Shiva Rajkumar: ಇಂಡಿಯಾ ಪಾಕಿಸ್ತಾನ ಪಂದ್ಯದಲ್ಲಿ ನಿಜವಾಯಿತು ಶಿವ ರಾಜಕುಮಾರ್ ನುಡಿದ ಭವಿಷ್ಯ.

ಭಾರತ ಪಾಕಿಸ್ತಾನ ಪಂದ್ಯದ ವೀಕ್ಷಕ ವಿವರಣೆ ನೀಡಿದ ಸ್ಯಾಂಡಲ್​ವುಡ್ ನಟ ಶಿವರಾಜ್​ಕುಮಾರ್.

Actor Shiva Rajkumar ICC World Cup Commentary: 2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್(World Cup) ಈಗಾಗಲೇ ಆರಂಭವಾಗಿದೆ. ಕ್ರಿಕೆಟ್‌ನಲ್ಲಿ ಭಾರತ ಪಾಕಿಸ್ತಾನ ಪಂದ್ಯ ಯಾವಾಗಲೂ ರೋಮಾಂಚನಕಾರಿಯಾಗಿರುತ್ತೆ. ಭಾರತದ ಅಭಿಮಾನಿಗಳು ಕೊನೆಯ ಕ್ಷಣದವರೆಗೂ ಇಡೀ ಪಂದ್ಯವನ್ನು ವೀಕ್ಷಿಸುತ್ತಾರೆ.

ನಿನ್ನೆ ಅಹಮದಾಬಾದ್ ನಲ್ಲಿ ನೆಡೆದ ಭಾರತ ಹಾಗೂ ಪಾಕಿಸ್ತಾನ ಪಂದ್ಯದಲ್ಲಿ ಭಾರತ ಪಾಕಿಸ್ತಾನ ವಿರುದ್ಧ 7 ವಿಕೆಟ್ ನಿಂದ ಜಯಗಳಿಸಿಕೊಂಡಿದೆ. ಈ ಪಂದ್ಯವನ್ನು ವೀಕ್ಷಣೆ ಮಾಡಲು ಸ್ಯಾಂಡಲ್​ವುಡ್ ನಟ ಶಿವರಾಜ್​ಕುಮಾರ್ ಆಗಮಿಸಿದ್ದರು.

Actor Shiva Rajkumar ICC World Cup Commentary
Image Credit: News 18

ವೀಕ್ಷಕ ವಿವರಣೆ ನೀಡಿದ ಸ್ಯಾಂಡಲ್​ವುಡ್ ನಟ ಶಿವರಾಜ್​ಕುಮಾರ್
ಭಾರತ ಹಾಗೂ ಪಾಕಿಸ್ತಾನ ಪಾಕಿಸ್ತಾನ ಪಂದ್ಯ ಅಂದರೆ ಎಲ್ಲರಲ್ಲೂ ಒಂದು ಫೀಲಿಂಗ್ ಇರುತ್ತದೆ. ICC ಏಕದಿನ ವಿಶ್ವಕಪ್​ ಟೂರ್ನಿಯ ಭಾಗವಾಗಿ ಅಹಮದಾಬಾದ್​ನಲ್ಲಿ ನೆಡೆದ ಪಾಕ್​ ಮತ್ತು ಇಂಡೋ ನಡುವಿನ ಪಂದ್ಯದ ವಿವರಣೆ ಮಾಡಿದ್ದರು. ಇಂತಹ ಪಂದ್ಯದಲ್ಲಿ ನಟ ಶಿವರಾಜ್​ಕುಮಾರ್ ವೀಕ್ಷಕ ವಿವರಣೆ ನೀಡಿರುವುದು ಪಂದ್ಯದ ವೀಕ್ಷಣೆಯನ್ನ ​ಅನ್ನು ಮತ್ತಷ್ಟು ಹೆಚ್ಚಿಸಿದೆ. ಮುಂಬೈ ನಲ್ಲಿ ಇರುವ ಶಿವರಾಜ್​ಕುಮಾರ್ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ ಗೆ ಹೋಗಿ ಪಂದ್ಯ ವೀಕ್ಷಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸ್ಯಾಂಡಲ್​ವುಡ್ ನಟನಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು.

