Shivarajkumar And Punneth Rajkumar: ಅಪ್ಪು ಸ್ಥಾನವನ್ನು ಯಾರು ತುಂಬುತ್ತಾರೆ ಅನ್ನುವುದಕ್ಕೆ ಉತ್ತರ ಕೊಟ್ಟ ಶಿವಣ್ಣ.

Shivarajkumar And Punneth Rajkumar: ಡಾ ರಾಜಕುಮಾರ್ ಅವರ ಕುಟುಂಬದವರು ಚಿತ್ರರಂಗಕ್ಕೆ ಸಾಕಷ್ಟು ಹೆಸರನ್ನು ತಂದುಕೊಟ್ಟವರು. ರಾಜ್ ಕುಟುಂಬದ ಎಲ್ಲ ನಟರು ಕೂಡ ಚಿತ್ರರಂಗದಲ್ಲಿ ವಿಶೇಷವಾಗಿ ಸಾಧನೆ ಮಾಡಿದ್ದಾರೆ.

ಶಿವರಾಜ್ ಕುಮಾರ್ (Shivarj kumar), ಪುನೀತ್ ರಾಜ್ ಕುಮಾರ್ (Punith Rajkumar), ರಾಘವೇಂದ್ರ ರಾಜ್ ಕುಮಾರ್ (Raghavendra Rajkumar)  ಅವರು ಕನ್ನಡ ಚಿತ್ರರಂಗದಲ್ಲಿ ಮಾಡಿದ ಎಲ್ಲ ಚಿತ್ರಗಳು ಕೂಡ ಸೂಪರ್ ಹಿಟ್ ಆಗಿವೆ.

Shiva Rajkumar said who will fill Puneeth Rajkumar's place
Image Credit: eastmojo

ಆದರೆ ಚಿತ್ರರಂಗದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣದಿಂದಾಗಿ ಅಪ್ಪು ಅಭಿಮಾನಿಗಳು ಬೇಸರಗೊಂಡಿದ್ದಾರೆ.

ರಾಜ್ ಕುಟುಂಬದಲ್ಲಿ ಅಪ್ಪು ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂದು ಅನೇಕರು ತಮ್ಮಲ್ಲಿಯೇ ಪ್ರಶ್ನೆ ಕೇಳಿಕೊಂಡಿದ್ದಾರೆ.

ಹಾಗೆಯೆ ಅಪ್ಪು ರೀತೀಯೇ ಡಾನ್ಸ್ ಮಾಡುವ, ಸ್ಟಂಟ್ ಮಾಡುವ ಕಲೆಯನ್ನು ಈಗಾಗಲೇ ಕಲಿತುಕೊಂಡಿರುವ ಯುವ ರಾಜ್ ಕುಮಾರ್ ಅವರ ಮೇಲೆ ರಾಜ್ ವಂಶದ ಅಭಿಮಾನಿಗಳಿಗೆ ಅಪಾರವಾದ ನಂಬಿಕೆ ಇದೆ. ಇನ್ನು ವಿಚಾರದ ಬಗ್ಗೆ ಶಿವರಾಜ್ ಕುಮಾರ್ ಅವರು ಉತ್ತರ ನೀಡಿದ್ದಾರೆ.

Join Nadunudi News WhatsApp Group

Shiva Rajkumar told who will fill the position of father in the house
Image Credit: timesofindia.indiatimes

