60ರ ವಯಸ್ಸಿನಲ್ಲೂ ಕಾರಿನ ಮೇಲೆ ಹಾರಿ ಕುಳಿತ ಶಿವಣ್ಣ, ವಿಡಿಯೋ ವೈರಲ್

ದೊಡ್ಮನೆಯ ಕುಡಿ ಕರುನಾಡ ಚಕ್ರವರ್ತಿ ಸೆಂಚುರಿ ಸ್ಟಾರ್ ಹ್ಯಾಟ್ರಿಕ್ ಹೀರೊ ಅಭಿಮಾನಿಗಳ ಪ್ರೀತಿಯಾ ಶಿವಣ್ಣ ಹೀಗೆ ಇವರಿಗೆ ಇರುಬ ಹೆಸರು ಒಂದಾ ಎರಡಾ? ನಾವೆಲ್ಲ ಚಿಕ್ಕ ವಯಸ್ಸಿದಾಗಲೂ   ಇವರು ಹೀರೋ ಈಗಲೂ ಕೂಡ ಇವರೇ ಹೀರೋ. ನಮ್ಮ ಶಿವರಾಜ್​ ಕುಮಾರ್​ ರವರು ಎಲ್ಲಿರುತ್ತಾರೋ ಅಲ್ಲಿ ಜೋಶ್ ಇರುತ್ತೆ ಎಂಬ ಮಾತಿದೆ.

ಶಿವಣ್ಣ ಅಂದರೆನೇ ಒಂದು ಎನರ್ಜಿ . ಹೌದು ಸದಾ ಲವಲವಿಕೆಯಿಂದ ಇರುತ್ತಾರೆ ನಮ್ಮ ಸ್ಯಾಂಡಲ್​ವುಡ್ ಕಿಂಗ್​ ಶಿವಣ್ಣ. ಇನ್ನು ಇತ್ತೀಚೆಗಷ್ಟೇ ಶಿವಣ್ಣ 60ನೇ ವಸಂತಕ್ಕೆ ಕಾಲಿಟ್ಟಿದ್ದು ಆದರೂ ಚಿರಯುವಕನಂತೆ ಕಾಣುತ್ತಾರೆ. ಯುವಕರನ್ನೇ ನಾಚಿಸುವಂತೆ ಮಾಡುತ್ತಾರೆ ಡಾ.ಶಿವರಾಜ್​ಕುಮಾರ್​. ಶಿವಣ್ಣ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ನೋಡೋಣ? ಎಲ್ಲರಿಗೂ ಇವರನ್ನು ಕಂಡರೆ ಬಹಳಾನೇ ಅಚ್ಚು ಮೆಚ್ಚು.shivanna kannada jumping car

ಬರೋಬ್ವರಿ ಮೂರು ದಶಕಗಳಿಂದ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸಂಚೂರಿ ಸ್ಟಾರ್​ ಆಗಿರುವ ನಮ್ಮ ಶಿವಣ್ಣ ಇಂದಿಗೂ ಯುವಕರಂತೆ ಹೆಜ್ಜೆ ಹಾಕುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸುತ್ತಾರೆ. ಹೌದು ತಮ್ಮದೇ ಆದ ವಿಭಿನ್ನ ನಟನೆ ಹಾಗೂ ಡ್ಯಾನ್ಸ್ ಮೂಲಕ ಶಿವರಾಜ್​ಕುಮಾರ್ ಕನ್ನಡ ಸಿನಿಪ್ರೇಮಿಗಳ ಮನೆ ಮಾತಾಗಿದ್ದು ಸದ್ಯ ಇದೀಗ ಶಿವಣ್ಣ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು 60ರಲ್ಲೂ ಕೂಡ ಟಗರಿನಂತೆ ಕಾರಿನ ಮೇಲೆ ಎಗರಿ ಕೂತಿದ್ದಾರೆ ಶಿವಣ್ಣ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. 1961 ಜುಲೈ 12 ರಂದು ಮದ್ರಾಸಿನ ಕಲ್ಯಾಣಿ ಆಸ್ಪತ್ರೆಯಲ್ಲಿ ಸಂಜೆ 6 ಘಂಟೆಗೆ ವರನಟ ಡಾ. ರಾಜ್​ಕುಮಾರ್ ಹಾಗೂ ಪಾರ್ವತಮ್ಮ ರಾಜ್​ಕುಮಾರ್ ಅವರ ಹಿರಿಯ ಪುತ್ರನಾಗಿ ಶಿವರಾಜ್​ಕುಮಾರ್ ಜನಿಸಿದ್ದು ಅಂದಿನಿಂದ ಇಂದಿನವರೆಗೂ ಒಂದೇ ಎನರ್ಜಿ ಇಟ್ಟುಕೊಂಡು ಬಂದಿದ್ದಾರೆ ನಮ್ಮ ಶಿವಣ್ಣ. ಸದ್ಯ ಇದೀಗ ಈ ವಿಡಿಯೋದಲ್ಲೂ ಸಿಕ್ಕಾಪಟ್ಟೆ ಎನರ್ಜಿಯಿಂದ ಕಾರಿನ ಮೇಲೆ ಶಿವಣ್ಣ ಎಗರುವುದನ್ನು ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.