ಇಂಡಿಯಾ ಪಾಕಿಸ್ತಾನ ಪಂದ್ಯದಲ್ಲಿ ನಿಜವಾಯಿತು ಶಿವ ರಾಜಕುಮಾರ್ ನುಡಿದ ಭವಿಷ್ಯ
ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುತ್ತಾ ಪಾಕ್​ ಬ್ಯಾಟಿಂಗ್ ವೇಳೆ ಬ್ಯಾಟರ್​​ಗಳು ಎಷ್ಟು ರನ್​ ಗಳಿಸಬಹುದು ಎಂಬ ಪ್ರಶ್ನೆ ಶಿವರಾಜ್​ ಕುಮಾರ್ ಅವರಿಗೆ ಕೇಳಲಾಗಿತ್ತು. ಈ ವೇಳೆ ಪಾಕ್ ಇನ್ನಿಂಗ್ಸ್ ಸ್ಕೋರ್ ಬಗ್ಗೆ ಶಿವಣ್ಣ ಭವಿಷ್ಯ ನುಡಿದಿದ್ದಾರೆ. ಪಾಕಿಸ್ತಾನ 225 ರನ್ ಗಳಿಸಿದರೆ ಒಳ್ಳೆಯದು, ಇಲ್ಲ ಬ್ಯಾಟರ್​ ಉತ್ತಮ ಪ್ರದರ್ಶನ ನೀಡಿದರೂ 275 ರನ್ ಗಳಿಸಲಷ್ಟೇ ಸಾಧ್ಯ ಎಂದಿದ್ದಾರೆ. ವಿಶೇಷವೆಂದರೆ ಟೀಂ ಇಂಡಿಯಾ ಬೌಲರ್​ ಪಾಕ್ ಬ್ಯಾಟರ್​ಗಳ ಮೇಲೆ ಸವಾರಿ ಮಾಡಿ ಎದುರಾಳಿ ತಂಡವನ್ನು 42.5 ಓವರ್‌ಗೆ 191 ರನ್‌ಗೆ ಆಲೌಟ್‌ ಮಾಡಿದ್ದಾರೆ.

Shiva Rajkumar meets Salman Khan in Mumbai
Image Credit: Pinkvilla

ಶಿವರಾಜ್ ಕುಮಾರ್ ಅವರು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗೆ ಬಂದ ಒಂದಷ್ಟು ಫೋಟೋಗಳನ್ನ ತೆಗೆದಿದ್ದಾರೆ. ಕ್ರಿಕೆಟರ್ ಅನಿಲ್ ಕುಂಬ್ಳೆ ಸೇರಿದಂತೆ ಹಿರಿಯ ಮಾಜಿ ಕ್ರಿಕೆಟ್ ಆಟಗಾರರು ಈ ವೇಳೆ Shiva Rajkumar ಜೊತೆಗೆ ಫೋಟೋ ತೆಗೆದುಕೊಂಡು ಖುಷಿಪಟ್ಟಿದ್ದಾರೆ. ಶಿವರಾಜ್ ಕುಮಾರ್ ಬಾಲಿವುಡ್ ಸಲ್ಮಾನ್ ಖಾನ್ ಅವರನ್ನ ಭೇಟಿ ಆಗಿದ್ದಾರೆ. ಈ ಮೂಲಕ ಟೈಗರ್ ಮೀಟ್ಸ್ ಘೋಸ್ಟ್ ಅನ್ನುವ ಫೀಲ್ ಕೂಡ ಎಲ್ಲರಿಗೂ ಬಂದಿದೆ. ಶಿವಣ್ಣನ ಫ್ಯಾನ್ಸ್ ಕೂಡ ಇದನ್ನ ಕಂಡು ಖುಷಿಪಟ್ಟದ್ದಾರೆ.

Join Nadunudi News WhatsApp Group

Join Nadunudi News WhatsApp Group