Shiva Rajkumar: ಕೇಸ್ ಸೋತ ರಮ್ಯಾಗೆ ಮುಲಾಜಿಲ್ಲದೆ ಟಾಂಗ್ ಕೊಟ್ಟ ಶಿವಣ್ಣ, ರಮ್ಯಾ ಕಿವಿ ಹಿಂಡಿದ ಶಿವಣ್ಣ.
ಹಾಸ್ಟೆಲ್ ಹುಡುಗರು ಚಿತ್ರತಂಡದ ಮೇಲೆ ಕೇಸ್ ಹಾಕಿ ಸೋತ ರಮ್ಯಾ ಅವರಿಗೆ ನಟ ಶಿವ ರಾಜಕುಮಾರ್ ಅವರು ಕಿವಿಮಾತು ಹೇಳಿದ್ದಾರೆ.
Actor Shiva Rajkumar About Hostel Hudugaru Movie: ಹಾಸ್ಟೆಲ್ ಹುಡುಗರು ಸಿನಿಮಾ ಮೊನ್ನೆಯಷ್ಟೇ ರಿಲೀಸ್ ಆಗಿದೆ. ಈ ಸಿನಿಮಾ ರಿಲೀಸ್ ಆಗಿ ಜನರಿಗೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಸಿನಿಮಾ ರಿಲೀಸ್ ಆಗುವ ಮೊದಲೇ ಸಾಕಷ್ಟು ಸದ್ದು ಮಾಡುತ್ತಿತ್ತು. ನಟಿ ರಮ್ಯಾ (Ramya)ಈ ಸಿನಿಮಾದಲ್ಲಿ ಟೀಚರ್ ಆಗಿ ಕಾಣಿಸಿಕೊಂಡಿದ್ದರು.
ಇನ್ನು ನಟಿ ರಮ್ಯಾ ಅವರು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಮೇಲೆ ಕೇಸ್ ಹಾಕಿ ಸೋತ ಬೆನ್ನಲ್ಲೇ ಹಲವು ನಟಿ ನಟಿಯರು ಅದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಈಗ ನಟ ಶಿವ ರಾಜಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹಾಸ್ಟೆಲ್ ಹುಡುಗರು ಸಿನಿಮಾ
ಹಾಸ್ಟೆಲ್ ಹುಡುಗರು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ ನಟಿ ರಮ್ಯಾ ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ನೀಡಿದ್ದರು. ರಮ್ಯಾ ಬೋಲ್ಡ್ ಕಾಣಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಹಳ ಮೆಚ್ಚು ಗಳಿಸಿತ್ತು. ಆದರೆ ನಟಿ ರಮ್ಯಾ ತಮ್ಮ ಅನುಮತಿ ಇಲ್ಲದೆ ಹಾಡನ್ನು ಎಲ್ಲ ಕಡೆ ರಿಲೀಸ್ ಮಾಡಿದ್ದಾರೆ ಎಂದು ಹಾಸ್ಟೆಲ್ ಹುಡುಗರ ವಿರುದ್ಧ ಕೋರ್ಟ್ ಗೆ ಲೀಗಲ್ ನೋಟಿಸ್ ನೀಡಿದ್ದರ, ಆದರೆ ಇದೆಲ್ಲವನ್ನು ಮೀರಿ ಈ ಸಿನಿಮಾ ಮೊನ್ನೆ ರಿಲೀಸ್ ಆಗಿದೆ.
ಹಾಸ್ಟೆಲ್ ಹುಡುಗರು ಸಿನಿಮಾ ಬಗ್ಗೆ ಮಾತನಾಡಿದ ನಟ ಶಿವಣ್ಣ
ನಟಿ ರಮ್ಯಾ ಅವರ ನೋಟಿಸ್ ವಿಚಾರ ಸಾಕಷ್ಟು ಸುದ್ದಿ ಆಗುತ್ತಿದೆ. ಸ್ಟಾರ್ ನಟ ನಟಿಯರಿಗೆ ಈ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ನಟ ಶಿವಣ್ಣನಿಗೂ ಈ ಕುರಿತು ಪ್ರಶ್ನೆ ಕೇಳಲಾಗಿದೆ. ನಮ್ಮ ಸಿನಿಮಾರಂಗ ಬೆಳೆಯಬೇಕು. ಅವರನ್ನ ಬೆಳೆಸೋ ಕೆಲಸ ಆಗಬೇಕು. ಹಾಸ್ಟೆಲ್ ಹುಡುಗರು ಚಿತ್ರಕ್ಕೆ ಆರಂಭದಿಂದಲೂ ಒಳ್ಳೆ ಸಪೊರ್ಟ್ ಸಿಕ್ಕಿದೆ. ಆದರೆ ಕೊನೆಯಲ್ಲಿ ಏನ್ ಆಗಿದಿಯೋ ಏನೋ. ಅದು ನನಗೆ ಗೊತ್ತಿಲ್ಲ ಎಂದು ಶಿವಣ್ಣ ಹೇಳಿದ್ದಾರೆ.
ಒಂದು ಮಾತು ಸತ್ಯ, ಎಲ್ಲಿ ಸತ್ಯ ಇರುತ್ತದೆಯೋ ಅಲ್ಲಿ ಜಯ ಇದ್ದೇ ಇರುತ್ತದೆ ಎಂದು ಓಪನ್ ಆಗಿಯೇ ಹೇಳಿದ್ದಾರೆ. ಹಾಸ್ಟೆಲ್ ಹುಡುಗರು ಸಿನಿಮಾಕ್ಕೂ ಜಯ ಸಿಕ್ಕಿದೆ. ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ನಾನು ಮೊದಲ ದಿನವೇ ಚಿತ್ರ ನೋಡಬೇಕಿತ್ತು. ಜಾಹೀರಾತು ಶೂಟಿಂಗ್ ಇದ್ದ ಕಾರಣ ಆಗಲಿಲ್ಲ. ಆದರೆ ಗೀತಾ ಮತ್ತು ನಿವೇದಿತಾ ಸಿನಿಮಾ ನೋಡಿದ್ದಾರೆ ಮತ್ತು ತುಂಬಾನೆ ಇಷ್ಟ ಪಟ್ಟಿದ್ದಾರೆ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.
ಶಿವಣ್ಣನ ಮಾತು ಕೇಳಿ ಫಿದಾ ಆದ ಹಾಸ್ಟೆಲ್ ಹುಡುಗರು
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಒಳ್ಳೆದಾಗಲಿ ಅಂತ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಹಾರೈಸಿದ್ದಾರೆ. ಶಿವಣ್ಣನ ಸ್ಪೂರ್ತಿದಾಯಕ ಮಾತುಗಳನ್ನು ಕೇಳಿದ ಹುಡುಗರು ಫುಲ್ ಖುಷಿ ಆಗಿದ್ದಾರೆ.