್ತು ಗುಣಮಟ್ಟ ಇಲಾಖೆ (FASSAI) ಶವರ್ಮಾ ನಿಷೇಧವನ್ನು ಪರಿಗಣಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇತ್ತೀಚಿನ ದಿನಗಳಲ್ಲಿ ಶವರ್ಮಾ ತಿಂದು ಅಸ್ವಸ್ಥರಾಗಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಭಾರೀ ಸದ್ದು ಮಾಡುತ್ತಿವೆ. ಇದರ ಬೆನ್ನಲ್ಲೇ ಕ್ರಮ ಕೈಗೊಂಡಿರುವ ಆರೋಗ್ಯ ಇಲಾಖೆ ರಾಜ್ಯಾದ್ಯಂತ ಒಟ್ಟು 17 ಕಡೆ ಶವರ್ಮಾ ಮಾದರಿ ಸಂಗ್ರಹಿಸಿದ್ದು, 17 ರಲ್ಲಿ 8 ಕಡೆ ಬ್ಯಾಕ್ಟೀರಿಯಾ, ಯೀಸ್ಟ್ ಪತ್ತೆಯಾಗಿದೆ. ಹೀಗಾಗಿ ಶವರ್ಮಾ ಅಸುರಕ್ಷಿತ ಎಂದು ದೃಢಪಟ್ಟಿದೆ.

ರಾಜ್ಯದಲ್ಲಿ ಇನ್ನುಮುಂದೆ ಸಿಗಲ್ಲ ಶವರ್ಮಾ
ಆಹಾರ ತಯಾರಿಕೆಯ ಸಮಯದಲ್ಲಿ ನೈರ್ಮಲ್ಯದ ಕೊರತೆ, ದೀರ್ಘಕಾಲದ ಶೇಖರಣೆ ಮತ್ತು ವಿತರಣೆಯ ಸಮಯದಲ್ಲಿ ನೈರ್ಮಲ್ಯದ ಕೊರತೆಯಿಂದಾಗಿ ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಗಳು ಇರುತ್ತವೆ. ಹೀಗಾಗಿ ಎಲ್ಲಾ ಶವರ್ಮಾ ಆಹಾರ ತಯಾರಕರು ಆಹಾರ ಸುರಕ್ಷತೆ ನಿಯಮಗಳನ್ನು ಅನುಸರಿಸಬೇಕು. ಅಸುರಕ್ಷಿತ ಶವರ್ಮಾ ನೀಡುವ ಅಂಗಡಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಶವರ್ಮಾ ಮಾರಾಟಗಾರರಿಗೆ FSSAI ನೋಂದಣಿ ಕಡ್ಡಾಯವಾಗಿದೆ. ನೋಂದಣಿ ಪ್ರಮಾಣ ಪತ್ರ ನೀಡದಿದ್ದರೆ ಮಾರಾಟ ನಿಷೇಧಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನುಮುಂದೆ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ, ಪಾನಿಪುರಿ, ಕಬಾಬ್ ಗಳಂತೆ ಶವರ್ಮಾ ಕೂಡ ರಾಜ್ಯದಲ್ಲಿ ನಿಷೇಧವಾಗಿರುವ ಆಹಾರಗಳ ಪಟ್ಟಿಗೆ ಸೇರಲಿದೆ.

Shawarma Ban News
Image Credit: newsable

Join Nadunudi News WhatsApp Group

Join Nadunudi News WhatsApp Group