ಶಿವರಾಜ್ ಕುಮಾರ್ ನೀಡಿದ ಉತ್ತರ
ಯುವರಾಜ್ ಕುಮಾರ್ ಅಪ್ಪು ಅವರ ಸ್ಥಾನ ತುಂಬಬಲ್ಲನೆ ಎನ್ನುವ ಅನೇಕರ ಪ್ರಶ್ನೆಗಳಿಗೆ ಶಿವರಾಜ್ ಕುಮಾರ್ ಉತ್ತರ ನೀಡಿದ್ದಾರೆ. ” ಯುವರಾಜ್ ಕುಮಾರ್ ಮಾತ್ರ ವಲ್ಲ, ಅವನ ಅಣ್ಣ ವಿನಯ್ ರಾಜ್ ಕುಮಾರ್ ಇದ್ದಾನೆ, ಪೂರ್ಣಿಮಾ ಮಗ ಧೀರೇನ್ ಇದ್ದಾನೆ, ಮಗಳು ಧನ್ಯ ಇದ್ದಾಳೆ, ಎಲ್ಲರು ನಮ್ಮ ಮಕ್ಕಳೇ. ಎಲ್ಲರು ರಾಜ್ ಕುಟುಂಬದ ಕುಡಿಗಳೇ. ಯಾರು ಬೆಳೆದರು ಖುಷಿನೇ” ಎಂದು ಹೇಳಿಕೆ ನೀಡಿದ್ದಾರೆ.

Shiva Rajkumar spoke about the children of the Raj family
Image Credit: ottplay

ಅಪ್ಪು ಸ್ಥಾನ ಅಪ್ಪುವಿಗೆ
ಮಾತನ್ನು ಮುಂದುವರೆಸುತ್ತ ಶಿವಣ್ಣ, ಯಾರು ಸಹ ಯಾರ ಸ್ಥಾನವನ್ನು ತುಂಬುವ ಅವಶ್ಯಕತೆ ಇಲ್ಲ. ಇವರು ವಿನಯತೆಯಿಂದ ವಿಧೇಯರಾಗಿ ನಡೆದುಕೊಂಡು ಹೋಗಿಬಿಟ್ರೆ ಸಾಕು, ಅಪ್ಪು ಸ್ಥಾನ ಅಪ್ಪುಗೆ, ರಾಜ್ ಸ್ಥಾನ ರಾಜಕುಮಾರ್ ಅವರಿಗೆ ಎಂದರು. ಹಾಗೂ ಇಲ್ಲಿ ಸ್ಥಾನ ತುಂಬಲು ಇದು ಕಿಂಗ್ ಡಮ್ ಅಲ್ಲ, ಇಡೀ ಚಿತ್ರ ರಂಗ ಒಂದು ಕುಟುಂಬ ಇಲ್ಲಿ ಯಾರು ಬೇಕಾದ್ರು ಸ್ಟಾರ್ ಆಗಬಹುದು ಎಂದು ಸ್ವತಃ ಅಪ್ಪಾಜಿಯವರೇ ಹೇಳುತ್ತಿದ್ದರು ಎಂದು ಹೇಳಿದ್ದಾರೆ.

Shiva Rajkumar said that there is no need for Appu Sthanavana
Image Credit: twitter

ಇನ್ನು ಕನ್ನಡ ಚಿತ್ರರಂಗವೆಂದರೆ ರಾಜ್ ಕುಟುಂಬ ಮಾತ್ರ ವಲ್ಲ ಎಲ್ಲ ಸ್ಟಾರ್ ನಟರು ಇದ್ದಾರೆ ಎಂದು ಹೇಳಿದ್ದಾರೆ. ದರ್ಶನ್, ಸುದೀಪ್, ಉಪೇಂದ್ರ, ರಿಷಬ್ , ಗಣೇಶ್, ದ್ರುವ ಸರ್ಜಾ ಎಲ್ಲರು ಇದ್ದಾರೆ ನಾವೆಲ್ಲ ಒಂದೇ ಫ್ಯಾಮಿಲಿ. ಇಲ್ಲಿಗೆ ಹೊಸಬರು ಬರ್ತಾರೆ ಅವರಿಗೆಲ್ಲ ನಾನು ಒಳ್ಳೆಯ ರೀತಿಯಲ್ಲಿ ನಡೆದುಕೊಂಡು ಬೆಳೆಯಿರಿ ಎಂದು ಹೇಳಲು ಇಚ್ಛಿಸುತ್ತೇನೆ ಎಂದು ಶಿಯನ್ನ ಹೇಳಿದ್ದಾರೆ.

Join Nadunudi News WhatsApp Group