Scooter Showroom: ಒಂದು ಸ್ಕೂಟರ್ ಮೇಲೆ ಶೋ ರೂಮ್ ಮಾಲೀಕರಿಗೆ ಎಷ್ಟು ಲಾಭ ಸಿಗುತ್ತದೆ, ಫುಲ್ ಪ್ರಾಫಿಟ್ ಗುರು.
ಶೋ ರೂಮ್ ಮಾಲೀಕರು ಸ್ಕೂಟಿ ಖರೀದಿಯ ಮೇಲೆ ಎಷ್ಟು ಲಾಭ ಪಡೆಯುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ.
Showroom Owner Commission: ದೇಶಿಯ ಮಾರುಕಟ್ಟೆಯಲ್ಲಿ ಆಟೋಮೊಬೈಲ್ ಕಂಪನಿಗಳು ವಿವಿಧ ಮಾದರಿಯ ಸ್ಕೂಟರ್, ಬೈಕ್ ಗಳನ್ನೂ ಬಿಡುಗಡೆ ಮಾಡುತ್ತವೆ. ಇನ್ನು ಯುವಕರು ಸಾಮಾನ್ಯವಾಗಿ ಬೈಕ್ ಗಳನ್ನೂ ಇಷ್ಟಪಡುತ್ತಾರೆ.
ಅದೇ ಹುಡುಗಿಯರು ಹೆಚ್ಚಾಗಿ ಸ್ಕೂಟಿ ಮೇಲೆ ಹೆಚ್ಚಿನ ಒಲವು ತೋರಿಸುತ್ತಾರೆ. ಬೈಕ್ ಸವಾರಿ ಅನೇಕರಿಗೆ ಕಷ್ಟ ಆಗುತ್ತದೆ. ಆದರೆ ಸ್ಕೂಟಿ ಮಹಿಳೆಯರಿಂದ ಹಿಡಿದು ಎಲ್ಲ ವಯಸ್ಸಿನವರು ಆರಾಮದಾಯಕವಾಗಿ ಸವಾರಿ ಮಾಡಬಹುದು.
ಶೋ ರೂಮ್ ನಲ್ಲಿ ಸ್ಕೂಟಿ ಖರೀದಿ
ಮಾರುಕಟ್ಟೆಯಲ್ಲಿ ಇತ್ತೀಚಿಗೆ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ವಿಭಿನ್ನ ಮಾದರಿಯ ಹೊಸ ಹೊಸ ರೂಪಾಂತರದ ಬೈಕ್, ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುತ್ತಿವೆ.ಇನ್ನು ಮಾರುಕಟ್ಟೆಯಲ್ಲಿ ಬೈಕ್ ಗಳ ಮೇಲಿರುವ ಬೇಡಿಕೆಯಷ್ಟೇ ಸ್ಕೂಟಿ ಕೂಡ ಹೆಚ್ಚಿನ ಸೆಲೆ ಕಾಣುತ್ತದೆ. ಇನ್ನು ಸ್ಕೂಟಿಗಳಲ್ಲಿ ವಿವಿಧ ಕಂಪನಿಗಳು ಎಲೆಕ್ಟ್ರಿಕ್ ರೂಪಾಂತರವನ್ನು ಕೂಡ ಬಿಡುಗಡೆ ಮಾಡಿವೆ.
ಸಾಮಾನ್ಯವಾಗಿ ಸ್ಕೂಟಿಗಳನ್ನು ಶೋ ರೂಮ್ ನಿಂದ ಖರೀದಿಸಲಾಗುತ್ತದೆ. ಕಂಪನಿಗಳು ಶೋ ರೂಮ್ ನಲ್ಲಿ ಸ್ಕೂಟಿಗಳನ್ನು ಮಾರಾಟಕ್ಕಿಡುತ್ತವೆ. ಇನ್ನು ಶೋ ರೂಮ್ ನಿಂದ ಸ್ಕೂಟಿ ಖರೀದಿ ಮಾಡಿದರೆ ಶೋ ರೂಮ್ ಮಾಲೀಕರಿಗೆ ಎಷ್ಟು ಲಾಭ ಸಿಗಬಹುದು ಎನ್ನುವ ಬಗ್ಗೆ ಎಲ್ಲರೂ ಯೋಚಿಸಿರುತ್ತಾರೆ. ಇದೀಗ ಶೋ ರೂಮ್ ಮಾಲೀಕರು ಸ್ಕೂಟಿ ಖರೀದಿಯ ಮೇಲೆ ಎಷ್ಟು ಲಾಭ ಪಡೆಯುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಒಂದು ಸ್ಕೂಟರ್ ಮೇಲೆ ಶೋ ರೂಮ್ ಮಾಲೀಕರಿಗೆ ಎಷ್ಟು ಲಾಭ ಸಿಗುತ್ತದೆ
ಇನ್ನು ಯಾವುದೇ ವ್ಯವಹಾರವನ್ನು ಮಾಡುವ ಮುನ್ನ ಎಲ್ಲರು ಮೊದಲಿಗೆ ಅದರಿಂದ ಬರುವ ಲಾಭದ ಬಗ್ಗೆ ಲೆಕ್ಕ ಹಾಕುತ್ತಾರೆ. ಲಾಭ ಇಲ್ಲದೆ ಯಾವುದೇ ವ್ಯವಹಾರವನ್ನು ಮಾಡಲು ಯಾರು ಕೂಡ ಇಷ್ಟಪಡುವುದಿಲ್ಲ. ಇನ್ನು ಒಂದೊಂದು ವ್ಯವಹಾರಕ್ಕೆ ಒಂದೊಂದು ರೀತಿಯ ಲಾಭ ದೊರೆಯುತ್ತದೆ. ಎಲ್ಲ ವ್ಯವಹಾರದ ರೀತಿ ಸ್ಕೂಟಿ ಶೋ ರೂಮ್ ಮಾಲೀಕರು ಕೊಡ ಲಾಭವನ್ನು ಪಡೆಯುತ್ತಾರೆ.
ಶೋ ರೂಮ್ ಕಮಿಷನ್ ಅನೇಕ ವಿಷಯಗಳ ಮೇಲೆ ಆಧಾರಿತವಾಗಿರುತ್ತದೆ. ವಿವಿಧ ಕಂಪನಿಗಳಲ್ಲಿ ವಿವಿಧ ರೀತಿಯಲ್ಲಿ ಲಾಭ ಪಡೆಯಬಹುದು. ಶೋ ರೂಮ್ ಎಲ್ಲಿದೆ, ವಾಹನ ಖರೀದಿ, ವಾಹನದ ಮಾದರಿ ಇವೆಲ್ಲದರ ಮೇಲೆ ಶೋ ರೂಮ್ ಮಾಲೀಕರ ಲಾಭ ಅವಲಂಬಿಸಿರುತ್ತದೆ.
ಇನ್ನು ವರದಿಗಳ ಮೂಲಕ ತಿಳಿದುಬಂದ ಮಾಹಿತಿಯ ಪ್ರಕಾರ ಸ್ಕೂಟಿ ವಿತರಕರು ಪ್ರತಿ ಸ್ಕೂಟಿಯ ಮೇಲೆ 3 ಪ್ರತಿಶತದಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ. ಸ್ಕೂಟಿಯ ದರವು 1 ಲಕ್ಷಕ್ಕಿಂತ ಹೆಚ್ಚಿದ್ದರೆ ಪ್ರತಿಶತ 6 ರಷ್ಟು ಕಮಿಷನ್ ಅನ್ನು ಪಡೆಯುತ್ತಾರೆ.