Shema EV: 67 ಸಾವಿರಕ್ಕೆ 75 Km ರೇಂಜ್ ಕೊಡುವ ಇನ್ನೊಂದು Ev ಸ್ಕೂಟರ್ ಲಾಂಚ್, ಬಡವರಿಗಾಗಿ ಈ ಸ್ಕೂಟರ್.
ನೂತನ ವಿನ್ಯಾಸದ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಿದ ಶೇಮಾ.
Shema Zoom Electric Scooter: ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ಜನಪ್ರಿಯತೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ನಿರಂತವಾಗಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೀಗ ದೇಶದ ಪ್ರತಿಷ್ಠ ಸ್ಟಾಟ್ ಅಪ್ ಕಂಪಾನಿಯಾದ ಶೇಮಾ ನೂತನ ವಿನ್ಯಾಸದ ಎಲೆಕ್ಟ್ರಿಕ್(Electric) ಮಾದರಿಯನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ.
ಮಾರುಕಟ್ಟೆಯಲ್ಲಿ ನೂತನ ಶೇಮ ಇ- ಎಲೆಕ್ಟ್ರಿಕ್ ಸ್ಕೂಟರ್ ಬಾರಿ ಸದ್ದು ಮಾಡುತ್ತಿದೆ. ಗ್ರಾಹಕರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಬಜೆಟ್ ವಿಭಾಗದಲ್ಲಿ ನೂತನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಶಕ್ತಿಯುತ ಬ್ಯಾಟರಿ ಜೊತೆಗೆ ಬಹಳ ದೂರದ ವ್ಯಾಪ್ತಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.
Shema Zoom Electric Scooter
ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಯೋಜನೆಯಲ್ಲಿದ್ದರೆ ಹೊಚ್ಚ ಹೊಸ Shema Zoom Electric Scooter ನವೈಶಿಷ್ಟ್ಯಗಳು ಮತ್ತು ಬೆಲೆಯ ಬಗ್ಗೆ ತಿಳಿದುಕೊಳ್ಳಿ. ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಶೆಮಾ ಜೂಮ್ ಅನ್ನು ಅತ್ಯಂತ ಆಕರ್ಷಕ ನೋಟದಲ್ಲಿ ವಿನ್ಯಾಸಗೊಳಿಸಲಾಗಿದೆ. 1.2 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದು ಸಾಮಾನ್ಯ ಚಾರ್ಜರ್‌ನೊಂದಿಗೆ ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಆಗಲು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಒಂದೇ ಚಾರ್ಜ್ ನಲ್ಲಿ 75km ಮೈಲೇಜ್
ಈ ಸ್ಕೂಟರ್‌ನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಪ್ಯಾಕ್ ಗೆ ಕಂಪನಿಯು 3 ವರ್ಷಗಳ ವಾರಂಟಿಯನ್ನು ಸಹ ನೀಡುತ್ತಿದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಈ ಸ್ಕೂಟರ್ 75 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ. ಹಾಗೆಯೆ ಈ ಸ್ಕೂಟರ್ ಗಂಟೆಗೆ 25 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. Shema Zoom Electric Scooter ಕಾಂಬಿ ಬ್ರೇಕಿಂಗ್ ಸಿಸ್ಟಮ್ ನೊಂದಿಗೆ ಮುಂಭಾಗ ಮತ್ತು ಹಿಂಭಾಗದ ಚಕ್ರಗಳಲ್ಲಿ ಡ್ರಮ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ.
Shema Zoom ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮತ್ತು ವಿಶೇಷತೆ
ಇನ್ನು ಆರಾಮದಾಯಕ ಸವಾರಿಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಕಾಯಿಲ್ ಮಾದರಿಯ ಶಾಕ್ ಅಬ್ಸಾರ್ಬರ್ ಅನ್ನು ಸಹ ಅಳವಡಿಸಲಾಗಿದೆ. Digital Instrument Console, Digital Speedometer, Digital Tripmeter, Push Button Start, LED Headlight, LED Tail Light, LED Turn Signal Lamp ಸೇರಿದಂತೆ ಇನ್ನಿತರ ಸುಧಾರಿತ ಫೀಚರ್ ಗಳನ್ನೂ ನೋಡಬಹುದಾಗಿದೆ. ಕಂಪನಿಯು ಈ ಸ್ಕೂಟರ್ ಅನ್ನು ಮಾರುಕಟ್ಟೆಯಲ್ಲಿ 67,000 ರಿಂದ 70,553 ರೂ. ಎಕ್ಸ್ ಶೋ ರೂಂ ಬೆಲೆಯಲ್ಲಿ ಬಿಡುಗಡೆ ಮಾಡಿದೆ.