Sherlyn Chopra: ರಾಹುಲ್ ಗಾಂಧಿಯಲ್ಲಿ ಮದುವೆ ಆಗಲು ಷರತ್ತು ಹಾಕಿದ ನಟಿ ಶೆರ್ಲಿನ್ ಚೋಪ್ರಾ, ಏನದು…?
ರಾಹುಲ್ ಗಾಂಧಿ ಅವರಿಗೆ ಮದುವೆ ಆಫರ್ ಕೊಟ್ಟ ಬಾಲಿವುಡ್ ಬ್ಯೂಟಿ.
Sherlyn Chopra About Rahul Gandhi: ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿ (Rahul Gandhi) ರಾಜಕೀಯ ವಿಚಾರವಾಗಿ ಹಾಗೂ ತಮ್ಮ ಮದುವೆಯ ವಿಚಾರವಾಗಿ ಆಗಾಗ ಸುದ್ದಿಯಾಗುತ್ತಾರೆ. ಸಾಕಷ್ಟು ಬಾರಿ ರಾಹುಲ್ ಗಾಂಧಿ ಅವರ ಮದುವೆಯ ವಿಚಾರ ಬಾರಿ ಚರ್ಚೆಗೆ ಒಳಗಾಗುತ್ತದೆ. ರಾಹುಲ್ ಗಾಂಧಿ ಅವರು ಯಾವುದೇ ರಾಜಕೀಯ ಸಮಾವೇಶಕ್ಕೆ ಭೇಟಿ ನೀಡಿದ ಕೂಡ ಅವರ ಮದುವೆಯ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ.
ರಾಹುಲ್ ಗಾಂಧಿ ಅವರು ಕೂಡ ಹಲವು ಬಾರಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಇದೀಗ ಮತ್ತೆ ರಾಹುಲ್ ಗಾಂಧಿ ಅವರ ಮದುವೆಯ ಸುದ್ದಿ ವೈರಲ್ ಆಗುತ್ತಿದೆ. ಕಾಂಗ್ರೆಸ್ ನಾಯಕನನ್ನು ಮದುವೆಯಾಗಲು ಬಾಲಿವುಡ್ ಬ್ಯೂಟಿ ಸಿದ್ದರಾಗಿದ್ದಾರೆ ಎನ್ನುವ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿದೆ. ನಟಿಯ ಹೇಳಿಕೆ ಇದೀಗ ರಾಹುಲ್ ಗಾಂಧಿ ಅವರ ಮದುವೆಯ ಕುರಿತು ಚರ್ಚೆಗೆ ಒಳಪಡಿಸಿದೆ.
ರಾಹುಲ್ ಗಾಂಧಿ ಅವರಿಗೆ ಮದುವೆ ಆಫರ್ ಕೊಟ್ಟ ಬಾಲಿವುಡ್ ಬ್ಯೂಟಿ
ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿವಾದಗಳೊಂದಿಗೆ ಸುದ್ದಿಯಾಗುವ ಬಾಲಿವುಡ್ ನ ಖ್ಯಾತ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ರಾಹುಲ್ ಗಾಂಧಿ ಅವರನ್ನು ಮದುವೆಯ ವಿಚಾರವಾಗಿ ಹೈಲೈಟ್ ಆಗಿದ್ದಾರೆ. ರಾಹುಲ್ ಗಾಂಧಿ ಅವರ ಮದುವೆಯ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ನಟಿಯ ಹೇಳಿಕೆ ಇದೀಗ ಬಾರಿ ಸಂಚಲನ ಮೂಡಿಸುತ್ತಿದೆ.
ಮುಂಬೈನ ಬಾಂದ್ರಾದಲ್ಲಿ ನಟಿ ಮಾಧ್ಯಮದವರ ಮುಂದೆ ರಾಹುಲ್ ಗಾಂಧಿ ಅವರಿಗೆ ಮದುವೆ ಆಫರ್ ನೀಡಿದ್ದಾರೆ. ರಾಹುಲ್ ಅವರನ್ನು ಮದುವೆ ಆಗುತ್ತೀರಾ ಎಂದು ಶೆರ್ಲಿನ್ ಅವರನ್ನು ಕೇಳಿದಾಗ ನಟಿ ಅಚ್ಚರಿಯ ಉತ್ತರ ನೀಡಿದ್ದಾರೆ. “ಹೌದು ರಾಹುಲ್ ಗಾಂಧಿ ಅವರನ್ನು ಮದುವೇಗುತ್ತೇನೆ. ಅವರನ್ನು ಏಕೆ ಮದುವೆಯಾಗಬಾರದು? ಅವರನ್ನು ಮದುವೆಯಾಗಲು ನಾನು ಒಪ್ಪಿಕೊಂಡಿದ್ದೇನೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಮದುವೆ ಆಗಲು ಷರತ್ತು ಹಾಕಿದ ನಟಿ
ರಾಹುಲ್ ಗಾಂಧಿ ಅವರನ್ನು ಮದುವೆ ಆಗಲು ನಟಿ ಒಂದು ಷರತ್ತನ್ನು ಹೇಳಿದ್ದಾರೆ. ನಾನು ಮದುವೆಯ ನಂತರ ನನ್ನ ಉಪನಾಮವನ್ನು ಚೋಪ್ರಾ ಎಂದು ಹೊಂದಲು ಇಷ್ಟಪಡುತ್ತೇನೆ” ಎಂದು ಹೇಳಿದ್ದಾರೆ. ಮದುವೆಯ ನಂತರ ತಾವು ತಮ್ಮ ಸರ್ನೇಮ್ ಅನ್ನು ಬದಲಿಸಿಕೊಳ್ಳುವುದಿಲ್ಲ ಎಂದು ನಟಿ ಹೇಳಿದ್ದಾರೆ.
ಇದೀಗ ಬಾಲಿವುಡ್ ನಟಿಯ ಈ ಹೇಳಿಕೆ ಬಾರಿ ವೈರಲ್ ಆಗುತ್ತಿದೆ. ಶೆರ್ಲಿನ್ ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ವೀಡಿಯೋಯಾದಲ್ಲಿ ನೆಗೆಟಿವ್ ಹಾಗೂ ಪಾಸಿಟಿವ್ ಪೋಸ್ಟ್ ಗಳು ಹೆಚ್ಚುತ್ತಿದೆ. ಕೆಲವರು ಶೆರ್ಲಿನ್ ಮಾತುಗಳಿಗೆ ಮೆಚ್ಚುಗೆ ಸೂಚಿಸಿದರೆ ಇನ್ನು ಕೆಲವರು ಟ್ರೊಲ್ ಮಾಡುತ್ತಿದ್ದಾರೆ.