Shiva Rajkumar Cry: ತೆಲುಗಿನ ವೇದ ಸಿನಿಮಾ ರಿಲೀಸ್ ಕಾರ್ಯಕ್ರಮದಲ್ಲಿ ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ.

Kannada Vedha Movie Release In Telugu: ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ (Shivraj Kumar) ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸುವುದರ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಇತ್ತೀಚಿಗೆ ನಟ ಶಿವಣ್ಣ ಅವರ ವೇದ (Vedha) ಸಿನಿಮಾ ತೆರೆ ಕಂಡಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

Shiva Rajkumar was in tears remembering Appu at the Telugu Vedic movie release event
Image Credit: instagram

ತೆಲುಗಿನಲ್ಲಿ ವೇದ ಸಿನಿಮಾ ರಿಲೀಸ್
ಶಿವರಾಜ್‌ಕುಮಾರ್ ನಟನೆಯ ವೇದ ಸಿನಿಮಾ ಸ್ಯಾಂಡಲ್‌ವುಡ್‌ ನಲ್ಲಿ ಸೂಪರ್ ಹಿಟ್ ಆಗಿದೆ. ಈ ಬೆನ್ನಲ್ಲೇ ಟಾಲಿವುಡ್ ಅಂಗಳದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

ಆಂಧ್ರ ಪ್ರದೇಶದಲ್ಲಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನಡೆದಿದೆ. ಇವೆಂಟ್‌ಗೆ ಮುಖ್ಯ ಅತಿಥಿಯಾಗಿ ಬಾಲಯ್ಯ (Balayya) ಅವರು ಸಾಥ್ ನೀಡಿದ್ದಾರೆ.

Kannada Vedha movie release in Telugu
Image Credit: instagram

ಈ ವೇಳೆ ಅಪ್ಪು ಅವರನ್ನ ನೆನೆದು ಶಿವಣ್ಣ ಬಾಲಯ್ಯ ಭಾವುಕರಾಗಿದ್ದಾರೆ. ನಟ ದಿವಂಗತ ಪುನೀತ್ ರಾಜಕುಮಾರ್ ನಿಧನರಾಗಿ ಒಂದೂವರೆ ವರ್ಷವಾದರೂ ಕರುನಾಡಿನ ಜನರು ಅವರ ನೆನಪಿನಲ್ಲಿಯೇ ಇದ್ದಾರೆ.

Join Nadunudi News WhatsApp Group

ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ
ತೆಲುಗಿನಲ್ಲಿ ವೇದ ಸಿನಿಮಾ ಅಬ್ಬರಿಸಲು ರೆಡಿಯಾಗಿದೆ. ನಾಳೆ ವೇದ ಸಿನಿಮಾ ತೆಲುಗಿನಲ್ಲಿ ಅಬ್ಬರಿಸಲಿದೆ. ಈ ವೇಳೆ ವೇದ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಅಪ್ಪು ಕುರಿತು ವಿಡಿಯೋ ಒಂದನ್ನು ತೋರಿಸಲಾಗಿದೆ. ಈ ವೇಳೆ ಶಿವಣ್ಣ ಅಪ್ಪು ನೆನೆದು ಕಣ್ಣೀರಿಟ್ಟಿದ್ದಾರೆ.

Shiva Rajkumar's Vedha movie released in Telugu language
Image Credit: instagram

ಅಪ್ಪು ನೋಡಿ ಕೆಲವೊಮ್ಮೆ ಅಳಬಾರದು ಅಂದುಕೊಳ್ಳುತ್ತೇವೆ. ಆ ಮಗು ಮುಖ ನೋಡಿದರೆ ಎಂತಹವರಿಗೂ ಕಣ್ಣಲ್ಲಿ ನೀರು ಬರುತ್ತದೆ.

ಅಪ್ಪುಗಿಂತ ನಾನು 13 ವರ್ಷ ದೊಡ್ಡವನು. ಅಪ್ಪು ಅವರದ್ದು ಮಗುವಿನಂತಹ ಮನಸ್ಸು. ಅವನು ಸದಾ ನಮ್ಮೊಂದಿಗೆ ಇದ್ದಾನೆ. ಅವನನ್ನು ಸದಾ ಸೆಲೆಬ್ರೇಟ್ ಮಾಡೋಣ. ನಮ್ಮ ಹೃದಯದಲ್ಲಿ ಸದಾ ಶಾಶ್ವತವಾಗಿ ಇರುತ್ತಾನೆ ಎಂದು ಶಿವಣ್ಣ ಭಾವುಕರಾಗಿದ್ದಾರೆ.

Join Nadunudi News WhatsApp Group