ಸದ್ಯ ಎಲ್ಲರ ವಾಟ್ಸ್​​ಆಯಪ್​ ಸ್ಟೇಟಸ್​​ನಲ್ಲೂ ಈ ವಿಡಿಯೋ ರಾರಾಜಿಸುತ್ತಿದ್ದು ಈ ವಿಡಿಯೋಗೆ ಅಭಿಮಾನಿಗಳು ನಾನಾ ರೀತಿಯ ಕಮೆಂಟ್​ ಗಳು ಕೂಡ ಮಾಡುತ್ತಿದ್ದಾರೆ. ಇನ್ನೂ ಶಿವಣ್ಣ ಸುಮ್ನೆ ವಯಸ್ಸು ನಂಬರಿಗಾಗಿ ಹೆಚ್ಚುತ್ತಿದೆ. ನೀವು ದಿನೇ ದಿನೇ ಚಿರಯುವಕರಾಗುತ್ತಿದ್ದೀರಾ ಎಂದು ಅಭಿಮಾನಿಗಳು ಕಾಮೆಂಟ್​ ಮಾಡುತ್ತಿದ್ದಾರೆ.

Join Nadunudi News WhatsApp Group

ಇನ್ನುಶಿವರಾಜ್​ಕುಮಾರ್ ಅವರ ಬಾಲ್ಯದ ಹೆಸರು ನಾಗರಾಜು ಶಿವಪುಟ್ಟಸ್ವಾಮಿ ಎಂದಾಗಿತ್ತು. ಆದರೆ ನಂತರದ ದಿನಗಳಲ್ಲಿ ಅವರು ಶಿವರಾಜ್​ಕುಮಾರ್ ಆಗಿ ಹೆಸರನ್ನು ಬದಲಿಸಿಕೊಂಡಿದ್ದರು.ಚೈನ್ನೈನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಶಿವಣ್ಣ ನಂತರ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರದಲ್ಲಿ ಬಿ.ಎಸ್ಸಿ ಪದವಿಯನ್ನು ಪಡೆದಿದ್ದು ಶಿವರಾಜ್​ಕುಮಾರ್ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಪುತ್ರಿ ಗೀತಾ ಅವರನ್ನು 1986ರಲ್ಲಿ ವಿವಾಹವಾದರು.

ಇನ್ನು 1986ರಲ್ಲಿ ಶ್ರೀನಿವಾಸ ರಾವ್ ನಿರ್ದೇಶನದ ಆನಂದ ಚಿತ್ರದ ಮೂಲಕ ಶಿವರಾಜ್​ಕುಮಾರ್ ಅವರು ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ್ದು ಶಿವರಾಜ್​ಕುಮಾರ್ ಅವರ ಮೊದಲ ಚಿತ್ರವ ಆನಂದ್​ ಬರೋಬ್ಬರಿ 250 ದಿನ ಪೂರೈಸಿತು. ಇದಾದ ಬಳಿಕ ತೆರೆಕಂಡ ರಥ ಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ ಸಿನಿಮಾಗಳೂ ಸಹ ಶತದಿನೋತ್ಸವ ಆಚರಿಸಿದವು. ಹೀಗಾಗಿ ಮೊದಲ 3 ಚಿತ್ರಗಳೇ 100 ದಿನ ಪೂರೈಸಿದ ಹಿನ್ನಲೆ ಅವರಿಗೆ ಹ್ಯಾಟ್ರಿಕ್ ಹೀರೋ ಎಂಬ ಬಿರುದು ಬಂದಿತು.

Join Nadunudi News WhatsApp Group